ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

Date:

ಕರ್ನಾಟಕದಲ್ಲಿ ಎಸ್‌ಐಆರ್ ಗೊಂದಲದಿಂದ ವೋಟರ್ ಐಡಿ ರದ್ದಾದರೆ, ಮತದಾನದ ಹಕ್ಕು ಕಳೆದುಕೊಳ್ಳುವ ಬಡ ನಾಗರಿಕರು ಪಡಿತರ ಚೀಟಿ, ‘ಶಕ್ತಿ‘ ಮತ್ತು ‘ಗೃಹಲಕ್ಷ್ಮಿ’ ಯೋಜನೆ, ವೃದ್ಧಾಪ್ಯ ಪಿಂಚಣಿ, ವಿಧವಾ ವೇತನದಂತಹ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ.

ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ದುರ್ಬಲ ವರ್ಗದವರ ಧ್ವನಿಯನ್ನು ಅಡಗಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ತಳ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ರಾಜಕೀಯ ಪಿತೂರಿ ನಡೆಯುತ್ತಿದ್ದು, ರಾಜ್ಯದ ಸಾಮಾನ್ಯ ನಾಗರಿಕರು ತಮ್ಮ ಅತ್ಯಂತ ಪವಿತ್ರವಾದ ಮತದಾನದ ಹಕ್ಕು ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ – ಇದು ಎಸ್‌ಐಆರ್ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕಳವಳ.

- Advertisement -

ಡಿ.ಕೆ ಶಿವಕುಮಾರ್ ಅವರು ಈ ಮಾತುಗಳು ಕೇವಲ ಒಂದು ರಾಜಕೀಯ ಹೇಳಿಕೆಯಲ್ಲ. ಮೋದಿ-ಶಾ ಜೋಡಿಯ ಕುತಂತ್ರಗಳಿಗೆ ಕೈಜೋಡಿಸಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್‌)ನಿಂದಾಗುವ ಪರಿಣಾಮಗಳ ಕುರಿತಾದ ಎಚ್ಚರಿಕೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಎಸ್‌ಐಆರ್‌ ಮೂಲಕ ನಕಲಿ ಮತದಾರರನ್ನು ಹೊರಹಾಕುತ್ತೇವೆಂದು ಬಾಯಿ ಮಾತಿಗೆ ಹೇಳುತ್ತಿರುವ ಚುನಾವಣಾ ಆಯೋಗ, ಈವರೆಗೆ 13 ರಾಜ್ಯಗಳಲ್ಲಿ ಸುಮಾರು 5.5 ಕೋಟಿ ನೈಜ ಮತದಾರರನ್ನೇ ಮತಪಟ್ಟಿಯಿಂದ ಹೊರಹಾಕಿದೆ. ಇವರಲ್ಲಿ, ಹೆಚ್ಚಿನವರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರು. ಈ ಬೃಹತ್ ಸಂಖ್ಯೆಯ ಭಾರತೀಯರು ತಮ್ಮ ಅತ್ಯುನ್ನತ ಸಂವಿಧಾನಿಕ ಹಕ್ಕಾದ ‘ಮತದಾನದ ಹಕ್ಕು’ ಕಳೆದುಕೊಂಡಿದ್ದಾರೆ.

ವಿಶೇಷವಾಗಿ, ಬಂಗಾಳದಲ್ಲಿ ಕೃತಕ ಬುದ್ಧಮತ್ತೆ (AI) ಆಧಾರಿತ ‘ಇರೋನೆಟ್’ಸಾಫ್ಟ್‌ವೇರ್ ಬಳಸಿ, ತಾಂತ್ರಿಕ ವ್ಯತ್ಯಾಸದ (Logical Discripency) ಹೆಸರಿನಲ್ಲಿನ ಸಣ್ಣಪುಟ್ಟ ಸ್ಪೆಲ್ಲಿಂಗ್‌ ವ್ಯತ್ಯಾಸಗಳ ಕಾರಣಕ್ಕಾಗಿ ಲಕ್ಷಾಂತರ ಬಡವರು, ಹಿಂದುಳಿದವರು ಹಾಗೂ ಮುಸ್ಲಿಮರನ್ನು ಮತದಾನದಿಂದ ವಂಚಿತಗೊಳಿಸಲಾಗಿದೆ. ಈ ಪ್ರಕ್ರಿಯೆ ಎಷ್ಟು ದಾರ್ಷ್ಟ್ಯದಿಂದ ಕೂಡಿದೆಯೆಂದರೆ, ಭಾರತದ ಹೆಮ್ಮೆಯ ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಿಗೇ ತಮ್ಮ ಪೌರತ್ವವನ್ನು ಸಾಬೀತು ಮಾಡುವಂತೆ ಆಯೋಗ ನೋಟಿಸ್‌ ಕಳಿಸಿತ್ತು.

