‘ನನ್ನ ಪತಿಯ ಹತ್ಯೆಗೆ ಸಂಚು’: ದೆಹಲಿ ಸಚಿವರ ನಂತರ ಕೇಜ್ರಿವಾಲ್ ಪತ್ನಿ ಆರೋಪ

Date:

ಎಎಪಿ ಸರ್ಕಾರದ ದೆಹಲಿ ಸಚಿವರು ಹಾಗೂ ನಾಯಕರ ನಂತರ ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಕೂಡ ನನ್ನ ಪತಿಯ ಹತ್ಯೆಗೆ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಂಡಿಯಾ ಒಕ್ಕೂಟದ ವತಿಯಿಂದ ರಾಂಚಿಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅರವಿಂದ್‌ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಕೇಜ್ರಿವಾಲ್ ಅವರ ಊಟದ ಬಳಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿ ತುತ್ತು ಸೇವಿಸುವಾಗಲು ಮೇಲ್ವಿಚಾರಣೆಗೊಳಿಸಲಾಗುತ್ತಿದೆ. ಇದು ಅತ್ಯಂತ ನಾಚಿಕೆಗೇಡು. ಇವರು ಸಕ್ಕರೆ ರೋಗಿಯಾಗಿದ್ದು, ಕಳೆದ 12 ವರ್ಷಗಳಿಂದ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಜೈಲಿನಲ್ಲಿ ಇನ್ಸುಲಿನ್ ನೀಡಲು ನಿರಾಕರಿಸಲಾಗುತ್ತಿದೆ. ಅವರು ದೆಹಲಿ ಮುಖ್ಯಮಂತ್ರಿಯನ್ನು ಕೊಲ್ಲಲು ಬಯಸಿದ್ದಾರೆ” ಎಂದರು.

ಕೇಂದ್ರದ ಆಡಳಿತವು ಸರ್ವಾಧಿಕಾರದಿಂದ ಕೂಡಿದ್ದು, ಯಾವುದೇ ಆರೋಪ ಸಾಬೀತಾಗದೆ ದೆಹಲಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಅವರನ್ನು ಜೈಲಿನಲ್ಲಿಡಲಾಗಿದೆ. ನನ್ನ ಪತಿ ಯಾವು ತಪ್ಪು ಮಾಡಿದ್ದಾರೆ. ಒಳ್ಳೆಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸಲಿಲ್ಲವೇ? ಎಂದು ಸುನೀತಾ ಕೇಜ್ರಿವಾಲ್ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ

ಅರವಿಂದ್‌ ಕೇಜ್ರಿವಾಲ್‌ ಅವರು ತಮ್ಮ ಜೀವನವನ್ನು ದೆಹಲಿ ಜನರ ಸೇವೆಗೆ ಮುಡುಪಾಗಿಟ್ಟಿದ್ದಾರೆ. ಇವರು ಐಐಟಿ ಪದವೀಧರವಾಗಿದ್ದು, ಬೇಕಿದ್ದರೆ ವಿದೇಶಕ್ಕೆ ತೆರಳಬಹುದಿತ್ತು, ಆದರೆ ದೇಶಭಕ್ತಿಗೆ ಆದ್ಯತೆ ನೀಡಿದರು. ಐಆರ್‌ಎಸ್‌ ಹುದ್ದೆ ತ್ಯಜಿಸಿ ತಮ್ಮ ಸೇವೆಯನ್ನು ಸಾರ್ವಜನಿಕ ಸೇವೆಗೆ ಮುಡುಪಾಗಿಸಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಪತ್ನಿ ತಿಳಿಸಿದ್ದಾರೆ.

ಅಸ್ತಮ ರೋಗಿಯಾಗಿರುವ ಅವರು ಕಳೆದ 12 ವರ್ಷದಿಂದ ನಿತ್ಯ 50 ಯುನಿಟ್‌ ಇನ್ಸುಲಿನ್ ತೆಗೆದುಕೊಳ್ಳಬೇಕಿದೆ. ಆದರೆ ಜೈಲಿನಲ್ಲಿ ಇನ್ಸುಲಿನ್ ನೀಡುತ್ತಿಲ್ಲ. ಅವರು ದೆಹಲಿ ಮುಖ್ಯಮಂತ್ರಿಯನ್ನು ಕೊಲ್ಲಲು ಬಯಸಿದ್ದಾರೆ. ಅವರು ಕೇಜ್ರಿವಾಲ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡಿಲ್ಲ. ಅವರೊಬ್ಬ ಧೈರ್ಯಶಾಲಿ. ಅವರೊಬ್ಬ ಸಿಂಹ. ಜೈಲಿನಲ್ಲಿದ್ದರೂ ಅವರಿಗೆ ಭಾರತ ಮಾತೆಯ ಬಗ್ಗೆ ಚಿಂತೆ” ಎಂದು ಸುನಿತಾ ಕೇಜ್ರಿವಾಲ್ ಹೇಳಿದರು.

ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 300 ದಾಟಿದ್ದು, ಜೈಲಿನಲ್ಲಿ ಇನ್ಸುಲಿನ್‌ ನೀಡಲು ನಿರಾಕರಿಸಲಾಗುತ್ತಿದೆ ಎಂದು ಎಎಪಿ ಆರೋಪಿಸಿದೆ.

ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಸಂಬಂಧ ಕೇಜ್ರಿವಾಲ್ ಅವರನ್ನು ಮಾ.21ರಂದು ಇ.ಡಿ ಬಂಧಿಸಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ; ನಿಲ್ಲದ ಜನಾಂಗೀಯ ಸಂಘರ್ಷ

ಮಣಿಪುರದ ಮನಸ್ಸುಗಳು ಒಡೆದು ಹೋಗಿವೆ, ಅದಕ್ಕೆ ಕಾರಣಗಳು ಅನೇಕ. ಆಗಿರುವ ಗಾಯಗಳು...

ಪತ್ನಿಯೊಂದಿಗೆ ಅಸ್ವಾಭಾವಿಕ ಸೆಕ್ಸ್‌ – ಒಪ್ಪಿಗೆ ಇಲ್ಲದಿದ್ದರೂ ಅತ್ಯಾಚಾರವಲ್ಲ: ಮಧ್ಯಪ್ರದೇಶ ಹೈಕೋರ್ಟ್‌

"ಪತ್ನಿಗೆ ಒಪ್ಪಿಗೆ ಇಲ್ಲದಿದ್ದರೂ, ಆಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವುದನ್ನು ಅತ್ಯಾಚಾರ ಎಂದು...

ಮೋದಿಯ ಇಂದಿನ ಸುದ್ದಿಗಳು | 370ನೇ ವಿಧಿ ರದ್ದತಿಯಿಂದ ಏಕೀಕೃತ ಭಾರತ ನಿರ್ಮಿಸಿದ್ದಾರಾ ಮೋದಿ?

ಬಾಲಕೋಟ್‌ನಲ್ಲಿ ನಾವು ಬಾಂಬ್ ದಾಳಿ ಮಾಡಿದ್ದೇವೆ ಅಂತ ಕೇಂದ್ರ ಸರ್ಕಾರ ಹೇಳಿತ್ತು....

ಮೋದಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನರೇಂದ್ರ ಮೋದಿಗೆ ಅಧಿಕಾರದ ಅಮಲೇರಿದ್ದು, ಅವರ ಸುತ್ತಲಿನ ಜನರು ಅವರನ್ನು ಕಂಡರೆ...