ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರೊಪಗಂಡಗಳ ವಿರುದ್ಧ ಟೊಂಕಕಟ್ಟಿ ನಿಲ್ಲುವ ಮೂಲಕ ದೇಶಾದ್ಯಂತ ಸುದ್ದಿಯಲ್ಲಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಯವರು ಇತ್ತೀಚೆಗಷ್ಟೇ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಧ್ರುವ್ ರಾಠಿಯವರು ಇತ್ತೀಚೆಗೆ ತಮ್ಮ ಪ್ರಮುಖ ಹಿಂದಿ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಿದ್ದ ‘DICTATORSHIP Confirmed? ಎಂಬ ವೀಡಿಯೋವೊಂದು ಭಾರೀ ವೈರಲ್ ಆಗಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ವಿಪಕ್ಷಗಳ ನಡುವಿನ ಹಲವು ವಿಚಾರಗಳಿಗೆ ಸ್ಪಷ್ಟ ರೂಪವನ್ನು ಈ ವೀಡಿಯೊ ನೀಡಿತ್ತು.
ವಿಡಿಯೋದಲ್ಲಿ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆ ಗೆಲ್ಲಲು ವಿಪಕ್ಷಗಳನ್ನು ಹೇಗೆ ಕಟ್ಟಿ ಹಾಕಿದೆ? ಉನ್ನತ ತನಿಖಾ ಸಂಸ್ಥೆಗಳನ್ನು ಹೇಗೆ ದುರ್ಬಳಕೆ ಮಾಡಿದೆ ಎನ್ನುವ ಬಗ್ಗೆ ದಾಖಲೆ ಸಹಿತವಾಗಿ ವಿವರಿಸಿದ್ದರು. ಅಲ್ಲದೇ, ಆ ವೀಡೀಯೋದ ಕೊನೆಯಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಯಲು ಪ್ರತಿಯೊಬ್ಬ ಪ್ರಜೆಗೆ ನನ್ನ ಸಂದೇಶವನ್ನು ತಲುಪಿಸಿ ಎಂದು ಕರೆ ನೀಡಿದ್ದರು.
ಧ್ರುವ್ ರಾಠಿ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ನ ಕಾರ್ಯಕರ್ತನೋರ್ವ, ಏಕಾಂಗಿಯಾಗಿ ತನ್ನಿಂದಾದ ಕೆಲಸ ಮಾಡುತ್ತಿದ್ದಾನೆ.
ಉತ್ತರ ಭಾರತದ ಕಾಂಗ್ರೆಸ್ ಕಾರ್ಯಕರ್ತ ಗಗನ್ ಜೋಶಿ ಎಂಬಾತ ಕಳೆದ 15 ದಿನಗಳಿಂದ ವಿವಿಧ ನಗರ ಹಾಗೂ ಹಳ್ಳಿಗಳಿಗೆ ತನ್ನ ಕಾರಿನಲ್ಲಿ ತೆರಳುತ್ತಾ, ಪ್ರೊಜೆಕ್ಟರ್ ಹಾಗೂ ಪಿಪಿಟಿ ಪರದೆ ಬಳಸಿಕೊಂಡು ಧ್ರುವ್ ರಾಠಿಯವರ 24 ನಿಮಿಷದ ವೀಡಿಯೋವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ಉಳಿಸಿ, ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕಿ ಎಂದು ಕರೆ ನೀಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಧ್ರುವ್ ರಾಠಿಯವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕಿರುವ ಗಗನ್ ಜೋಶಿ, “ಧ್ರುವ್ ರಾಠಿಯವರೇ, ನಾನು ನಿಮ್ಮ ವೀಡಿಯೊಗಳನ್ನು ಈ ರೀತಿ ಬಳಸಿದ್ದೇನೆ. ಕಾಂಗ್ರೆಸ್‌ಗಾಗಿ ನನ್ನ ಏಕಾಂಗಿ ಪ್ರಚಾರ ಇದು. ಕಳೆದ 15 ದಿನಗಳಿಂದ ಪ್ರೊಜೆಕ್ಟರ್ ಬಳಸಿಕೊಂಡು ಸಾರ್ವಜನಿಕರಿಗೆ ಪ್ರದರ್ಶಿಸುತ್ತಿದ್ದೇನೆ. ವಿಷಯಕ್ಕಿಂತ ಹೇಳಬಯಸುವ ವಿಷಯದ ನಿರೂಪಣೆ ಮುಖ್ಯ. ನಿಮ್ಮ ಕೆಲಸ ಅದ್ಭುತವಾದದ್ದು. ಅದಕ್ಕಾಗಿ ಧನ್ಯವಾದಗಳು.” ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನು ಸ್ವತಃ ಧ್ರುವ್ ರಾಠಿ ಕೂಡ ರೀಟ್ವೀಟ್ ಮಾಡಿಕೊಂಡಿದ್ದಾರೆ. ಆ ಬಳಿಕ ಗಗನ್ ಹಾಕಿರುವ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.
dear @dhruv_rathee this is how I used your videos. For 15 days during my solo campaign for congress. Thanks, your work is excellent. Narration is more important than content.