ಈಗ, ಕರ್ನಾಟಕವು ಸೇರಿದಂತೆ 16 ರಾಜ್ಯಗಳಲ್ಲಿ ಎಸ್‌ಐಆರ್‌ ಆರಂಭವಾಗುತ್ತಿದೆ. ಜೂನ್ 30ರಿಂದ ಕರ್ನಾಟಕದಲ್ಲಿ ಎಸ್‌ಐಆರ್‌ ಜಾರಿಗೆ ಬರಲಿದೆ. ಈ ಎಸ್‌ಐಆರ್‌ನಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಎಸ್‌ಐಆರ್‌ಗೆ ಒದಗಿಸಬೇಕಾದ ಅಗತ್ಯವಾದ ಡಾಕ್ಯುಮೆಂಟುಗಳು ಇದ್ದರೂ ಹೆಸರಿನಲ್ಲಿನ ಸ್ಪೆಲ್ಲಿಂಗ್‌, ಅಪ್ಪ ಅಮ್ಮ, ಅಜ್ಜ, ಅಜ್ಜಿಯ ವಯಸ್ಸಿಗೂ ನಿಮ್ಮ ವಯಸ್ಸಿಗೂ ಇರುವ ಅಂತರ, ವಿಳಾಸ, ಹುಟ್ಟಿದ ದಿನಾಂಕದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದರೂ, BLOಗಳು ಅಪ್ಲೋಡ್‌ ಮಾಡುವಲ್ಲಿ ಒಂದಷ್ಟು ತೊಡಕುಗಳಾದರೂ ಸಾಕು ಆ ಮತದಾರರನ್ನು ಅನುಮಾನಾಸ್ಪದ ಮತದಾರರು ಎಂದು ಪರಿಗಣಿಸಲಾಗುತ್ತದೆ. ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ನೋಟೀಸ್‌ ಕಳಸಿಲಾಗುತ್ತದೆ.

ಅನುಮಾನಾಸ್ಪದ ಮತದಾರರೆಂದು ಪಟ್ಟಿ ಮಾಡಲಾದ ಮತದಾರರು ಚುನಾವಣಾ ಆಯೋಗ ಕೇಳುವ 11 ದಾಖಲೆಗಳಲ್ಲಿ ಒಂದನ್ನಾದರೂ ನೀಡಬೇಕು. ಜನಸಾಮಾನ್ಯರ ಬಳಿ ಸಾಮಾನ್ಯವಾಗಿ ಇರುವ ಓಟರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್ಗಳನ್ನು ಗುರುತಾಗಿ ಪರಿಗಣಿಸಲಾಗುವುದಿಲ್ಲ. ಆಧಾರ್‌ ಕಾರ್ಡ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರು ಹೇಳುವುದು ಜನ್ಮ ಪತ್ರ, ಪಾಸ್‌ಪೋರ್ಟ್‌, ಆಸ್ತಿ ಡಾಕ್ಯುಮೆಂಟ್‌, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಶಾಶ್ವತ ಸರ್ಕಾರಿ ಹುದ್ದೆಯಲ್ಲಿದ್ದರೆ ಅದರ ಐಡಿ, ಇತ್ಯಾದಿ ದಾಖಲೆಗಳನ್ನು ನೀಡಬೇಕು. ಇವು ರಾಜ್ಯದ ಕೋಟ್ಯಾಂತರ ಜನರ ಬಳಿ ಲಭ್ಯವಿಲ್ಲ, ಮಾಡಿಸುವುದೂ ಸುಲಭವಲ್ಲ. ಆದ್ದರಿಂದ, ಅತಿ ಹೆಚ್ಚು ಮತದಾರರ ಮತದಾನದ ಹಕ್ಕನ್ನು ಸ್ಥಗಿತಗೊಳಿಸಲಾಗುತ್ತದೆ. ಅಪೀಲ್‌ ಸಲ್ಲಿಸಲು ಕೇವಲ ಒಂದು ತಿಂಗಳ ಸಮಯವಕಾಶವಿರುತ್ತದೆ. ತದ ನಂತರ ಲಕ್ಷಾಂತರ ಜನರನ್ನು ಡಿಲೀಟ್‌ ಮಾಡಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

