ಸುಪ್ರೀಂ ಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಫಿಡವಿಟ್ ಸಲ್ಲಿಸಿದ್ದು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಸಮರ್ಥಿಸಿಕೊಂಡಿದೆ. ಕೇಜ್ರಿವಾಲ್ ಅವರ ನಡವಳಿಕೆಯಿಂದಾಗಿ ಅವರ ಬಂಧನದ ಅಗತ್ಯವು ತಿಳಿದು ಬಂದಿದೆ ಎಂದು ಬುಧವಾರ ಸುಪ್ರೀಂ ಕೋರ್ಟ್‌ಗೆ ಇಡಿ ತಿಳಿಸಿದೆ.
ಇಡಿ ತನ್ನ ಬಂಧನ ಮಾಡಿರುವುದನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ಇಡಿ ಅಫಿಡವಿಟ್ ಸಲ್ಲಿಸಿದೆ. ಒಂಬತ್ತು ಸಮನ್ಸ್‌ಗಳ ಹೊರತಾಗಿಯೂ ತನಿಖಾಧಿಕಾರಿಯ ಮುಂದೆ ಹಾಜರಾಗದೆ ಎಎಪಿ ನಾಯಕ ಕೇಜ್ರಿವಾಲ್ ಅವರು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಕೇಂದ್ರ ಸಂಸ್ಥೆ ಆರೋಪಿಸಿದೆ.
Delhi liquor policy case: Enforcement Directorate (ED) has filed an affidavit in the Supreme Court opposing Delhi CM Arvind Kejriwal’s plea against his arrest, saying he did not cooperate with the Central agency despite multiple summons issued to him.
Arvind Kejriwal was… pic.twitter.com/N6rnxulIBd
— ANI (@ANI) April 25, 2024
ಈ ನಡುವೆ ಎಎಪಿ ಅಫಿಡವಿಟ್‌ಗೆ ಪ್ರತಿಕ್ರಿಯಿಸಿದ್ದು ಏಜೆನ್ಸಿಯನ್ನು “ಸುಳ್ಳು ಹೇಳುವ ಯಂತ್ರ” ಎಂದು ಕರೆದಿದೆ. “ಇಡಿ ಸುಳ್ಳನ್ನು ಹೇಳುವ ಯಂತ್ರವಾಗಿ ಮಾರ್ಪಟ್ಟಿದೆ. ಪ್ರತಿ ಬಾರಿಯೂ ಇಡಿ ತಮ್ಮ ಯಜಮಾನರಾದ ಬಿಜೆಪಿಯ ಇಚ್ಛೆಗೆ ತಕ್ಕಂತೆ ಹೊಸ ಸುಳ್ಳುಗಳನ್ನು ಹೊರತರುತ್ತದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಸಕ್ಕರೆ ಪ್ರಮಾಣ ಹೆಚ್ಚಳ: ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ ಎಂದ ತಿಹಾರ್ ಜೈಲಿನ ಅಧಿಕಾರಿ
ಇನ್ನು ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ಅನರ್ಹವಾಗಿದ್ದು ಅದನ್ನು ವಜಾಗೊಳಿಸಿ ಎಂದು ಇಡಿ ಸುಪ್ರೀಂ ಕೋರ್ಟ್ ಮುಂದೆ ಹೇಳಿದೆ. ಹಾಗೆಯೇ ಮೂರು ವಿಭಿನ್ನ ಹಂತಗಳಲ್ಲಿ ಮೂರು ವಿಭಿನ್ನ ನ್ಯಾಯಾಂಗ ಅಧಿಕಾರಿಗಳು (ನ್ಯಾಯಾಲಯಗಳು) ಅರವಿಂದ್ ಕೇಜ್ರಿವಾಲ್ ಬಂಧನ ಮಾಡಬಹುದೇ ಎಂದು ಪರಿಶೀಲಿಸಿದ್ದಾರೆ ಎಂದು ಇಡಿ ಅಫಿಡವಿಟ್‌ನಲ್ಲಿ ಸೇರಿಸಿದೆ.
ದೆಹಲಿ ಸಿಎಂ ಅವರ ಮನವಿಯು ಜಾಮೀನಿನ ಮೇಲೆ ಬಿಡುಗಡೆ ಪಡೆಯುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ ಪ್ರಾಸಿಕ್ಯೂಷನ್ ದೂರು ಇನ್ನೂ ದಾಖಲಾಗದಿದ್ದರೂ ತನಿಖೆಯ ಬಾಕಿ ಇರುವಾಗ ಬಂಧನವನ್ನು ಪ್ರಶ್ನಿಸುವ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮನವಿಯಾಗಿದೆ ಎಂದು ಇಡಿ ವಾದಿಸಿದೆ.
ಇದನ್ನು ಓದಿದ್ದೀರಾ? ‘ನನ್ನ ಪತಿಯ ಹತ್ಯೆಗೆ ಸಂಚು’: ದೆಹಲಿ ಸಚಿವರ ನಂತರ ಕೇಜ್ರಿವಾಲ್ ಪತ್ನಿ ಆರೋಪ
“ಈ ಸಂಬಂಧವಾಗಿ, ಅರ್ಜಿದಾರರನ್ನು ಪ್ರಾಮಾಣಿಕವಾಗಿ ಬಂಧಿಸಲಾಗಿದೆಯೇ ಹೊರತು ಯಾವುದೇ ದುರುದ್ದೇಶ ಅಥವಾ ಬಾಹ್ಯ ಕಾರಣ ಇಲ್ಲ” ಎಂದು ಹೇಳಿರುವ ಇಡಿ ಬಂಧನವು ದುರುದ್ದೇಶಪೂರಿತವಾಗಿದೆ ಎಂಬುವುದನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಅರ್ಜಿದಾರರ ವಾದಗಳು ಮಾತ್ರ ಆಧಾರರಹಿತ. ಅಸ್ಪಷ್ಟವಾಗಿದೆ ಮತ್ತು ನಿರ್ದಿಷ್ಟವಾಗಿಲ್ಲ ಎಂದು ಇಡಿ ಹೇಳಿದೆ.
ಈ ಬಂಧನವು ತನಿಖೆಯ ಭಾಗವಾಗಿದೆ, ತನಿಖೆಯ ಸಮಯದಲ್ಲಿ ಬಂಧನ ಮಾಡುವುದು ತನಿಖಾ ಸಂಸ್ಥೆಗೆ ಬಿಟ್ಟದ್ದು ಎಂದು ಸಂಸ್ಥೆ ಅಫಿಡವಿಟ್‌ನಲ್ಲಿ ತಿಳಿಸಿದೆ. ಅಷ್ಟೇ ಅಲ್ಲ, 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿ (ಕೇಜ್ರಿವಾಲ್) ತಪ್ಪಿತಸ್ಥರಾಗಿದ್ದಾರೆ ಎಂದು ನಂಬಲು ತಮ್ಮ ಬಳಿ ಸಾಕಷ್ಟು ಸಾಕ್ಷಿ ಇದೆ ಎಂದು ಇಡಿ ಹೇಳಿದೆ.