@Jairam_Ramesh @RahulGandhi @SupriyaShrinate @INCIndia pic.twitter.com/4j2ARa4s8V
— Gagan Joshi (@joshigaganG) April 20, 2024
ಗಗನ್ ಜೋಶಿಯವರ ಈ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಳ್ಳೆಯ ಆಲೋಚನೆ ಇದು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ನಿಮ್ಮ ಈ ಕಾರ್ಯ ಮುಂದುವರಿಸಿಕೊಂಡು ಹೋಗಿ ಎಂದು ಹಾರೈಸಿದ್ದಲ್ಲದೇ, ”ಎಲ್ಲ ಕಡೆ ಈ ರೀತಿಯ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ” ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
‘DICTATORSHIP’ ವೀಡಿಯೋದಲ್ಲಿ ಯೂಟ್ಯೂಬರ್ ಧ್ರುವ್ ರಾಠಿ, ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಬ್ಲಾಕ್ ಮಾಡಿರುವುದು, ನರೇಂದಅವರನ್ನು ತಡೆಯಲು ಬಿಜೆಪಿ ಏನೇನು ಮಾಡಿದೆ. ಎಲೆಕ್ಷನ್ ಬಾಂಡ್‌ಗಳು ರಾಜಕೀಯ ನಾಯಕರ ಬಂಧನಕ್ಕೆ ಹೇಗೆ ಕಾರಣವಾಗಿದೆ ಎನ್ನುವುದನ್ನು ಸಾಕಷ್ಟು ಆಧಾರಗಳೊಂದಿಗೆ ತಮ್ಮ ಪ್ರಮುಖ ಹಿಂದಿ ಚಾನೆಲ್‌ನಲ್ಲಿ ವಿವರಿಸಿದ್ದರು.
Launching in 5 Indian Languages today!
Share with your friends from these states! The most important video is already live on these channels.
Tamil-https://t.co/iIAY46UONr
Telugu- https://t.co/uHUFmMWOY2
Bengali-https://t.co/Ps41JJ8VuC
Kannada-https://t.co/UTgIvoU8bf… pic.twitter.com/vuKfLctR8h
— Dhruv Rathee (@dhruv_rathee) April 18, 2024
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸದ್ಯ ಜರ್ಮನಿಯಿಂದ ವಾಪಸ್ ಭಾರತಕ್ಕೆ ಆಗಮಿಸಿರುವ ಧ್ರುವ್ ರಾಠಿ, ಬಿಜೆಪಿ ಹರಡುತ್ತಿರುವ ನಿರಂತರ ಸುಳ್ಳುಗಳ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.
ಕನ್ನಡ ಸೇರಿ 5 ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ಧ್ರುವ್ ರಾಠಿ
‘ಮಿಷನ್ 100 ಕೋಟಿ’ ಎಂಬ ಯೋಜನೆಯನ್ನು ಘೋಷಿಸಿದ್ದ ಧ್ರುವ್ ರಾಠಿ, ಎಐ ತಂತ್ರಜ್ಞಾನ ಬಳಸಿಕೊಂಡು ಇತ್ತೀಚೆಗಷ್ಟೇ ಕನ್ನಡ ಸೇರಿ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಈ ಬಗ್ಗೆ ಏಪ್ರಿಲ್ 18ರಂದು ಟ್ವೀಟ್ ಮಾಡಿದ್ದ ಹರ್ಯಾಣ ಮೂಲದ ರಾಠಿ, “ತಮಿಳು, ತೆಲುಗು, ಬೆಂಗಾಳಿ, ಕನ್ನಡ, ಮರಾಠಿ ಸೇರಿ ಇಂದು 5 ಭಾರತೀಯ ಭಾಷೆಗಳಲ್ಲಿ ನನ್ನ ವಿಡಿಯೋ ಬಿಡುಗಡೆಯಾಗಿದೆ. ಈ ರಾಜ್ಯಗಳ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರಮುಖ ವೀಡಿಯೊ ಈಗಾಗಲೇ ಈ ಚಾನಲ್‌ಗಳಲ್ಲಿ ಲೈವ್ ಆಗಿದೆ” ಎಂದು ತಿಳಿಸಿದ್ದರು.
