ದೆಹಲಿಯ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಎಎಪಿ ಪಕ್ಷ ಇಂದು ತನ್ನ ಶಾಸಕರ ತುರ್ತು ಸಭೆ ಕರೆದಿದೆ.
ಮೂಲಗಳ ಪ್ರಕಾರ, ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಚರ್ಚೆ ನಡೆಯಲಿದೆ. ಸದ್ಯ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ಹಗರಣದಲ್ಲಿ ಸೆರೆಮನೆಯಲ್ಲಿದ್ದು, ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ನೂತನ ಮುಖ್ಯಮಂತ್ರಿಯನ್ನು ಹೆಸರಿಸುವ ಸಾಧ್ಯತೆಯಿದೆ.
ಮುಂದಿನ ವರ್ಷದ(2025) ಜನವರಿಯಲ್ಲಿ ದೆಹಲಿ ವಿದಾನಸಭೆ ಚುನಾವಣೆಗಳು ನಡೆಯುವ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ಪರಿಗಣಿಸುವ ಸಂಭವವಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?
ದೆಹಲಿಯ ಲೋಕಸಭೆ ಚುನಾವಣೆಯಲ್ಲಿ ಎಎಪಿ – ಕಾಂಗ್ರೆಸ್ ಮೈತ್ರಿಯ ಹೊರತಾಗಿಯೂ 7 ಕ್ಷೇತ್ರಗಳಲ್ಲಿ ಹೀನಾಯ ಸೋಲು ಕಂಡ ನಂತರ ಈ ಬೆಳವಣಿಗೆ ನಡೆದಿದೆ.
ಎಎಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಬ್ಬರದ ಪ್ರಚಾರ ನಡೆಸಿದ ನಂತರವೂ ಎಎಪಿ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಎಲ್ಲ 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿತ್ತು.
ದೆಹಲಿಯಲ್ಲಿ 7 ಸ್ಥಾನ ಗಳಿಸಿದರೂ ಬಿಜೆಪಿಯ ಮತಗಳಿಕೆಯ ಪ್ರಮಾಣ ಕುಸಿದಿದೆ. 2019ರ ಚುನಾವಣೆಯಲ್ಲಿ 2 ಲಕ್ಷದಿಂದ 5 ಲಕ್ಷಗಳವರೆಗೆ ಇದ್ದ ಗೆಲುವಿನ ಅಂತರ ಈ ಬಾರಿ ಒಂದು ಲಕ್ಷಕ್ಕೆ ಕುಸಿದಿದೆ. ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ 2 ಲಕ್ಷ ದಾಟಿದೆ.
