RSSಗೆ ಮಹಿಳೆಯರು ಎಂದರೆ ಪುರುಷರ ಸ್ವತ್ತು: ಸಂಘಪರಿವಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Date:

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದರೆ ಮಹಿಳಾ ವಿರೋಧಿ, ಸಂವಿಧಾನ ವಿರೋಧಿ ಪುರುಷ ಪ್ರಧಾನ ಗುಂಪು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

- Advertisement -

‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ, “ಆರ್‌ಎಸ್‌ಎಸ್ ಎನ್ನುವುದು ಕೇವಲ ಪುರುಷರಷ್ಟೇ ಇರುವ ಸಂವಿಧಾನ ವಿರೋಧಿ ಕೂಟ. ಅದು ಮಹಿಳೆಯರನ್ನು ಪುರುಷರ ಸ್ವತ್ತು ಅಥವಾ ಆಸ್ತಿ ಎಂದು ಭಾವಿಸುತ್ತದೆ. ಆದರೆ, ನಾನು ‘ಶಿವ-ಶಕ್ತಿ’ ಸಿದ್ಧಾಂತದಲ್ಲಿ ಆಳವಾದ ನಂಬಿಕೆ ಹೊಂದಿದ್ದೇನೆ. ಇದೇ ಕಾರಣಕ್ಕೆ ಆರ್‌ಎಸ್‌ಎಸ್ ವಿರುದ್ಧ ಹೋರಾಡುವುದು ನನಗೆ ಅಪಾರ ಸಂತೋಷ ಕೊಡುತ್ತದೆ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ...

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ...

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ ಶ್ರದ್ಧೆಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ಅಹಂಕಾರ ಮತ್ತು ಯುವಜನ ವಿರೋಧಿ ಮನಸ್ಥಿತಿಯ ನೇರ ಪ್ರದರ್ಶನವಾಗಿ ಮಾರ್ಪಟ್ಟಿತು. ರಾವಣ, ಕುಂಭಕರ್ಣ...

ಪಶ್ಚಿಮ ಪದವೀಧರರ ಕ್ಷೇತ್ರ: ಭದ್ರಕೋಟೆ ಮರುಹಿಡಿಯಲು ಕಾಂಗ್ರೆಸ್ ಯತ್ನ;...

ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಾವು ಗರಿಗೆದರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಪದವೀಧರರ ಕ್ಷೇತ್ರವೀಗ ಬಿಜೆಪಿಯ...

“ಅತ್ಯಂತ ವಿಶೇಷವೆಂದರೆ, ಆರ್‌ಎಸ್‌ಎಸ್‌ನಲ್ಲಿರುವ ಅನೇಕ ಮಹಿಳೆಯರು ಕೂಡ ಇಂದು ನನ್ನ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆರ್‌ಎಸ್‌ಎಸ್‌ನ ಮನುಸ್ಮೃತಿ ಆಧಾರಿತ ಮನಸ್ಥಿತಿಯು ಮಹಿಳಾ ಸಮಾನತೆಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಈ ಹೇಳಿಕೆ ವಿರುದ್ಧ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರು ರಾಹುಲ್ ಹೇಳಿಕೆಯನ್ನು ‘ಬಾಲಿಶ’ ಎಂದಿದ್ದಾರೆ. “ವಿರೋಧ ಪಕ್ಷದ ನಾಯಕನಿಗೆ ಇಂತಹ ಜ್ಞಾನಹೀನ ಮಾತುಗಳು ಶೋಭಿಸುವುದಿಲ್ಲ. ಆರ್‌ಎಸ್‌ಎಸ್‌ನಲ್ಲಿ ‘ರಾಷ್ಟ್ರ ಸೇವಿಕಾ ಸಮಿತಿ’ ಎಂಬ ಪ್ರತ್ಯೇಕ ಮಹಿಳಾ ವಿಭಾಗವಿದ್ದು, ದೇಶಾದ್ಯಂತ ಲಕ್ಷಾಂತರ ಮಹಿಳೆಯರು ಪುರುಷರಿಗೆ ಸಮಾನವಾಗಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದ್ರ ರಾವ್, “ಕಾಂಗ್ರೆಸ್ ಪಕ್ಷದೊಳಗೇ ಎಷ್ಟು ಮಂದಿ ಮಹಿಳೆಯರಿಗೆ ಉನ್ನತ ನಾಯಕತ್ವದ ಸ್ಥಾನಗಳನ್ನು ನೀಡಲಾಗಿದೆ ಎಂಬುದನ್ನು ರಾಹುಲ್ ಮೊದಲು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಎಷ್ಟು ಮಂದಿ ಮಹಿಳಾ ಮುಖ್ಯಮಂತ್ರಿಗಳಿದ್ದಾರೆ? ಆದರೆ, ಬಿಜೆಪಿಯು ದೇಶದ ರಾಜಧಾನಿಯಲ್ಲೇ ಮಹಿಳಾ ಮುಖ್ಯಮಂತ್ರಿಯನ್ನು ನೇಮಿಸಿದೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ ಸಂವಿಧಾನಾತ್ಮಕ ಪರಿಹಾರವೇನು?

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು...

ಮತದಾರರ ಪಟ್ಟಿ ಪರಿಷ್ಕರಣೆ ಸಾಫ್ಟ್‌ವೇರ್‌ನಲ್ಲಿ 4 ಬದಲಾವಣೆ; ಮಹಾರಾಷ್ಟ್ರದ ಮನವಿಗೆ ಕೊನೆಗೂ ಒಪ್ಪಿದ ಚುನಾವಣಾ ಆಯೋಗ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಹೆಚ್ಚಿನ...

ಒಬ್ಬ ರಾವಣ ಮತ್ತೊಬ್ಬ ರಾವಣನ ಮೇಲೆ ಬಾಣ ಬಿಡುವ ನಾಟಕ: ಮೋದಿ ವಿರುದ್ಧ ಧೃವ್ ರಾಠಿ ವ್ಯಂಗ್ಯ

ದೆಹಲಿಯಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾವಣನ...

ಭಾರತೀಯರೊಂದಿಗೆ ಗರ್ಬಾ ಹೆಜ್ಜೆ ಹಾಕಿದ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್ ಮಮ್ದಾನಿ

ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ನವರಾತ್ರಿ ಆಚರಣೆಯಲ್ಲಿ ಭಾರತೀಯರೊಂದಿಗೆ...