ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ ಸುರಕ್ಷತೆಗೆ ಬೇಕಿದೆ ತುರ್ತು ಕ್ರಮ

Date:

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು ಪ್ರಯಾಣಿಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಶಿವಮೊಗ್ಗದ ಹೃದಯ ಭಾಗ ವಿದ್ಯಾನಗರ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣ ಅವ್ಯವಸ್ಥೆಯ ಕೂಪವಾಗಿದೆ. ಇದೊಂದು ತುಂಬಾ ಹಳೆಯ ರೈಲ್ವೆ ನಿಲ್ದಾಣವಾಗಿದ್ದು, ದಿನ ನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿ ಬಂದು ರೈಲು ಹತ್ತುವುದು ಹಾಗೂ ಇಳಿಯುವುದು ಮಾಡುತ್ತಾರೆ. ಆದರೆ ಇಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

- Advertisement -

ಈ ಸಂಬಂಧ ಆಟೋ ಚಾಲಕರೊಬ್ಬರೂ ವಿಡಿಯೋ ಹರಿ ಬಿಟ್ಟಿದ್ದಾರೆ ಅದರಂತೆ ಅವರ ಆರೋಪಗಳು ಇಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದಾಗಿದೆ. ಶೌಚಾಲಯ ಹೆಸರಿಗಿದೆ ಆದರೆ ಅದಕ್ಕೆ ಬಾಗಿಲು ಹಾಕಿಕೊಳ್ಳಲು ಚಿಲಕದ ವ್ಯವಸ್ಥೆಯಿಲ್ಲ ಮತ್ತು ಸಣ್ಣ ಬಕೆಟ್ ಇದೆ ಸರಿಯಾಗಿ ವ್ಯವಸ್ಥೆಯಿಲ್ಲ ಜೊತೆಗೆ ಪ್ರತಿನಿತ್ಯ ಕಳ್ಳತನಗಳು ಸರ್ವೇ ಸಾಮಾನ್ಯವಾಗಿದೆ ಎಂದು ದೂರಿದ್ದಾರೆ. ಮತ್ತು ಅನೈತಿಕ ಚಟುವಟಿಕೆ, ಗಾಂಜಾ ಇದು ಕೂಡ ಪ್ರತಿನಿತ್ಯ ಸಾಮಾನ್ಯವಾಗಿದೆ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದೊಂದು ನಿರ್ಜನ ಪ್ರದೇಶವಂತೆ ಭಾಸವಾಗುತ್ತೆ. ಹಗಲು ಹೊತ್ತಲ್ಲೇ ಇಷ್ಟೋಂದು ಅವ್ಯವಸ್ಥೆ ರಾತ್ರಿ ವೇಳೆ ಪ್ರಯಾಣಿಕರ ಪಾಡೆನು? ಎಂದು ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದಾರೆ. ಜನರಿಗೆ ಭಯ ಉಂಟಾಗುವ ವಾತಾವರಣ ಉಂಟಾಗಿದೆ ಈ ಅವ್ಯವಸ್ಥೆಯಿಂದ ಎಂದು ತಿಳಿಸಿದ್ದಾರೆ.

597546 1

ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಂದ ಪೆಟ್ರೋಲ್ ಡೀಸೆಲ್ ಕಳ್ಳತನ ಮಾಡುತ್ತಾರೆ, ದ್ವಿಚಕ್ರ ವಾಹನ ಕಳ್ಳತನ ಆಗುತ್ತಿದೆ ಇಲ್ಲಿ ಒಂದು ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ವ್ಯವಸ್ಥೆ ಕೂಡ ಇಲ್ಲದಾಗಿದೆ. ಹಾಗಾಗಿ ಸಾರ್ವಜನಿಕರು, ಪ್ರಯಾಣಿಕರು ಭಯ ಭೀತಾರಾಗಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಇತ್ತ ಕಡೆ ಗಮನಹರಿಸುವ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ವಿನಯ್ ಕುಮಾರ್ ಮಹಾದೇವಿ ಟಾಕೀಸ್ ಆಟೋ ಸ್ಟಾಂಡ್ ಮೂಲಕ ಮಾಹಿತಿ ತಿಳಿಸಿದ್ದಾರೆ. ತೀವ್ರ ತರ ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ.

ಈ ಬಗ್ಗೆ ಈದಿನ.ಕಾಮ್‌ ಜೊತೆಗೆ ಮಾತನಾಡಿದ ಪ್ರಯಾಣಿಕರಾದ ದೀಪಕ್, “ಶಿವಮೊಗ್ಗಕ್ಕೆ ರಾತ್ರಿ ವೇಳೆಯಲ್ಲಿ ಬಂದು ಇಳಿಯುವ ಪ್ರಯಾಣಿಕರಿಗೆ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಯಾವದೋ ಏಜನ್ಸಿಗಳಿಗೆ ನಿರ್ವಹಣಾ ಕಾರ್ಯ ವಹಿಸಿರಬೇಕು ಹಾಗಾಗಿ ಅಸಮರ್ಪಕ ವ್ಯವಸ್ಥೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

