ಕೇಂದ್ರ ನಿಯಂತ್ರಣ ಹೊಂದಿರುವ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆಯನ್ನು 30 ರೂ. ಕಡಿಮೆ ಮಾಡಿದ್ದು, ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.
ನೂತನ ದರಗಳಂತೆ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1676 ರೂ. ಬದಲಿಗೆ 1646 ರೂ.ಗಳಿಗೆ ದೊರಕಲಿದೆ. ಅದೇ ರೀತಿ ಮುಂಬೈನಲ್ಲಿ 1798 ರೂ. ಬೆಲೆಯ ಸಿಲಿಂಡರ್ 1756 ರೂ.ಗಳಿಗೆ ಲಭ್ಯವಾಗಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ವಾಮೀಜಿಗಳಿಗೆ ಈ ಭಂಡತನ ಬಂದದ್ದಾದರೂ ಎಲ್ಲಿಂದ?
14.2 ಕೆಜಿಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗೃಹ ಬಳಕೆಗೆ ಬಳಸುವ ಸಿಲಿಂಡರ್ ದೆಹಲಿಯಲ್ಲಿ 803 ರೂ. ಕೋಲ್ಕತ್ತಾದಲ್ಲಿ 829 ರೂ., ಚೆನ್ನೈನಲ್ಲಿ 818.50 ರೂ. ಹಾಗೂ ಮುಂಬೈನಲ್ಲಿ 802.50 ರೂ.ಗಳಿಗೆ ಸಿಗಲಿದೆ.
ಕೇಂದ್ರ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ), ಭರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ(ಬಿಪಿಸಿಎಲ್) ಪ್ರತಿ ತಿಂಗಳು ಅಂತಾರಾಷ್ಟ್ರೀಯ ತೈಲ ಬೆಲೆ ಹಾಗೂ ವಿದೇಶಿ ವಿನಿಮಯ ದರಗಳ ಬೆಲೆಗಳ ಸರಾಸರಿ ಆಧಾರದ ಮೇಲೆ ಪ್ರತಿ ತಿಂಗಳು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕೃತಗೊಳಿಸುತ್ತವೆ.