ಒಂದು ವೇಳೆ, ಓಟರ್‌ ಐಡಿ ರದ್ದಾದರೆ, ಅಂತಹವರು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ಮಾತ್ರವಲ್ಲದೆ, ಸರ್ಕಾರಿ ಸೌಲಭ್ಯಗಳೂ ಕೈತಪ್ಪಲಿವೆ. ಈಗಾಗಲೇ ಅಂತಹ ವಿದ್ಯಮಾನಗಳು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆಯುತ್ತಿವೆ. ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಮತಪಟ್ಟಿಯಿಂದ ಹೊರಬಿದ್ದವರಿಗೆ ಪಡಿತರ ಮತ್ತು ಇತರ ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಗಳನ್ನು ನೀಡುವುದಿಲ್ಲವೆಂದು ಆ ಎರಡೂ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗರು ಘೋಷಿಸಿದ್ದಾರೆ. ಮತಪಟ್ಟಿಯಿಂದ ಹೊರಹಾಕಲಾದವರ ಬ್ಯಾಂಕ್ ಪಾಸ್‌ಬುಕ್‌ಗಳನ್ನು ಸಹ ರದ್ದುಗೊಳಿಸಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಎಸ್‌ಐಆರ್‌ ಮೂಲಕ ಮತದಾರರ ಪಟ್ಟಿಯಿಂದ ಹೊರಬಿದ್ದ ಮಹಿಳೆಯರಿಗೆ ಅಲ್ಲಿನ ‘ಅನ್ನಪೂರ್ಣ ಭಂಡಾರ್’ ಯೋಜನೆಯ ಸೌಲಭ್ಯವನ್ನು ನಿಲ್ಲಿಸುವುದಾಗಿ ಅಲ್ಲಿನ ನೂತನ ಮಹಿಳಾ ಮತ್ತು ಸಾಮಾಜಿಕ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಘೋಷಿಸಿದ್ದಾರೆ.

