ಫ್ಯಾಕ್ಟ್‌ಚೆಕ್‌ | ‘SIRನಿಂದಾಗಿ ಬಂಗಾಳ ತೊರೆಯುತ್ತಿರುವ ಅಕ್ರಮ ವಲಸಿಗ’ರೆಂದು ನಕಲಿ ವಿಡಿಯೋ ಹರಿಬಿಟ್ಟ ಸಂಘಿಗಳು!

Date:

ದೋಣಿ ತೀರದಲ್ಲಿ (ಫೆರ್ರಿ ಘಾಟ್) ಜನರು ಸರತಿಯಲ್ಲಿ ನಿಂತಿರುವ ವಿಡಿಯೋವೊಂದನ್ನು ‘ವಿಶೇಷ ತೀವ್ರ ಪರಿಷ್ಕರಣೆ (SIR) ಘೋಷಣೆಯ ನಂತರ ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರು ಹೊರಹೋಗುತ್ತಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅದು ಸತ್ಯವೆಂದು ನಂಬಿರುವ ಹಲವಾರು ನೆಟ್ಟಿಗರು ಅದನ್ನು ಶೇರ್ ಮಾಡುತ್ತಿದ್ದಾರೆ. ಆದರೆ, ಆ ವಿಡಿಯೋಗೂ ಬಂಗಾಳ ಮತ್ತು ಎಸ್‌ಐಆರ್‌ ಪ್ರಕ್ರಿಯೆಗೂ ಯಾವುದೇ ಸಂಬಂಧವೇ ಇಲ್ಲ ಎಂಬುದನ್ನು ಫ್ಯಾಕ್ಟ್‌ಚೆಕ್‌ ಸುದ್ದಿಸಂಸ್ಥೆ ‘BOOM’­ ಪತ್ತೆಹಚ್ಚಿದೆ.

- Advertisement -

ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಬಂಗಾಳದಲ್ಲಿ ಎಸ್‌ಐಆರ್‌ ನಡೆಸಿತು. ಈ ಪ್ರಕ್ರಿಯೆ ನಡೆಯುವಾಗ, ಪಶ್ಚಿಮ ಬಂಗಾಳದ ಬಹುಸಂಖ್ಯಾತ ಜನರು ತಮ್ಮ ಪೌರತ್ವದ ಸ್ಥಿತಿಯ ಬಗ್ಗೆ ಆತಂಕ ಮತ್ತು ಗೊಂದಲಕ್ಕೆ ತುತ್ತಾಗಿದ್ದರು. ರಾಜ್ಯದ ಅಂದಿನ ಆಡಳಿತಾರೂಢ ಟಿಎಂಸಿ, ಎಸ್‌ಐಆರ್ ಪ್ರಕ್ರಿಯೆಯನ್ನು ಬಹಿರಂಗವಾಗಿ ವಿರೋಧಿಸಿತ್ತು. ಈ ಎಸ್‌ಐಆರ್‌ನಿಂದಾಗಿ ಉಂಟಾದ ಭಯದಿಂದಾಗಿ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆದಾಗ್ಯೂ, ಬಂಗಾಳದಲ್ಲಿ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಯನ್ನು ನಡೆಸಿತು ಸುಮಾರು 91 ಲಕ್ಷ ಮಂದಿಯನ್ನು ಮತದಾರರ ಪಟ್ಟಿಯಿಂದ ಹೊರಹಾಕಿತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಗೆದ್ದು, ಬಂಗಾಳದಲ್ಲಿ ಮೊದಲ ಬಾರಿಗೆ ಸರ್ಕಾರವನ್ನೂ ರಚಿಸಿದೆ.

