ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿ ನಡೆದಿದ್ದು ಶೋಪಿಯಾನ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಿಜೆಪಿಯ ಮಾಜಿ ಸರಪಂಚ ಸಾವನ್ನಪ್ಪಿದ್ದಾರೆ. ಅನಂತನಾಗ್ ಜಿಲ್ಲೆಯಲ್ಲಿ ಜೈಪುರದ ಪ್ರವಾಸಿಗ ದಂಪತಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಮೃತ ಮಾಜಿ ಸರಪಂಚನನ್ನು ಐಜಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಹೀರ್ಪೋರಾದಲ್ಲಿ ಐಜಾಜ್ ಅಹ್ಮದ್ ಶೇಖ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH | Jammu and Kashmir: Last rites of BJP leader and ex-Sarpanch Aijaz Ahmad Sheikh being performed in Shopian
He was shot dead by terrorists yesterday in Heerpora, Shopian. pic.twitter.com/OsDGnINWRE
— ANI (@ANI) May 19, 2024
ಇದನ್ನು ಓದಿದ್ದೀರಾ? ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಪ್ರಧಾನಿ ಮೋದಿ
ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ. ಐಜಾಜ್ ಅಹ್ಮದ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
While we condemn the attack in Pahalgam today that resulted in injuries to two tourists followed by another attack on a sarpanch in Hurpora, Shopian – the timing of these attacks given that the South election was delayed without any reason is a cause of concern. Especially… https://t.co/rEa7SMpBGZ
— Mehbooba Mufti (@MehboobaMufti) May 18, 2024
ಎರಡನೇ ಘಟನೆಯಲ್ಲಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಯನ್ನಾರ್ ಪ್ರದೇಶದಲ್ಲಿ ಜೈಪುರದ ದಂಪತಿ ಗಾಯಗೊಂಡಿದ್ದಾರೆ.
“ಅನಂತ್‌ನಾಗ್‌ನ ಯನ್ನಾರ್‌ನಲ್ಲಿ ಜೈಪುರ ನಿವಾಸಿ ಫರ್ಹಾ ಎಂಬ ಮಹಿಳೆ ಮತ್ತು ಆಕೆಯ ಸಂಗಾತಿ ತಬ್ರೇಜ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳಾಂತರಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಗಾಯಗೊಂಡ ದಂಪತಿಗಳ ಸ್ಥಿತಿ ಸ್ಥಿರವಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ : ಲೋಕಸಭೆ ಜೊತೆಯಲ್ಲೇ ವಿಧಾನಸಭಾ ಚುನಾವಣಾ ಸಾಧ್ಯತೆ!
ಉಗ್ರರ ದಾಳಿಯನ್ನು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. “ಇಬ್ಬರು ಪ್ರವಾಸಿಗರ ಮೇಲೆ ಮತ್ತು ಮಾಜಿ ಸರಪಂಚರ ಮೇಲೆ ನಡೆದಿರುವ ದಾಳಿಯನ್ನು ಖಂಡಿಸುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ಈ ದಾಳಿಯು ಆತಂಕಕ್ಕೆ ಕಾರಣವಾಗಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.