ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಕೆಲವು ದಿನಗಳ ನಂತರ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
ಭಯೋತ್ಪಾದಕರು ಶ್ರೀಲಂಕಾದ ನಾಗರಿಕರು ಎಂದು ಹೇಳಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಾನ ನಿಲ್ದಾಣದಲ್ಲಿ ಈ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
Gujarat ATS arrests four ISIS terrorists at Ahmedabad airport. All four accused are Sri Lankan nationals.
(Photo source: Gujarat ATS) pic.twitter.com/zsoA2PIWNH
— ANI (@ANI) May 20, 2024
ಮೇ 12ರಂದು, ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣದ ಸಂಕೀರ್ಣವನ್ನು ಶೋಧಿಸಿದ ನಂತರ ಆ ಬೆದರಿಕೆ ಸುಳ್ಳು ಎಂದು ತಿಳಿದು ಬಂದಿತ್ತು. ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡು ಬಂದಿರಲಿಲ್ಲ.
ಇದನ್ನು ಓದಿದ್ದೀರಾ? ಮಾಸ್ಕೋ ಮೇಲೆ ಐಸಿಸ್ ದಾಳಿ ಮಾಡಿರುವುದು ನಿಮಗೆ ಖಚಿತವಿದೆಯೆ?: ಅಮೆರಿಕಗೆ ರಷ್ಯಾ ಪ್ರಶ್ನೆ
ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಇಮೇಲ್ ಐಡಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು.
ಇದಾದ ಬಳಿಕ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇಡೀ ವಿಮಾನ ನಿಲ್ದಾಣವನ್ನು ಸ್ಕ್ಯಾನ್ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಹೇಳಿದ್ದರು.
ಇಂದು (ಮೇ 20) ಅದೇ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾದ ಶಂಕಿತ ನಾಲ್ವರು ಐಸಿಸ್ ಉಗ್ರರನ್ನು ಬಂಧನ ಮಾಡಲಾಗಿದೆ.