ಅವರ ಈ ಹೇಳಿಕೆಗಳು ಆ ರಾಜ್ಯಗಳಲ್ಲಿ ಮಾತ್ರವಲ್ಲದೆ, ಇಡೀ ದೇಶಾದ್ಯಂತ ಆತಂಕ ಮೂಡಿಸಿದೆ. ಕರ್ನಾಟಕದಲ್ಲಿ ಪಡಿತರ ಚೀಟಿ, ಆಧಾರ್ ಮತ್ತು ವೋಟರ್ ಐಡಿಯನ್ನು ಸರ್ಕಾರದ ಎಲ್ಲ ಜನಕಲ್ಯಾಣ ಯೋಜನೆಗಳಿಗೆ ಲಿಂಕ್ ಮಾಡಲಾಗಿದೆ. ಒಂದು ವೇಳೆ ಎಸ್‌ಐಆರ್ ಗೊಂದಲದಿಂದ ವೋಟರ್ ಐಡಿ ರದ್ದಾದರೆ, ಅದರ ಬೆನ್ನಲ್ಲೇ ಪಡಿತರ ಚೀಟಿಗೂ ಕುತ್ತು ಬರುತ್ತದೆ. ಪರಿಣಾಮವಾಗಿ ಬಡ ಮಹಿಳೆಯರ ಆಸರೆಯಾಗಿರುವ ‘ಶಕ್ತಿ‘ ಮತ್ತು ‘ಗೃಹಲಕ್ಷ್ಮಿ’ ಯೋಜನೆ, ವೃದ್ಧಾಪ್ಯ ಪಿಂಚಣಿ, ವಿಧವಾ ವೇತನ ಹಾಗೂ ಉಚಿತ ರೇಷನ್ ಸೌಲಭ್ಯಗಳಿಂದ ಬಡ ನಾಗರಿಕರು ವಂಚಿತರಾಗಬೇಕಾಗುತ್ತದೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ಮತದಾನದ ಹಕ್ಕು ಉಳಿಸಿಕೊಳ್ಳುವ ಕಾನೂನು ಹೋರಾಟದಲ್ಲೂ ಜನರಿಗೆ ಸರಿಯಾದ ನ್ಯಾಯ ಸಿಗದಿದ್ದರೆ, ಜನರು ತಮ್ಮದೇ ದೇಶದಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಶೋಷಣೆ ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಇತಿಹಾಸವನ್ನು ಗಮನಿಸಿದರೆ, ಮ್ಯಾನ್ಮಾರ್‌ನಲ್ಲಿ 1982ರವರೆಗೆ ಮತದಾನದ ಹಕ್ಕನ್ನು ಹೊಂದಿದ್ದ ರೋಹಿಂಗ್ಯಾ ಮುಸ್ಲಿಮರನ್ನು ಹೊಸ ಪೌರತ್ವ ಕಾಯ್ದೆಯ ಮೂಲಕ ಹಕ್ಕು ವಂಚಿತರನ್ನಾಗಿ ಮಾಡಿ, ತಾಯ್ನಾಡಿನಲ್ಲೇ ‘ಅಕ್ರಮ ವಲಸಿಗರು’ ಎಂದು ಘೋಷಿಸಿ ದೇಶಭ್ರಷ್ಟರನ್ನಾಗಿ ಮಾಡಲಾಯಿತು. ಅವರ ಮೇಲೆ ಶೋಷಣೆ-ದಾಳಿಗಳು ನಡೆದವು. ಅದೇ ರೀತಿ, 1961ರಲ್ಲಿ ಕುವೈತ್ ಸ್ವತಂತ್ರವಾದಾಗ ಅಲ್ಲಿನ ಅಲೆಮಾರಿ ‘ಬೈದೂನ್’ ಸಮುದಾಯದ ಜನ ಸರಿಯಾದ ದಾಖಲೆಗಳನ್ನು ಸಲ್ಲಿಸದ ಕಾರಣ ಅವರಿಗೆ ಪೌರತ್ವ ಮತ್ತು ಮತದ ಹಕ್ಕನ್ನು ನಿರಾಕರಿಸಲಾಯಿತು; ಅವರು ಇಂದಿಗೂ ಬ್ಯಾಂಕ್ ಖಾತೆ, ಉಚಿತ ಶಿಕ್ಷಣ ಮತ್ತು ಚಾಲನಾ ಪರವಾನಗಿ ಇಲ್ಲದೆ ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹ ಭೀಕರ ಇತಿಹಾಸ ನಮ್ಮ ಮುಂದಿದೆ.

ಇದೇ ರೀತಿ ಹಲವು ದೇಶಗಳಲ್ಲಿ ಮತ ಹಕ್ಕಿನಿಂದ ವಂಚಿತರಾದ ಲಕ್ಷಾಂತರ ಜನ ತನ್ನದೇ ತಾಯ್ನಾಡಿನಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ಶೋಷಣೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ನಾಗರಿಕರೂ ಅಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅಂತಹ ವಿಪ್ಪತ್ತಿನಿಂದ ತಪ್ಪಿಸಿಕೊಳ್ಳಲು ರಾಜ್ಯದ ಜನರು ಎಸ್‌ಐಆರ್‌ ವಿರುದ್ಧ ಸಜ್ಜುಗೊಳ್ಳಬೇಕಿದೆ. ಎಸ್‌ಐಆರ್‌ನ ಸಂಚನ್ನು ಹಿಮ್ಮೆಟ್ಟಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್‌ಘಾಟ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಮೌನ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು...

ಬಾಗಲಕೋಟೆ | ಪ್ರಜಾಪ್ರಭುತ್ವದ ಕರಾಳ ದಿನ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...