ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

Date:

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ ಮೇಲೆ ದೆಹಲಿ ಪೊಲೀಸ್ ಸೇರಿದಂತೆ ಭದ್ರತಾ ಪಡೆಗಳು ನಡೆಸುತ್ತಿರುವ ಅಮಾನವೀಯ ಹಲ್ಲೆ ಮತ್ತು ದಬ್ಬಾಳಿಕೆ ಮಿತಿಮೀರಿದೆ. ಕರ್ತವ್ಯ ನಿರತ ಮಾಧ್ಯಮ ಸಿಬ್ಬಂದಿಯ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವುದಲ್ಲದೆ, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೃತ್ಯಗಳು ಮುಂದುವರಿದಿವೆ. ಈ ಗಂಭೀರ ಬೆಳವಣಿಗೆಯ ಹಿನ್ನೆಲೆಯಲ್ಲಿ, ಪತ್ರಕರ್ತರ ಸುರಕ್ಷತೆ, ವೃತ್ತಿಪರ ನಡವಳಿಕೆ ಹಾಗೂ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಉತ್ತಮ ಸಮನ್ವಯ ಸಾಧಿಸುವ ಸಲುವಾಗಿ ಭಾರತೀಯ ಪ್ರೆಸ್ ಕೌನ್ಸಿಲ್ (PCI) ಮಹತ್ವದ ‘ಮಾರ್ಗಸೂಚಿ’ಯನ್ನು ಪ್ರಕಟಿಸಿದೆ.

- Advertisement -

ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತರು ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಪಿಸಿಐ ಹೇಳಿದೆ. ಪಿಸಿಐನ ಮಾರ್ಗಸೂಚಿಗಳು ಹೀಗಿವೆ;

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಪ್ರಯಾಣಿಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಭಯದ...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...
  • ಪತ್ರಕರ್ತರು ತಮ್ಮ ಮಾಧ್ಯಮ ಸಂಸ್ಥೆಗಳು ನೀಡಿರುವ ಅಧಿಕೃತ ಗುರುತಿನ ಚೀಟಿ ಅಥವಾ ಪಿಐಬಿ/ಡಿಐಪಿ ಮಾನ್ಯತಾ ಪತ್ರಗಳನ್ನು ಕಡ್ಡಾಯವಾಗಿ ಧರಿಸಿರಬೇಕು.
  • ಜನಸಂದಣಿ ಅಥವಾ ನೂಕುನುಗ್ಗಲಿನಲ್ಲಿ ಸಿಲುಕಿಕೊಳ್ಳದಂತೆ ಲನ್ಯಾರ್ಡ್‌ಗಳನ್ನು ಭದ್ರವಾಗಿ ಧರಿಸಿಕೊಳ್ಳಬೇಕು.
  • ಪೊಲೀಸರು ಅಥವಾ ಭದ್ರತಾ ಸಿಬ್ಬಂದಿ ವಿಚಾರಿಸಿದಾಗ ತಾವು ಪತ್ರಕರ್ತರು ಎಂದು ಶಾಂತವಾಗಿ ಮತ್ತು ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು.
  • ಪ್ರತಿಭಟನಾಕಾರರು ಅಥವಾ ಪೊಲೀಸರ ನಡುವಿನ ಸಂಘರ್ಷದಲ್ಲಿ ಯಾವುದೇ ಪಕ್ಷ ವಹಿಸದೆ, ಸಂಪೂರ್ಣ ತಟಸ್ಥತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕು.
  • ಪ್ರತಿಭಟನೆಗಳ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಪೊಲೀಸರ ಕಾನೂನುಬದ್ಧ ಸೂಚನೆಗಳನ್ನು ಗೌರವಿಸಬೇಕು,
  •  ಪೊಲೀಸರ ಬ್ಯಾರಿಕೇಡ್‌ಗಳಿಗೆ ಕ್ಯಾಮೆರಾ ಅಥವಾ ರೆಕಾರ್ಡಿಂಗ್ ಉಪಕರಣಗಳನ್ನು ಅಡ್ಡವಾಗುವಂತೆ ಲಗತ್ತಿಸಬಾರದು.
  • ಅಶ್ರುವಾಯು ಸಿಲಿಂಡರ್‌ಗಳು ಅಥವಾ ಫ್ಲ್ಯಾಶ್-ಬ್ಯಾಂಗ್ ಸಾಧನಗಳನ್ನು ಯಾರೂ ಮುಟ್ಟಬಾರದು ಅಥವಾ ಸ್ಥಳಾಂತರಿಸಲು ಪ್ರಯತ್ನಿಸಬಾರದು

ಅಲ್ಲದೆ, ಪತ್ರಿಕಾ ಸಿಬ್ಬಂದಿ ತುರ್ತು ಸಂದರ್ಭಗಳಿಗಾಗಿ ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ, ಕುಡಿಯುವ ನೀರು, ಪ್ರೊಟೀನ್ ಸ್ನ್ಯಾಕ್ಸ್, ಟಾರ್ಚ್, ಕೈಟ್ವಾಲ್ ಮತ್ತು ಕಣ್ಣಿನ ರಕ್ಷಣೆಗಾಗಿ ಗಾಗಲ್ಸ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ಯುವಂತೆಯೂ ಎಚ್ಚರಿಕೆ ನೀಡಲಾಗಿದೆ.

