ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ಡಾನಾ ಚಂಡಮಾರುತವು ತೀವ್ರಗೊಂಡಿದ್ದು ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯತ್ತ ಸಾಗುತ್ತಿದೆ. ಈ ನಡುವೆ ಒಡಿಶಾ, ಪಶ್ಚಿಮ ಬಂಗಾಳದಾದ್ಯಂತ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ಡಾನಾ ಚಂಡಮಾರುತ ಶುಕ್ರವಾರ (ಅಕ್ಟೋಬರ್ 25) ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಮತ್ತು ಧಮ್ರಾ ಬಂದರಿನ ನಡುವೆ ಭೂಕುಸಿತ ಉಂಟು ಮಾಡುವ ನಿರೀಕ್ಷೆಯಿದೆ. ಗಾಳಿಯ ವೇಗ ಗಂಟೆಗೆ 120 ಕಿಮೀ ತಲುಪುವ ನಿರೀಕ್ಷೆಯಿದೆ. ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಮಳೆ ಅಬ್ಬರ – ಬೆಂಗಳೂರು ತತ್ತರ: ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಈ ಪ್ರದೇಶದ ಮೀನುಗಾರರು ನೀರಿಗೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಇನ್ನು ಈಗಾಗಲೇ ಹಲವು ರೈಲುಗಳು ಮತ್ತು ವಿಮಾನಗಳನ್ನು ರದ್ದು ಮಾಡಿದೆ. ಅಕ್ಟೋಬರ್ 23 ಮತ್ತು 25ರ ನಡುವೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ ತಲುಪುವ ನಿರೀಕ್ಷೆಯಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಒಡಿಶಾ ಮತ್ತು ಪಶ್ಚಿಮ ಬಂಗಾಳ ಎರಡರಲ್ಲೂ 56 ತಂಡಗಳನ್ನು ನಿಯೋಜಿಸಿದೆ. ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ಗಳು ತಮ್ಮ ರಕ್ಷಣಾ ಮತ್ತು ಪರಿಹಾರ ಘಟಕಗಳನ್ನು ಸಿದ್ಧಪಡಿಸಿವೆ.
ಸಹಾಯವಾಣಿ ಬಿಡುಗಡೆ
ಪಶ್ಚಿಮ ಬಂಗಾಳ ಮತ್ತು ಒಡಿಶಾ ಎರಡೂ ತುರ್ತು ಸಂಪರ್ಕ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಚಂಡಮಾರುತಕ್ಕೆ ಪ್ರತಿಕ್ರಿಯೆಯಾಗಿ, ಪಶ್ಚಿಮ ಬಂಗಾಳದ ರಾಜಭವನವು 033-22001641 ಫೋನ್ ಸಂಖ್ಯೆ ಬಿಡುಗಡೆ ಮಾಡಿದೆ. danarajbhavan@gmail.comಗೆ ಇಮೇಲ್ ಮಾಡಬಹುದು.
