OSM ದೋಷ ಪತ್ತೆ ಹಚ್ಚಿದ 18ರ ಬಾಲಕನೊಂದಿಗೆ ರಾಹುಲ್ ಮಾತುಕತೆ: ಸಾರ್ಥಕ್ ಸಿದ್ಧಾಂತ್ ಹೇಳುವುದೇನು?

Date:

ಸಿಬಿಎಸ್‌ಇಯ ಒಪನ್ ಸ್ಟ್ರೀಟ್ ಮ್ಯಾಪ್ (OSM) ವ್ಯವಸ್ಥೆಯಲ್ಲಿದ್ದ ಗಂಭೀರ ದೋಷವೊಂದನ್ನು ಪತ್ತೆಹಚ್ಚಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ 18 ವರ್ಷದ ಬಾಲಕ ಸಾರ್ಥಕ್ ಸಿದ್ದಾಂತ್ ಜತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಈ ವಿಡಿಯೋವನ್ನು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

- Advertisement -

“ಸಾರ್ಥಕ್‌ಗೆ 18 ವರ್ಷ ವಯಸ್ಸು. ಆದರೆ ಮನಸ್ಥಿತಿ, ಧೈರ್ಯ ಮತ್ತು ತತ್ವಗಳ ವಿಷಯದಲ್ಲಿ, ಅವನು ಯಾರಿಗೂ ಕಡಿಮೆಯಿಲ್ಲ. ಅವನು ಮತ್ತು ಅವನ ಸ್ನೇಹಿತ ನಿಸರ್ಗ್, ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ತನಿಖಾ ಪತ್ರಕರ್ತರಿಂದ ಮಾಡಲು ಸಾಧ್ಯವಾಗದ್ದನ್ನು ಸಾಧಿಸಿದ್ದಾರೆ. ಅವರು CBSE ಮತ್ತು COEMPT ನಡುವಿನ ಒಪ್ಪಂದವನ್ನು ರಾಷ್ಟ್ರಕ್ಕೆ ಬಹಿರಂಗಪಡಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಇದನ್ನು ಓದಿದ್ದೀರಾ? ಉತ್ತರ ಪತ್ರಿಕೆ ವಿವಾದದ ಬೆನ್ನಲ್ಲೇ ಸೈಬರ್ ದಾಳಿ: ಯಾವುದೇ ಡೇಟಾ ಕಳವಾಗಿಲ್ಲ ಎಂದ CBSC

“ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರು ಪ್ರಶ್ನೆಗಳನ್ನು ಕೇಳದೆ ಅಥವಾ ಕಣ್ಣು ತೆರೆದು ವಾಸ್ತವವನ್ನು ನೋಡದೆ ಬರೀ ರೀಲ್ಸ್‌ಗಳನ್ನು ಮಾಡುತ್ತಾ, ಪಕೋಡಾ (ಬಜ್ಜಿ) ತಯಾರಿಸುವುದನ್ನು ಮುಂದುವರೆಸಬೇಕು ಎಂದು ಬಯಸುತ್ತಾರೆ. ಆದರೆ ಈ ಯುವಕರು ಪ್ರಶ್ನೆಗಳನ್ನು ಕೇಳಿದ್ದಾರೆ. ಉತ್ತರವನ್ನು ಕೂಡಾ ಅವರೇ ಕಂಡುಕೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

“ದೇಶದ 18 ವರ್ಷದ ಬಾಲಕನೊಬ್ಬ ಸಿಬಿಐಗಿಂತ ವೇಗವಾಗಿ ಮತ್ತು ತೀಕ್ಷ್ಣವಾಗಿದ್ದಾನೆ ಎಂಬುದು ಸಾಬೀತಾಗಿದೆ. ಯುವಕರ ಈ ಗೆಲುವು, ನಿಜವಾದ ಅರ್ಥದಲ್ಲಿ, ಸರ್ಕಾರದ ಸೋಲು. ಇದು ಭಾರತದ ನಿಜವಾದ ಯುವ ಶಕ್ತಿ. ನೆನಪಿಡಿ, ದೇಶದ ಭವಿಷ್ಯವನ್ನು ದಾರಿ ತಪ್ಪಿಸಲಾಗದು” ಎಂದಿದ್ದಾರೆ.

ರಾಹುಲ್ ಜತೆ ಮಾತುಕತೆ ವೇಳೆ ಸಾರ್ಥಕ್ ಸಿದ್ಧಾಂತ್ ಹೇಳಿದ್ದೇನು?