ಪತ್ರಕರ್ತರ ಮೇಲಿನ ದಾಳಿಗೆ ದೆಹಲಿ ಹಿರಿಯ ಪತ್ರಕರ್ತರ ಸಂಘ (DSJA) ತೀವ್ರ ಆಕ್ರೋಶ

ದೆಹಲಿಯ ಜಂತರ್ ಮಂತರ್ ಮತ್ತು ಕನಾಟ್ ಪ್ಲೇಸ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತರು ಸೇರಿದಂತೆ ಮಾಧ್ಯಮ ಸಿಬ್ಬಂದಿಯ ಮೇಲೆ ದೆಹಲಿ ಪೊಲೀಸ್ ಮತ್ತು ಭದ್ರತಾ ಪಡೆಗಳು ನಡೆಸುತ್ತಿರುವ ದೈಹಿಕ ಹಲ್ಲೆ ಮತ್ತು ಬಲಪ್ರಯೋಗವು ಅಕ್ಷಮ್ಯ ಅಪರಾಧವಾಗಿದೆ ಎಂದು ‘ದೆಹಲಿ ಹಿರಿಯ ಪತ್ರಕರ್ತರ ಸಂಘ’ (DSJA) ತೀವ್ರವಾಗಿ ಖಂಡಿಸಿದೆ.

ಸಾರ್ವಜನಿಕ ಪ್ರದರ್ಶನಗಳು ಮತ್ತು ಪ್ರತಿಭಟನೆಗಳನ್ನು ವರದಿ ಮಾಡುವಾಗ ಯಾವುದೇ ವೃತ್ತಿಪರರಿಗೆ ಅಡ್ಡಿಪಡಿಸಬಾರದು ಎಂದು ಅಕ್ಟೋಬರ್ 11ರಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ದೆಹಲಿ ಪೊಲೀಸರು ಅದನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ.

ಪತ್ರಕರ್ತರ ಬಳಿ ಸ್ಪಷ್ಟವಾಗಿ ಪ್ರೆಸ್ ಕಾರ್ಡ್ ಇದ್ದರೂ ಅವರನ್ನು ಬಲವಂತವಾಗಿ ವಶಕ್ಕೆ ಪಡೆದು, ವರದಿಗಾರಿಕೆಗೆ ಬಳಸುತ್ತಿದ್ದ ಮೊಬೈಲ್ ಫೋನ್‌ಗಳು ಮತ್ತು ಉಪಕರಣಗಳನ್ನು ಕಸಿದುಕೊಳ್ಳಲಾಗಿದೆ. ಅಕ್ಟೋಬರ್ 16ರಂದು ನಡೆದ ‘ತಿರಂಗಾ ಮಾರ್ಚ್‌’ನ ಸಂದರ್ಭದಲ್ಲೂ ಪತ್ರಕರ್ತರ ಮೇಲೆ ಪೊಲೀಸರ ಹಲ್ಲೆಗಳು ನಿರಂತರವಾಗಿ ಮುಂದುವರಿದಿವೆ. ಇದು ನೇರವಾಗಿ ನ್ಯಾಯಾಂಗ ನಿಂದನೆ ಆಗಿದೆ ಎಂದು ಸಂಘ ಹೇಳಿದೆ.

ಸಂವಿಧಾನದ ವಿಧಿ 21 (ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ) ಹಾಗೂ ವಿಧಿ 19(1)(ಎ ಮತ್ತು ಜಿ) (ವಾಕ್ ಸ್ವಾತಂತ್ರ್ಯ ಮತ್ತು ಯಾವುದೇ ತಡೆರಹಿತ ವೃತ್ತಿ ಆಚರಣೆಯ ಹಕ್ಕು) ನೀಡಿರುವ ಮೂಲಭೂತ ಹಕ್ಕುಗಳನ್ನು ಯೂನಿಫಾರ್ಮ್ ಧರಿಸಿದ ಪಡೆಗಳು ಮೊಟಕುಗೊಳಿಸುತ್ತಿವೆ ಎಂದು ಸಂಘ ಖಂಡಿಸಿದೆ.

ಪೊಲೀಸರು ವಶಕ್ಕೆ ಪಡೆದಿರುವ ಮಾಧ್ಯಮ ಸಿಬ್ಬಂದಿಯನ್ನು ತಕ್ಷಣ ಬಿಡುಗಡೆ ಮಾಡಬೇಕು, ಕಸಿದುಕೊಂಡಿರುವ ಉಪಕರಣಗಳನ್ನು ಮರಳಿಸಬೇಕು ಹಾಗೂ ತಪ್ಪಿತಸ್ಥ ಭದ್ರತಾ ಸಿಬ್ಬಂದಿಯ ವಿರುದ್ಧ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕೆಂದು ಸಂಘವು ನ್ಯಾಯಾಲಯವನ್ನು ಆಗ್ರಹಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ

ಅನುಮತಿಯಿಲ್ಲದೆ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ...

ಬೀದರ್‌ | ಮರಣಾನಂತರ ದೇಹದಾನಕ್ಕೆ ಮುಂದಾದ ಮೂವರು ಶಿಕ್ಷಕರು, ಸಾಹಿತಿ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ...

ಒಂದೇ ಕುಟುಂಬದ ಐವರು ಶವವಾಗಿ ಪತ್ತೆ; ವಿಷಾಹಾರ ಸೇವಿಸಿದ ಶಂಕೆ

ಒಂದೇ ಕುಟುಂಬದ ಐವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ...

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...