ಮದುವೆಯಾಗುವುದಾಗಿ ವರ್ಷಾನುಗಟ್ಟಲೆ ಸುತ್ತಾಡಿ ವಂಚಿಸಿದ್ದ ರಾಜಕಾರಣಿಯೊಬ್ಬನ ಜನನಾಂಗ ವನ್ನು ಮಹಿಳಾ ವೈದ್ಯರೊಬ್ಬರು ಕತ್ತರಿಸಿದ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ವೈದ್ಯೆಯನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಯತ್ನ ಸೇರಿ ಹಲವಾರು ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜನನಾಂಗ ಕತ್ತರಿಕೊಂಡ ರಾಜಕಾರಣಿ ಸರನ್ ಜಿಲ್ಲೆಯ ಮಧುಕರ್ ಬ್ಲಾಕ್‌ನ 12ನೇ ವಾರ್ಡ್‌ನಲ್ಲಿ ನಗರಸಭಾ ಸದಸ್ಯನಾಗಿದ್ದಾನೆ. ಗಾಯಗೊಂಡಿರುವ ರಾಜಕಾರಣಿಯನ್ನು ಪಾಟ್ನಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಆರೋಪಿ ವೈದ್ಯೆಯ ಪ್ರಕಾರ ರಾಜಕಾರಣಿಯು ಮಹಿಳೆಯೊಂದಿಗೆ ಮದುವೆಯಾಗುವುದಾಗಿ ಹೇಳಿ ಐದು ವರ್ಷಗಳಿಂದ ಸಂಬಂಧವಿಟ್ಟುಕೊಂಡಿದ್ದ. ಇತ್ತೀಚಿಗಷ್ಟೆ ರಾಜಕಾರಣಿಯನ್ನು ವೈದ್ಯೆ ಮನವೊಲಿಸಿ ಕೋರ್ಟ್‌ನಲ್ಲಿ ನೋಂದಣಿ ಮದುವೆಗೆ ಒಪ್ಪಿಸಿದ್ದರು. ಮದುವೆಯ ಸಿದ್ಧತೆ ಮಾಡಿಕೊಂಡು ವೈದ್ಯೆಯು ಕೋರ್ಟ್‌ಗೆ ಆಗಮಿಸಿದ್ದರು. ಆದರೆ ರಾಜಕಾರಣಿ ಕೋರ್ಟ್‌ಗೆ ಆಗಮಿಸದೆ ವಂಚಿಸಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ
ಇದಾದ ನಂತರ ವೈದ್ಯೆ ರಾಜಕಾರಣಿಯನ್ನು ತನ್ನ ಮನೆಗೆ ಕರೆಸಿ ಆತನ ಖಾಸಗಿ ಜನನಾಂಗವನ್ನು ಕತ್ತರಿಸಿದ್ದಾರೆ. ರಾಜಕಾರಣಿಯ ಕಿರುಚಾಟವನ್ನು ಕೇಳಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲಿಸರು ಸ್ಥಳಕ್ಕೆ ಆಗಮಿಸಿದಾಗ ಸಂತ್ರಸ್ತ ರಕ್ತದ ಮಡುವಿನಲ್ಲಿ ಮಂಚದ ಮೇಲೆ ಬಿದ್ದಿದ್ದ.
“25 ವರ್ಷದವರಾದ ಅವಿವಾಹಿತ ವೈದ್ಯೆ ಹಾಜಿಪುರದ ನಿವಾಸಿಯಾಗಿದ್ದು, ಮದುರಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕಾರಣಿ ಕೂಡ ಅವಿವಾಹಿತ” ಎಂದು ಸರನ್ ಜಿಲ್ಲೆಯ ಮದುರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
