ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರು ಗುರುವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಪ್ರಮಾಣವಚನ ಸ್ವೀಕರಿಸಿರುವ ಸಂದರ್ಭದಲ್ಲಿಯೇ ಅವರ ಹಳೆಯದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೇಖಾ ಗುಪ್ತಾ ಅವರು ದೆಹಲಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿರುವ ವಿಡಿಯೋ ಅದಾಗಿದ್ದು, ಗೂಂಡಾಗಿರಿ ಮಾಡುವವರು ಈಗ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ 2023ರ ಘಟನೆಯದ್ದು. ವಿಡಿಯೋದಲ್ಲಿ; ದೆಹಲಿ ಪಾಲಿಕೆಯಲ್ಲಿ ರೇಖಾ ಗುಪ್ತಾ ಅವರು ವೇದಿಕೆ ಮೇಲೆ ನುಗ್ಗಿ, ಟೇಬಲ್ಅನ್ನು ತಳ್ಳಿ, ಮೈಕ್ ಅನ್ನು ಕಿತ್ತು, ಟೇಬಲ್ಗೆ ಬಡಿಯುತ್ತಿರುವುದು ಸೆರೆಯಾಗಿದೆ.
2023ರಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆದಿತ್ತು. ರಹಸ್ಯ ಮತದಾನದ ಸಮಯದಲ್ಲಿ ಕೌನ್ಸಿಲರ್ಗಳು ತಮ್ಮ ಮೊಬೈಲ್ಗಳ ಮೂಲಕ ಮತಪತ್ರಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆ ವೇಳೆ, ರೇಖಾ ಗುಪ್ತಾ ಮತ್ತು ಇತರರು ವೇದಿಕೆಗೆ ನುಗ್ಗಿ, ಅಲ್ಲಿದ್ದ ಟೇಬಲ್ ಮತ್ತು ಮೈಕ್ಅನ್ನು ಧ್ವಂಸಗೊಳಿಸಿದ್ದರು. ಬಿಜೆಪಿಯ ಅಮಿತ್ ನಾಗ್ಪಾಲ್ ಎಂಬವರು ಮತಪತ್ರವನ್ನು ಹರಿದು ಮತಪೆಟ್ಟಿಗೆಯನ್ನು ಎಸೆದಿದ್ದಾರೆ. ರೇಖಾ ಅವರು ಸೇರಿದಂತೆ ಬಿಜೆಪಿಗರು ಗೂಂಡಾಗಿರಿ ಮೆರೆದಿದ್ದರು.
ये है दिल्ली की नई मुख्यमंत्री ! pic.twitter.com/wzlYewaqfF
— Surbhi Maradiya (@SurabhiMaradiya) February 19, 2025
ಎಎನ್ಐ ವರದಿಗಳ ಪ್ರಕಾರ, ಈ ಘಟನೆಯ ಸಂದರ್ಭದಲ್ಲಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್ಗಳು ಜಗಳವಾಡಿಕೊಂಡಿದ್ದರು. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್ಗಳ ಗದ್ದಲದಿಂದಾಗಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸದನವನ್ನು ಮುಂದೂಡಿತ್ತು.
ಘಟನೆಯ ವಿಡಿಯೋವನ್ನು ಆ ಸಂದರ್ಭದಲ್ಲಿ ಹಂಚಿಕೊಂಡಿದ್ದ ಎಎಪಿ, “ಸೋಲಿನ ಹತಾಶೆಯಿಂದ ರೇಖಾ ಗುಪ್ತಾ ಪಾಲಿಕೆಯೊಳಗೆ ಗೂಂಡಾಗಿರಿ ನಡೆಸಿದ್ದಾರೆ” ಎಂದು ಆರೋಪಿಸಿತ್ತು.
BJP Mayor Candidate @gupta_rekha की हार की बौखलाहट देखिये‼️
— Aam Aadmi Party- Uttar Pradesh (@AAPUttarPradesh) February 23, 2023
Supreme Court के निर्णय के बावजूद, पूरी रात सदन में
▪️हंगामा किया
▪️तोड़फोड़ की
▪️मारपीट और गुंडागर्दी की
और Standing Committee का Election नहीं होने दिया pic.twitter.com/sPvKBRqWgL
“ಬಿಜೆಪಿ ಮೇಯರ್ ಅಭ್ಯರ್ಥಿ ರೇಖಾ ಗುಪ್ತ ಅವರ ಸೋಲಿನ ನಂತರ ಅವರ ಹತಾಶೆಯನ್ನು ನೋಡಿ. ಸುಪ್ರೀಂ ಕೋರ್ಟ್ನ ತೀರ್ಪಿನ ಹೊರತಾಗಿಯೂ, ರಾತ್ರಿಯಿಡೀ ಸದನದಲ್ಲಿ ಗದ್ದಲ ನಡೆಯಿತು. ಧ್ವಂಸಗೊಳಿಸಲಾಯಿತು. ಹಲ್ಲೆ ಮತ್ತು ಗೂಂಡಾಗಿರಿ ಮತ್ತು ಸ್ಥಾಯಿ ಸಮಿತಿಯ ಚುನಾವಣೆ ನಡೆಯಲು ಅವಕಾಶ ನೀಡಲಾಗಿಲ್ಲ.” ಎಂದು ಎಎಪಿ 2023ರಲ್ಲಿ ಟ್ವೀಟ್ ಮಾಡಿತ್ತು.