ಇದೆಲ್ಲದರ ನಡುವೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ದೃಢೀಕೃತ (Verified) ‘ಎಕ್ಸ್’ ಖಾತೆಯೊಂದು ಈ ವೀಡಿಯೊವನ್ನು ಹಂಚಿಕೊಂಡಿದೆ. ಅದರ ಶೀರ್ಷಿಕೆಯಲ್ಲಿ; “ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಘೋಷಣೆಯಾಗುತ್ತಿದ್ದಂತೆ ಅಕ್ರಮ ವಲಸಿಗರು ‘ಘರ್ ವಾಪಸಿ’ ಮಾಡುತ್ತಿದ್ದಾರೆ. ಈ ಭಯ ಒಳ್ಳೆಯದೇ. ಅವರು ಚುನಾವಣೆಯ ವೇಳೆಗೆ ವಾಪಸ್ ಬರುವುದಿಲ್ಲವೆಂದು ಭಾವಿಸುತ್ತೇನೆ,” ಎಂದು ಬರೆದುಕೊಂಡಿದೆ.

ಪೋಸ್ಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅದರ ಆರ್ಕೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಲಪಂಥೀಯ ಒಲವುಳ್ಳ ‘Kreately.in‘ ಎಂಬ ಎಕ್ಸ್ ಖಾತೆಯೂ ಸಹ ಇದೇ ರೀತಿಯ ಸುಳ್ಳು ಪ್ರದಿಪಾದನೆಯುಳ್ಳ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ.

ಆ ವಿಡಿಯೋದ ಅಸಲಿಯತ್ತಿನ ಬೆನ್ನತ್ತಿದ ‘ಬೂಮ್’ ಸುದ್ದಿಸಂಸ್ಥೆಯು ಆ ವಿಡಿಯೋ ಬಂಗಾಳದ್ದಿರಲಿ, ಭಾರತದ್ದೇ ಅಲ್ಲ ಎಂಬುದನ್ನು ಪತ್ತೆ ಹಚ್ಚಿದೆ. ಅಸಲಿಗೆ ಆ ವಿಡಿಯೋ ಬಾಂಗ್ಲಾದೇಶದ ಮೊಂಗ್ಲಾ ಪ್ರದೇಶದ್ದಾಗಿದೆ. ಬಾಂಗ್ಲಾದೇಶದ ಸ್ಥಳೀಯ ಪತ್ರಕರ್ತರೊಬ್ಬರನ್ನು ‘ಬೂಮ್’ ಸಂಪರ್ಕಿಸಿದ್ದು, “ವಿಡಿಯೋದಲ್ಲಿನ ದೃಶ್ಯಾವಳಿಯು ಮೊಂಗ್ಲಾದಲ್ಲಿ ಪ್ರತಿದಿನ ಪ್ರಯಾಣಿಸುವ ಸ್ಥಳೀಯರದ್ದಾಗಿದೆ. ಇದಕ್ಕೂ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ. ಜನರು ಬಾಂಗ್ಲಾದೇಶದ ಗಡಿ ದಾಟುತ್ತಿರುವುದನ್ನು ಇದು ತೋರಿಸುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಡಿಯೋದ ಅಸಲಿಯತ್ತನ್ನು ಪತ್ತೆ ಮಾಡಿದ್ದರ ಕುರಿತು ಸುದ್ದಿಸಂಸ್ಥೆಯು ವಿವರಿಸಿದೆ. “ನಾವು ಈ ದೃಶ್ಯಾವಳಿಯ ಪ್ರಮುಖ ಫ್ರೇಮ್‌ಗಳನ್ನು ಬೇರ್ಪಡಿಸಿ, ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆವು. ಈ ಹುಡುಕಾಟದಲ್ಲಿ ಬಾಂಗ್ಲಾದೇಶದ ‘ಇಂಡಿಪೆಂಡೆಂಟ್ ಟೆಲಿವಿಷನ್‘ ಪ್ರಕಟಿಸಿದ ಲೇಖನವೊಂದು ದೊರೆಯಿತು. ಅದರಲ್ಲಿ, ಇದೇ ರೀತಿಯ ಚಿತ್ರವಿತ್ತು. ಆ ಮಾಧ್ಯಮದ ವರದಿಯ ಪ್ರಕಾರ, ಈ ಚಿತ್ರವು ಬಾಂಗ್ಲಾದೇಶದ ಖುಲ್ನಾದ ಮೊಂಗ್ಲಾ ಘಾಟ್‌ನಲ್ಲಿ ಪ್ರತಿದಿನ ಸಂಚರಿಸುವ ಪ್ರಯಾಣಿಕರದ್ದಾಗಿದೆ. ಅಲ್ಲದೆ, ಬಾಂಗ್ಲಾದ ಸುಮಾರು ಎರಡು ಲಕ್ಷ ಪ್ರಯಾಣಿಕರು ಬಳಸುವ ಈ ಫೆರ್ರಿ ಘಾಟ್‌ನ ದುಸ್ಥಿತಿಯ ಬಗ್ಗೆಯೂ ಆ ವರದಿ ಬೆಳಕು ಚೆಲ್ಲಿತ್ತು” ಎಂದು ವಿವರಿಸಿದೆ.

