ವರ್ಷದ ಮೊದಲ ಪ್ರಮುಖ ಚಂಡಮಾರುತವಾದ ರೆಮಲ್ ಚಂಡಮಾರುತ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 16 ಜನರ ಸಾವಿಗೆ ಕಾರಣವಾಗಿದೆ. ಕರಾವಳಿ ತೀರದಲ್ಲಿ ಅಪ್ಪಳಿಸಿದ ಈ ಚಂಡಮಾರುತದಿಂದಾಗಿ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಲಕ್ಷಾಂತರ ಮನೆಗಳಿಗೆ ವಿದ್ಯುತ್ ಕಡಿತ ಮಾಡಲಾಗಿದೆ.
“ಬಾಂಗ್ಲಾದೇಶದಲ್ಲಿ ಈವರೆಗೆ ಕನಿಷ್ಠ 10 ಜನರು ರೆಮಲ್ ಚಂಡಮಾರುತದಿಂದಾಗಿ ಸಾವನ್ನಪ್ಪಿದ್ದಾರೆ” ಎಂದು ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಮೊಹಿಬುರ್ ರೆಹಮಾನ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
Cyclone Remal has killed at least 16 people in India and southern Bangladesh, bringing 110 km/h winds, heavy rain, and tidal surges. Nearly a million people were evacuated, and 8.4 million were in its path. The cyclone affected 3.75 million people, destroyed 35,483 homes, and… pic.twitter.com/fPCIR5vFrh
— Volcaholic 🌋 (@volcaholic1) May 27, 2024
ಮೃತರಲ್ಲಿ ಕೆಲವರು ನೀರಿನಲ್ಲು ಮುಳುಗಿ ಸಾವನ್ನಪ್ಪಿದರೆ, ಇನ್ನು ಕೆಲವರು ಮನೆ ಕುಸಿದು, ಗೋಡೆ ಕುಸಿದು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಬಾಂಗ್ಲಾದೇಶದಲ್ಲಿ ಭೋಲಾ ಮತ್ತು ಬಾರಿಸಾಲ್ ಜಿಲ್ಲೆಗಳಲ್ಲಿ ಮೂವರು ಮತ್ತು ಸತ್ಖಿರಾ, ಖುಲ್ನಾ, ಚಿತ್ತಗಾಂಗ್ ಮತ್ತು ಪಟುಖಾಲಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ರೆಮಲ್ ಚಂಡಮಾರುತಕ್ಕೆ ಕೋಲ್ಕತ್ತಾದಲ್ಲಿ ಓರ್ವ ಬಲಿ, ಬಂಗಾಳದಲ್ಲಿ ಭಾರೀ ಹಾನಿ
ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ, ನಾಲ್ಕು ಜನರು ವಿದ್ಯುದಾಘಾತದಿಂದಾಗಿ ಸಾವನ್ನಪ್ಪಿದ್ದು ಒಟ್ಟು ಮೃತರ ಸಂಖ್ಯೆಯು ಆರಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಉಭಯ ರಾಷ್ಟ್ರಗಳಲ್ಲಿ ಸುಮಾರು ಒಂದು ಮಿಲಿಯನ್ ಜನರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಬಾಂಗ್ಲಾದೇಶದಲ್ಲಿ ಸುಮಾರು 800,000 ಮತ್ತು ಭಾರತದಲ್ಲಿ ಸರಿಸುಮಾರು 110,000 ಜನರನ್ನು ಸ್ಥಳಾಂತರಿಸಲಾಗಿದೆ.
The North East has been battered by Cyclone Remal. Multiple landslides across Manipur, Mizoram, Assam, Meghalaya. At least 16 dead, many more injured. Road connectivity disrupted, power supply in Lower Assam, including Guwahati, completely disrupted. (No deaths below incident) pic.twitter.com/dVv5LddoEq
— Sukrita Baruah (@BaruahSukrita) May 28, 2024
ಇನ್ನು ಚಂಡಮಾರುತದ ವೇಳೆ ವಿದ್ಯುತ್ ಅವಘಡವನ್ನು ತಪ್ಪಿಸಲು ಬಾಂಗ್ಲಾದೇಶದ ಅಧಿಕಾರಿಗಳು ಮುಂಚಿತವಾಗಿ ಅನೇಕ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರು. ಆದರೆ ಕೆಲವೆಡೆ ವಿದ್ಯುತ್ ಸಂಪರ್ಕವಿದ್ದರೂ ಕೂಡಾ ಮರ ಬಿದ್ದು ವಿದ್ಯುತ್ ಪೂರೈಕೆಗೆ ಅಡ್ಡಿಯಾಗಿದೆ ಎಂದು ವಿದ್ಯುತ್ ಸಚಿವಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಮಿಜೋರಾಂ, ಅಸ್ಸಾಂನಲ್ಲಿ 16 ಮಂದಿ ಸಾವು
ರೆಮಲ್ ಚಂಡಮಾರುತದಿಂದಾಗಿ ಮಿಜೋರಾಂನಲ್ಲಿ ಸುಮಾರು 15 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಕಾರ್ಮಿಕರು ಕಲ್ಲಿನ ಕ್ವಾರೆ ಕುಸಿತದಲ್ಲಿ ಸಿಲುಕಿ ಬಿದಿದ್ದಾರೆ ಎಂದು ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಮಾಹಿತಿ ನೀಡಿದ್ದಾರೆ. ಇನ್ನು ಸರ್ಕಾರವು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.
ಇದನ್ನು ಓದಿದ್ದೀರಾ? ರೆಮಲ್ ಚಂಡಮಾರುತದಿಂದ ಭೂಕುಸಿತ: ಬಂಗಾಳದಲ್ಲಿ ಒಂದು ಲಕ್ಷ ಜನರ ಸ್ಥಳಾಂತರ
ಇನ್ನು ಅಸ್ಸಾಂನಲ್ಲಿ ರೆವಲ್ ಚಂಡಮಾರುತದಿಂದ ಭಾರೀ ಮಳೆ ಸುರಿದಿದ್ದು 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಕೌಶಿಕ್ ಬರ್ದೊಲಾಯಿ ಎಂಬ ಬಾಲಕ ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಗಾಳಿ ಮಳೆಗೆ ಮರ ಬಿದ್ದು ಸಾವನ್ನಪ್ಪಿದ್ದಾನೆ. ಇನ್ನೂ ನಾಲ್ಕು ವಾಹನಗಳಿಗೆ ಹಾನಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.