ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು. ಅವರ ವಿರುದ್ಧ ಮಿಲಿಟರಿ ಬಲವನ್ನು ತೋರಿದರೆ ನಮ್ಮ ದೇಶಕ್ಕೆ ಅಣುಬಾಂಬ್ ಹಾಕುತ್ತಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಎಚ್ಚರಿಕೆ ನೀಡಿದ್ದಾರೆ.
“ಅವರ ಬಳಿ ಅಣು ಬಾಂಬ್‌ಗಳಿವೆ. ನಮ್ಮ ಬಳಿಯೂ ಇದೆ. ಹುಚ್ಚು ಮನುಷ್ಯ ಲಾಹೋರ್ ಮೇಲೆ ಬಾಂಬ್ ಹಾಕಿದರೆ,ಅದರ ವಿಕಿರಣ ಅಮೃತಸರ ತಲುಪಲು 8 ಸೆಕೆಂಡ್ ಕೂಡ ಬೇಕಿಲ್ಲ”ಎಂದು ಹೇಳಿದರು.
“ನಾವು ಅವರನ್ನು ಗೌರವಿಸಿದರೆ, ಅವರು ಶಾಂತರಾಗುತ್ತಾರೆ. ನಾವು ಅವರನ್ನು ಕೆರಳಿಸಿದರೆ, ಹುಚ್ಚು ಮನುಷ್ಯ ಭಾರತದ ಮೇಲೆ ಬಾಂಬ್ ಹಾಕಲು ನಿರ್ಧರಿಸುತ್ತಾನಲ್ಲವೆ? ಎಂದು ಅಯ್ಯರ್ ಪ್ರಶ್ನಿಸಿದರು.
ಸರ್ಕಾರವು ಇಸ್ಲಾಮಾಬಾದ್‌ನೊಂದಿಗೆ ಮಾತುಕತೆಯೊಂದಿಗೆ ಬಯಸಬೇಕು. ನೆರೆಯ ದೇಶಕ್ಕೆ ಗೌರವ ನೀಡದಿದ್ದರೆ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅಯ್ಯರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ
ನರೇಂದ್ರ ಮೋದಿಯ ಬಗ್ಗೆ ಪ್ರಸ್ತಾಪ ಮಾಡಿದ ಅಯ್ಯರ್, ವಿಶ್ವ ಗುರುವಾಗಲು ಪಾಕಿಸ್ತಾನದೊಂದಿಗೆ ನಮ್ಮ ಸಮಸ್ಯೆಗಳು ಎಷ್ಟೇ ಗಂಭೀರವಾಗಿದ್ದರೂ ಪರವಾಗಿಲ್ಲ,ನಾವು ಅದನ್ನು ಪರಿಹರಿಸುವ ಕಾರ್ಯದಲ್ಲಿ ಮುಂದಾಗಬೇಕು. ಆದರೆ ಕಳೆದ 10 ವರ್ಷಗಳಲ್ಲಿ ಯಾವುದೇ ದೊಡ್ಡ ಕಾರ್ಯಗಳು ನಡೆಯುತ್ತಿಲ್ಲ ಎಂದರು.
ಇತ್ತೀಚಿಗೆ ಚುನಾವಣಾ ಪ್ರಚಾರವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಭಯೋತ್ಪಾದಕ ತಪ್ಪಿಸಿಕೊಂಡು ಹೋಗದಂತೆ ಅವರನ್ನು ಕೊಲ್ಲಲು ನಮ್ಮ ಪಡೆಗಳು ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸುತ್ತವೆ ಎಂದು ಹೇಳಿದ್ದರು. ಇದಕ್ಕೆ ಪಾಕಿಸ್ತಾನ ಪ್ರಚೋದನಕಾರಿ ಹೇಳಿಕೆ ಎಂದು ಪ್ರತಿಕ್ರಿಯೆ ನೀಡಿತ್ತು.
ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಕೂಡ ಮೋದಿ ಹೇಳಿಕೆಯ ಬಗ್ಗೆ ತೀಕ್ಷವಾಗಿ ಪ್ರತಿಕ್ರಯಿಸಿ, ಅವರನ್ನು ಪ್ರಚೋದಿಸಬೇಡಿ. ಅವರು ಬಳೆಯನ್ನು ತೊಟ್ಟುಕೊಂಡಿಲ್ಲ. ಅವರ ಬಳಿಯೂ ಅಣುಬಾಂಬ್ ಇದೆ. ಆ ಅಣುಬಾಂಬ್‌ಗಳು ನಮ್ಮನ್ನು ನಾಶಪಡಿಸಲಿವೆ” ಎಂದಿದ್ದರು.
