ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ನನ್ನು 2002ರ ಕೊಲೆ ಪ್ರಕರಣವೊಂದರಲ್ಲಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಇಂದು ಖುಲಾಸೆಗೊಳಿಸಿದೆ.
ಡೇರಾದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ರಾಮ್ ರಹೀಮ್ ಹಾಗೂ ಇತರ ನಾಲ್ವರನ್ನು 2021ರಲ್ಲಿ ಜೀವಾವಧಿ ಶಿಕ್ಷೆಗೆ ಒಳಪಡಿಸಿತ್ತು. 56 ವರ್ಷದ ಡೇರಾ ಮುಖ್ಯಸ್ಥ ಸಿಬಿಐ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ.
ವಿವಾದಾತ್ಮಕ ಧರ್ಮ ಗುರು ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಹಾಗೂ ಪತ್ರಕರ್ತ ರಾಮ್ ಚಂದರ್ ಪ್ರಜಾಪತಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಈ ಸುದ್ದಿ ಓದಿದ್ದೀರಾ? ವೇದಿಕೆ ಕುಸಿದರೂ ಧೃತಿಗೆಡದ ರಾಹುಲ್ ಗಾಂಧಿ
ಸಿಬಿಐ ಕೋರ್ಟ್ 2021ರ ಅಕ್ಟೋಬರ್ 18 ರಂದು ರಾಮ್ ರಹೀಮ್ ಹಾಗೂ ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ 31 ಲಕ್ಷ ರೂ. ದಂಡ ವಿಧಿಸಿತ್ತು.
ಸಾಧ್ವಿಗಳಿಬ್ಬರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ರಹೀಮ್ ರೋಟಕ್ನ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಮ್ ರಹೀಮ್ ವಿರುದ್ಧ ಪತ್ರಕರ್ತನ ಹತ್ಯೆಯ ವಿಚಾರಣೆ ಇನ್ನೂ ಬಾಕಿಯಿದೆ.
