ಸತತ ಮೂರನೇ ವರ್ಷ ದೇಶದಲ್ಲಿ ಜೂನ್ ತಿಂಗಳ ಮಳೆಯ ಪ್ರಮಾಣವು ಸರಾಸರಿಗಿಂತ ಕಡಿಮೆಯಾಗಿದೆ. 2020ರಿಂದ ಜೂನ್ ಮಳೆ ಪ್ರಮಾಣ ಇಳಿಕೆಯಾಗುತ್ತಿದೆ. ನಿಖರವಾಗಿ ಒಂದು ತಿಂಗಳ ಹಿಂದೆ ಮಾನ್ಸೂನ್ ಆರಂಭವಾಗಿದ್ದು ಭಾರತದಲ್ಲಿ ಒಟ್ಟಾಗಿ 147.2 ಮಿಮೀ ಮಳೆ ಸುರಿದಿದೆ. ಇದು ಸಾಮಾನ್ಯಕ್ಕಿಂತ ಶೇಕಡ 11ರಷ್ಟು ಕಡಿಮೆಯಾಗಿದೆ.
ಇದು ಆರಂಭದ ತಿಂಗಳಾಗಿರುವ ಕಾರಣ ಮಾನ್ಸೂನ್ ಇಡೀ ಭಾರತದಲ್ಲಿರದು ಮತ್ತು ಸ್ವಲ್ಪ ಮಳೆಯ ಕೊರತೆ ಸಾಮಾನ್ಯವಾಗಿದೆ. ಜೂನ್ ಮಳೆಯು ದೇಶದ ಒಟ್ಟು ನೈಋತ್ಯ ಮಾನ್ಸೂನ್ ಕಾಲೋಚಿತ ಮಳೆ 880 ಮಿಲಿ ಮೀಟರ್‌ನ (1971-2020 ಡೇಟಾ) ಶೇಕಡ 15ರಷ್ಟಿದೆ.
ಈ ಸೀಸನ್‌ನಲ್ಲಿ ನೈಋತ್ಯ ಮಾನ್ಸೂನ್ ಮೇ 30ರಂದು ಕೇರಳವನ್ನು ತಲುಪಿದೆ. ಅದಾದ ಬಳಿಕ ಮಹಾರಾಷ್ಟ್ರದವರೆಗೂ ಆವರಿಸಿದೆ. ಮಹಾರಾಷ್ಟ್ರದಲ್ಲಿ ಜೂನ್ 9ರ ಸುಮಾರಿಗೆ ಮಾನ್ಸೂನ್ ಆರಂಭವಾಗಿದೆ. ಅದಾದ ಬಳಿಕ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಆರಂಭಿಸಿದೆ.
ಆದರೆ ಉಳಿದಂತೆ ಹಲವಾರು ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿಯೂ ಭಾರೀ ತಾಪಮಾನ ಏರಿಕೆಯಾಗಿದೆ. ಬಿಸಿ ಗಾಳಿ, ತಾಪಮಾನ ಏರಿಕೆಯಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ| ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ: 7 ಮಂದಿ ಸಾವು; ಆರೆಂಜ್ ಅಲರ್ಟ್ ಘೋಷಣೆ
ಜೂನ್‌ನಲ್ಲಿ, 17 ರಾಜ್ಯಗಳಿಂದ ಮಳೆಯ ಕೊರತೆಯಾಗಿದೆ. ಆದರೆ 19 ರಾಜ್ಯಗಳಲ್ಲಿ ಸಾಮಾನ್ಯ ಅಥವಾ ಹೆಚ್ಚಿನ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳು ತಿಳಿಸಿವೆ.
ಮುಂದಿನ ಎರಡು ಮೂರು ದಿನಗಳಲ್ಲಿ, ಮಾನ್ಸೂನ್ ತನ್ನ ಸಾಮಾನ್ಯ ದಿನವಾದ ಜುಲೈ 15ರಂದು ಇಡೀ ದೇಶದಲ್ಲಿ ಆವರಿಸುವ ಸಾಧ್ಯತೆಯಿದೆ.
ಇನ್ನು ಭಾರೀ ತಾಪಮಾನ ಏರಿಕೆಯಿಂದ ಜನರು ತತ್ತರಿಸಿದ್ದ ದೆಹಲಿಯಲ್ಲಿ ಭಾರೀ ಮಳೆಯಾಗಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಬಿಹಾರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಜುಲೈ 3 ಮತ್ತು 4ರಂದು ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಐಎಂಡಿ ನೀಡಿದೆ.
All India June rainfall ended with -11% below normal.
In Maharashtra rainfall status (rainfall departure from normal):
Konkan: +1%
Madhya Maharashtra: +10%
Marathwada: +18%
Vidarbha: -16%
Source: IMD
As per forecast All India rain deficiency to be fully whipped out by 7/8 july. pic.twitter.com/dVagplq3Jb— vineet kumar (@vineet_tropmet) June 30, 2024