597544 1

ನಾವು ಶಿವಮೊಗ್ಗ ಬಂದು ಇಳಿದೇವ ಅಥವಾ ಯಾವದಾದ್ರು ನಿರ್ಜನ ಕಾಡಲ್ಲಿ ಬಂದು ಇಳಿದಿದ್ದೆವ? ಅಂತ ಒಮ್ಮೆ ಪರೀಕ್ಷೆ ಮಾಡಿಕೊಳ್ಳುವ ವಾತಾವರಣ ಸೃಷ್ಟಿಯಾಗತ್ತೆ ಎಂದು ಆತಂಕ ವ್ಯಕ್ತಪಡಿಸಿದರು. ಸುರಕ್ಷಿತವೆ ಇಲ್ಲದಂತೆ ಆಗಿದೆ ಎಂದು ಹಾಗೂ ಮಹಿಳಾ ಪ್ರಯಾಣಿಕರಿಗೆ ಇದು ಸುರಕ್ಷಿತವಿಲ್ಲಾದಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನವಹಿಸಿ ಸೂಕ್ತ ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಹೆಸರು ಹೇಳಲು ಮಹಿಳಾ ಪ್ರಯಾಣಿಕರು ಈದಿನ.ಕಾಮ್‌ ಜೊತೆಗೆ ಮಾತನಾಡಿ, “ಇಲ್ಲಿ ಅಸಭ್ಯವಾಗಿ ವರ್ತಿಸುವ ಪುಂಡರ ಕಳ್ಳ ಕಾಕರು ಗಾಂಜಾ ವ್ಯಾಸನಿಗಳ ಸಂಖ್ಯೆ ಹೆಚ್ಚಾಗಿದೆ ಹಾಗೂ ಇಲ್ಲಿ ಸಿ ಸಿ ಟಿ ವಿ ವ್ಯವಸ್ಥೆ ಇಲ್ಲ, ರೈಲ್ವೆ ಪೊಲೀಸ್ ಸಿಬ್ಬಂದಿಗಳು ಇರುವುದಿಲ್ಲ ಹಾಗಾಗಿ ಹೆಣ್ಣುಮಕ್ಕಳು ಇಲ್ಲಿ ಬಂದು ರೈಲು ಹಟ್ಟುವುದಕ್ಕೆ ಆಗಲಿ ಇಳಿಯುವುದು ಸುರಕ್ಷಿತವಿಲ್ಲಾ ಜೊತೆಗೆ ಕುಡಿಯುವ ನೀರಿನ ಹಾಗೂ ಶೌಚಾಲಯ ವ್ಯವಸ್ಥೆ ಅವ್ಯವಸ್ಥೆ ಆಗಿರುವುದು ತುಂಬಾ ತೊಂದರೆ ಉಂಟಾಗಿದೆ” ಎಂದು ಸಮಸ್ಯೆ ಹೇಳಿಕೊಂಡರು.

597539

ಇನ್ನು ಶಿವಮೊಗ್ಗ ರೈಲ್ವೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಇನ್ನು ಈ ಬಗ್ಗೆ ಶಿವಮೊಗ್ಗ ರೈಲ್ವೆ ಪೊಲೀಸ್ ಅಧಿಕಾರಿಗಳಾದ ನರೇಂದ್ರ ಅವರು ನಮ್ಮ ಮಾಧ್ಯಮದೊಂದಿಗೆ ಮಾತನಾಡಿ, “ಇದು ಮೈಸೂರು ರೈಲ್ವೆ ವಿಭಾಗಕ್ಕೆ ಸೇರಿದೆ ಹಾಗಾಗಿ ಈ ಮಹಾದೇವಿ ಟಾಕೀಸ್ ಬಳಿ ಇರುವ ವಿದ್ಯಾನಗರದ ರೈಲ್ವೆ ನಿಲ್ದಾಣದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದರು ನಮಗೂ ಕೂಡ ಈ ಸಂಬಂಧ ವ್ಯವಸ್ಥೆ ಸರಿ ಆಗಬೇಕು ಎಂಬ ಆಶಯವಿದೆ” ಎಂದು ತಿಳಿಸಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಈ ಸಮಸ್ಯೆಯತ್ತ ಗಮನಹರಿಸಿ, ಪ್ರಯಾಣಿಕರಿಗೆ ಅಗತ್ಯವಿರುವ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬುದು ನಾಗರಿಕರು ಮತ್ತು ಪ್ರಯಾಣಿಕರ ಒತ್ತಾಯವಾಗಿದೆ.

WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ

ಅನುಮತಿಯಿಲ್ಲದೆ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ...

ಬೀದರ್‌ | ಮರಣಾನಂತರ ದೇಹದಾನಕ್ಕೆ ಮುಂದಾದ ಮೂವರು ಶಿಕ್ಷಕರು, ಸಾಹಿತಿ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ...

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...

ಇಂಡಿ |‌ ಜೋಡೆತ್ತು ಕೃಷಿಕರ ಪ್ರತಿಭಟನೆ; ಅಹವಾಲು ಆಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಗಳನ್ನು...