1050761 comparison

“ನಾವು ವೈರಲ್ ಆಗಿರುವ ದೃಶ್ಯಾವಳಿಯ ಪ್ರಮುಖ ಫ್ರೇಮ್‌ಗಳನ್ನು ಈ ಚಿತ್ರದೊಂದಿಗೆ ಹೋಲಿಸಿ ನೋಡಿದಾಗ, ಎರಡೂ ಸಂಪೂರ್ಣವಾಗಿ ಹೊಂದಾಣಿಕೆಯಾಗುವುದು ಕಂಡುಬಂದಿದೆ” ಎಂದು ಬೂಮ್ ಹೇಳಿದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ಮುಂದುವರೆದು, “ಹೆಚ್ಚಿನ ಖಚಿತತೆಗಾಗಿ, ನಾವು ‘ಬಾಂಗ್ಲಾವಿಷನ್ ಟೆಲಿವಿಷನ್’ ವರದಿಗಾರ, ಮೊಂಗ್ಲಾದ ಸ್ಥಳೀಯ ಪತ್ರಕರ್ತ ಮೊಹಮ್ಮದ್ ಜಾಸ್ಮುದ್ದೀನ್ ಅವರನ್ನು ಸಂಪರ್ಕಿಸಿದೆವು. ಅವರು ಈ ವೀಡಿಯೊ ಬಾಂಗ್ಲಾದೇಶದ ಮೊಂಗ್ಲಾದ್ದೇ ಆಗಿದೆ ಎಂಬುದನ್ನು ಖಚಿತಪಡಿಸಿದರು. ಮಾತ್ರವಲ್ಲದೆ, ಇದರಲ್ಲಿ ಯಾರೂ ಬಾಂಗ್ಲಾದೇಶದ ಗಡಿಯನ್ನು ದಾಟುತ್ತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು” ಎಂದು ಹೇಳಿದೆ.

“ಈ ವೀಡಿಯೊ ಮೊಂಗ್ಲಾದ್ದು. ಇದು ಭಾರತ-ಬಾಂಗ್ಲಾ ಗಡಿ ಪ್ರದೇಶವಲ್ಲ. ಹಳೆಯ ಮೊಂಗ್ಲಾದಿಂದ ಇಪಿಝಡ್‌ಗೆ (EPZ – ರಫ್ತು ಸಂಸ್ಕರಣಾ ವಲಯ) ಕೆಲಸಕ್ಕಾಗಿ ಪ್ರಯಾಣಿಸುವ ಮಹಿಳಾ ಕಾರ್ಮಿಕರನ್ನು ಇದು ತೋರಿಸುತ್ತದೆ. ಇಂತಹ ದೃಶ್ಯಗಳು ಇಂದಿಗೂ ಪ್ರತಿ ಬೆಳಗ್ಗೆ ಅಲ್ಲಿ ಕಂಡುಬರುತ್ತವೆ. ಅವರು ಬೆಳಗ್ಗೆ 7:30ಕ್ಕೆ ಕೆಲಸಕ್ಕೆ ಹೊರಟು, ಸಂಜೆ 7:30ಕ್ಕೆ ವಾಪಸ್ ಮರಳುತ್ತಾರೆ,” ಎಂದು ಜಾಸ್ಮುದ್ದೀನ್ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...