ಗಂಡಂದಿರ ಮದ್ಯದ ವ್ಯಸನ ಮತ್ತು ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತಿದ್ದ ಇಬ್ಬರು ಮಹಿಳೆಯರು ತಮ್ಮ ಗಂಡಂದಿರನ್ನು ತೊರೆದು, ಪರಸ್ಪರ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಗೋರಖ್‌ಪುರದ ಡಿಯೋರಿಯಾದಲ್ಲಿರುವ ಶಿವನ ದೇವಾಲಯದಲ್ಲಿ (ಚೋಟಿ ಕಾಶಿ) ಕವಿತಾ ಮತ್ತು ಗುಂಜಾ ಎಂಬ ಮಹಿಳೆಯರು ವಿವಾಹವಾಗಿದ್ದಾರೆ.
ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದರು. ತಾವು ಎದುರಿಸುತ್ತಿರುವ ಕೌಂಟುಂಬಿಕ ದೌರ್ಜನ್ಯಗಳ ಬಗ್ಗೆ ಇಬ್ಬರು ಹಂಚಿಕೊಂಡಿದ್ದರು. ತಮ್ಮ ಗಂಡಂದಿರು ಮದ್ಯದ ವ್ಯಸನಕ್ಕೆ ತುತ್ತಾಗಿದ್ದು, ದಿನನಿತ್ಯ ಮನೆಯಲ್ಲಿ ನಡೆಯುತ್ತಿದ್ದ ಕಲಹಗಳ ಬಗ್ಗೆ ಪರಸ್ಪರ ಅಳಲು ತೋಡಿಕೊಳ್ಳುತ್ತಿದ್ದರು. ಪತಿಯರ ದೌರ್ಜನ್ಯದಿಂದ ಬೇಸತ್ತು, ತಮ್ಮ ಪತಿಯರನ್ನು ತೊರೆಯಲು ನಿರ್ಧಿಸಿದ್ದ ಮಹಿಳೆಯರು ಪರಸ್ಪರ ವಿವಾಹವಾಗಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.
“ನಾವಿಬ್ಬರು ನಮ್ಮ ಗಂಡಂದಿರ ಕುಡಿತದ ಚಟ ಮತ್ತು ದೌರ್ಜನ್ಯದಿಂದಾಗಿ ಬೇಸತ್ತು ಹೋಗಿದ್ದೆವು. ಮನೆಯಲ್ಲಿನ ಕೌಟುಂಬಿಕ ದೌರ್ಜನ್ಯವು ನಮ್ಮಿಬ್ಬರ ನಡುವೆ ಶಾಂತಿ ಮತ್ತು ಪ್ರೀತಿಯ ಹುಡುಕಾಟಕ್ಕೆ ಕಾರಣವಾಯಿತು. ನಾವು ನಮ್ಮ ಪತಿಯರನ್ನು ತೊರೆದು, ಇಬ್ಬರೂ ಹೊಸ ಜೀವನ ಆರಂಭಿಸಿದ್ದೇವೆ” ಎಂದು ಗುಂಜಾ ಹೇಳಿದ್ದಾರೆ.

ಕೌಟುಂಬಿಕ ದೌರ್ಜನ್ಯ | ತಮ್ಮ ಪತಿಯರನ್ನು ತೊರೆದು ಪರಸ್ಪರ ವಿವಾಹವಾದ ಮಹಿಳೆಯರು
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: