ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು: ಲೋಕಸಭೆಯಲ್ಲಿ ‘ಶಾಯರಿ’ ಮೂಲಕ ಎನ್‌ಡಿಎ ಕಾಲೆಳೆದ ಅಖಿಲೇಶ್

Date:

Advertisements

ನಿನ್ನೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ, ವಿಪಕ್ಷ ನಾಯಕನಾದ ಬಳಿಕ ಮಾಡಿದ್ದ ಭಾಷಣದ ಮೂಲಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಬ್ಬರಿಸಿದ ಬಳಿಕ ಇಂದು(ಜುಲೈ 2) ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲುಣಿಸಿದ್ದನ್ನು ‘ಶಾಯರಿ(ಕಾವ್ಯ)’ಯ ಮೂಲಕ ಬಿಜೆಪಿಗರ ಕಾಲೆಳೆದಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೂಡ ವಾಗ್ದಾಳಿ ನಡೆಸಲು ಕೂಡ ಅಖಿಲೇಶ್ ಯಾದವ್ ‘ಶಾಯರಿ’ ಮೂಲಕವೇ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದ ಕನೌಜ್‌ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಮಾಜಿ ಸಿಎಂ ಅಖಿಲೇಶ್ ಯಾದವ್, ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.

Advertisements

ಲೋಕಸಭಾ ಚುನಾವಣೆಯಲ್ಲಿ ಜನರು ತಮ್ಮ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಉತ್ತರ ಪ್ರದೇಶದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಧನ್ಯವಾದ ಸಮರ್ಪಣೆಯ ವೇಳೆ, “ಸಮಾಜವಾದಿ ಪಕ್ಷ ಅದ್ಭುತ ಪ್ರದರ್ಶನವನ್ನು ನೀಡಿತು. ಅಯೋಧ್ಯೆ ದೇವಸ್ಥಾನ ವ್ಯಾಪ್ತಿಯ ಫೈಜಾಬಾದ್ ಲೋಕಸಭಾ ಕ್ಷೇತ್ರದ ಗೆಲುವು ಅದರಲ್ಲೂ ವಿಶೇಷವಾಗಿತ್ತು. ಅಯೋಧ್ಯೆಯ ವಿಜಯವು ಭಾರತದ ಪ್ರಬುದ್ಧ ಮತದಾರರ ವಿಜಯವಾಗಿದೆ” ಎಂದು ಉಲ್ಲೇಖಿಸಿದರು.

ರಾಮಮಂದಿರವನ್ನು ನಿರ್ಮಿಸಿದಾಗಿನಿಂದ ಈ ಚುನಾವಣೆಯಲ್ಲಿ ದೊಡ್ಡ ಚರ್ಚೆಯ ಕೇಂದ್ರಬಿಂದುವಾಗಿದ್ದ ಅಯೋಧ್ಯೆಯು ಫೈಜಾಬಾದ್ ಕ್ಷೇತ್ರದ ಭಾಗವಾಗಿದೆ. ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ 50,000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ವಿರುದ್ಧ ಗೆದ್ದಿದ್ದರು.

ಈ ವರ್ಷದ ಆರಂಭದಲ್ಲಿ, ಉತ್ತರ ಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಯಾದವ್, “ರಾಮ ಮಂದಿರ ಉದ್ಘಾಟನೆಯ ಎಲ್ಲ ವ್ಯವಸ್ಥೆಗಳನ್ನು ಆದಿತ್ಯನಾಥ್ ಅವರು ಮೇಲ್ವಿಚಾರಣೆ ನೋಡಿಕೊಂಡಿದ್ದರು. ಆದರೆ ಕೆಂಪು ಕಾರ್ಪೆಟ್‌ನಲ್ಲಿ ಅವರಿಗೆ ನಡೆದಾಡಲು ಅವಕಾಶ ಸಿಗಲಿಲ್ಲ” ಎಂದು ಹೇಳಿದ್ದರು. ಏಕೆಂದರೆ, ಎಲ್ಲರ ಗಮನವು ಪ್ರಧಾನಿ ನರೇಂದ್ರ ಮೋದಿಯವರ ಮೇಲಿತ್ತು ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.

ಈಗ ಸಂಸದರಾಗಿರುವ ಅಖಿಲೇಶ್ ಯಾದವ್, ತನ್ನ ಚುನಾವಣಾ ಪ್ರಚಾರದಲ್ಲಿ ರಾಮ ಮಂದಿರವನ್ನು ಪ್ರದರ್ಶಿಸಿದರೂ ಫೈಜಾಬಾದ್ ಸ್ಥಾನವನ್ನು ಕಳೆದುಕೊಂಡಿದ್ದಕ್ಕಾಗಿ ಬಿಜೆಪಿಯನ್ನು ಕೆಣಕಲು ಇಂದು ಶಾಯರಿಯನ್ನು ಮತ್ತೆ ನೆನಪಿಸಿದರು.

“ಕೆಲವು ವಿಷಯಗಳು ಸಮಯವನ್ನು ಮೀರಿದೆ, ಹಾಗಾಗಿ ಯುಪಿ ಅಸೆಂಬ್ಲಿಯಲ್ಲಿ ಓದಿದ ‘ಶಾಯರಿ’ಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದು ಆಗ ಸೂಕ್ತವಾಗಿತ್ತು, ಈಗ ಇನ್ನೂ ಹೆಚ್ಚು” ಎಂದು ಯಾದವ್ ಶಾಯರಿಯನ್ನು ಪುನರಾವರ್ತಿಸುವ ಮೊದಲು ಹೇಳಿದರು. ಶಾಯರಿ ಓದುವ ವೇಳೆ ಎರಡೆರಡು ಬಾರಿ ಫೈಜಾಬಾದ್ ಸಂಸದ(ಅಯೋಧ್ಯೆ)ರಾದ ಅವಧೇಶ್ ಪ್ರಸಾದ್ ಎದ್ದು ನಿಂತು ನಮಸ್ಕರಿಸಿದರು.

‘ಶಾಯರಿ’ ಮುಗಿಯುತ್ತಿದ್ದಂತೆಯೇ, ಯಾದವ್ ಅವರು ತಮ್ಮ ಪಕ್ಷದ ಸಹೋದ್ಯೋಗಿ ಮತ್ತು ಫೈಜಾಬಾದ್ ಸಂಸದರಾದ ಅವಧೇಶ್ ಪ್ರಸಾದ್ ಭುಜ ತಟ್ಟಿದರು.

ಅಖಿಲೇಶ್ ಯಾದವ್ ಅವರ ಶಾಯರಿಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X