ಮಾತುಕತೆ ವೇಳೆ ಸಾರ್ಥಕ್ ಬಳಿ ರಾಹುಲ್ ಗಾಂಧಿ “ಸಿಬಿಎಸ್‌ಇಯ ಆನ್‌-ಸ್ಕ್ರೀನ್ ಮಾರ್ಕಿಂಗ್ ಟೆಂಡರ್ ಪ್ರಕ್ರಿಯೆಯಲ್ಲಿ ಇಷ್ಟೊಂದು ಗಂಭೀರ ಅಕ್ರಮಗಳು ಮತ್ತು ಲೋಪದೋಷಗಳು ನಡೆದಿವೆ ಎಂಬುದನ್ನು ನೀನು ಹೇಗೆ ಪತ್ತೆಹಚ್ಚಿದೆ? ದೇಶದ ಇಷ್ಟು ದೊಡ್ಡ ತನಿಖಾ ಸಂಸ್ಥೆಗಳು ಅಥವಾ ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ತಿಳಿಯದ ವಿಷಯ ನಿನಗೆ ಹೇಗೆ ತಿಳಿಯಿತು” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಾರ್ಥಕ್, “ನಾನು ಕೇಂದ್ರ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ನಲ್ಲಿ (Central Public Procurement Portal) ಸಿಬಿಎಸ್‌ಇ ಹೊರಡಿಸಿದ ಸರಣಿ ಟೆಂಡರ್ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಅಲ್ಲಿ ನಿಯಮಗಳನ್ನು ಪದೇ ಪದೇ ಹೇಗೆ ಬದಲಾಯಿಸಲಾಯಿತು ಮತ್ತು ನಿರ್ದಿಷ್ಟ ಕಂಪನಿಗೆ (Coempt Edutech) ಅನುಕೂಲ ಮಾಡಿಕೊಡಲು ಹೇಗೆ ಮಾನದಂಡಗಳನ್ನು ಮಾರ್ಪಡಿಸಲಾಯಿತು ಎಂಬುದನ್ನು ನಾನು ಪತ್ತೆಹಚ್ಚಿದೆ. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಗಂಭೀರ ವ್ಯತ್ಯಾಸಗಳು ಇರುವುದನ್ನು ಕಂಡುಹಿಡಿದು, ಅದನ್ನು ನನ್ನ ಬ್ಲಾಗ್‌ನಲ್ಲಿ ವಿವರವಾಗಿ ಬರೆದಿದ್ದೆ” ಎಂದು ಹೇಳಿದ್ದಾರೆ.

“ನಾನು ಈ ಸಂಶೋಧನೆಯನ್ನು ನಿಸರ್ಗ್ ಅಧಿಕಾರಿ (ಎಥಿಕಲ್ ಹ್ಯಾಕರ್) ಅವರ ಜೊತೆಗೂಡಿ ಮಾಡಿದೆ. ಅವರು ನನಗೆ ಮೊದಲು ಈ ಕಂಪನಿಯ ಬಗ್ಗೆ ಮಾಹಿತಿ ನೀಡಿದರು. ನಂತರ ನನಗೆ ಇದರಲ್ಲಿ ಆಸಕ್ತಿ ಮೂಡಿ, ಸ್ವಂತವಾಗಿ ಮಾಹಿತಿಯನ್ನು ಕಲೆಹಾಕಿ ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದೆ. ಇದೊಂದು ಸಾಮೂಹಿಕ ಪ್ರಯತ್ನವಾಗಿದೆ. ಸಿಬಿಎಸ್‌ಇ ಈ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತದೆ ಮತ್ತು ಟೆಂಡರ್ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರುತ್ತದೆ ಎಂಬ ಭರವಸೆ ನನಗಿದೆ. ತಂತ್ರಜ್ಞಾನದ ಬದಲಾವಣೆ (OSM) ಒಳ್ಳೆಯದೇ, ಆದರೆ ಅದನ್ನು ಸರಿಯಾದ ಪ್ರಾಯೋಗಿಕ ಪರೀಕ್ಷೆಗಳ ನಂತರವೇ ಜಾರಿಗೆ ತರಬೇಕಿತ್ತು” ಎಂದಿದ್ದಾರೆ.

ಈ ವೇಳೆ ಮಾಧ್ಯಮಗಳ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದೂ ಸಾರ್ಥಕ್ ಹೇಳಿದ್ದಾರೆ. “ನಾನು ಇಂದಿನ ಮಾಧ್ಯಮಗಳು ಗಂಭೀರ ಹಗರಣಗಳು ಮತ್ತು ತಾಂತ್ರಿಕ ಲೋಪಗಳನ್ನು ಜನರೆದುರು ತರುತ್ತಾರೆ ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ಇಂತಹ ವಿಷಯಗಳನ್ನು ತನಿಖೆ ಮಾಡುವ ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿಯೇ ನಾನು ಸ್ವತಂತ್ರವಾಗಿ ಬ್ಲಾಗ್ ಬರೆಯಬೇಕಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮಟ್ಟ ಕುಸಿಯುತ್ತಿರುವುದನ್ನು ಸಾರ್ಥಕ್ ಪ್ರಸ್ತಾಪಿಸಿದ್ದಾರೆ. “ಮಾಧ್ಯಮಗಳು ಸ್ವತಂತ್ರವಾಗಿ ಪ್ರಶ್ನೆಗಳನ್ನು ಕೇಳದಿದ್ದರೆ ಅಥವಾ ತನಿಖೆ ಮಾಡದಿದ್ದರೆ ಪ್ರಜಾಪ್ರಭುತ್ವಕ್ಕೆ ತೊಂದರೆ” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. “ದೊಡ್ಡ ಮಾಧ್ಯಮಗಳನ್ನು ನಂಬುವ ಬದಲು, ಸತ್ಯವನ್ನು ಹೊರಹಾಕಲು ಶ್ರಮಿಸುತ್ತಿರುವ ಕೆಲವು ‘ಸ್ವತಂತ್ರ ಪತ್ರಕರ್ತರು’ ಮತ್ತು ಡಿಜಿಟಲ್ ಮಾಧ್ಯಮಗಳೇ ಇಂದಿನ ದಿನಗಳಲ್ಲಿ ನೈಜ ತನಿಖಾ ಪತ್ರಿಕೋದ್ಯಮವನ್ನು ಜೀವಂತವಾಗಿಟ್ಟಿದ್ದಾರೆ” ಎಂದು ಸಾರ್ಥಕ್ ಅಭಿಪ್ರಾಯಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...