ಮಾಸ್ಕೋ ಮೇಲೆ ಐಸಿಸ್ ದಾಳಿ ಮಾಡಿರುವುದು ನಿಮಗೆ ಖಚಿತವಿದೆಯೆ?: ಅಮೆರಿಕಗೆ ರಷ್ಯಾ ಪ್ರಶ್ನೆ

Date:

ಮಾಸ್ಕೋದ ಕ್ರೋಕಸ್‌ ಪಟ್ಟಣದ ಮೇಲೆ ಮಾ.23 ರಂದು ಭೀಕರ ದಾಳಿ ನಡೆದು 133 ಮಂದಿ ಹತರಾಗಿ, ನೂರಾರು ಮಂದಿ ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಐಸಿಸ್ ಸಂಘಟನೆ ದಾಳಿ ಮಾಡಿದೆ ಎಂದು ಅಮೆರಿಕ ಹೇಳಿಕೆಯ ಬಗ್ಗೆ ರಷ್ಯಾ ಅನುಮಾನ ವ್ಯಕ್ತಪಡಿಸಿದೆ.

ಅಮೆರಿಕ ಸಾರ್ವಜನಿಕವಾಗಿ ಹೇಳಿದಂತೆ ಕಳೆದ ಎರಡು ದಶಕಗಳಲ್ಲಿಯೇ ರಷ್ಯಾದಲ್ಲಿ ನಡೆದ ಭೀಕರ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್ ಹೊತ್ತುಕೊಂಡಿತ್ತು. ಆದಾಗ್ಯೂ, ರಷ್ಯಾವು ಈ ದಾಳಿಯನ್ನು ಪ್ರಶ್ನಿಸಿದ್ದು, ಅಮೆರಿಕವು ಉಕ್ರೇನ್‌ಗೆ ಮುಕ್ತಿ ನೀಡುತ್ತಿದೆ ಹಾಗೂ ಅಲ್ಲದೆ ಅಲ್ಲಿನ ಅಧ್ಯಕ್ಷ ವೋಲ್ದಿಮಿರ್ ಝೆಲ್ಯಂಸ್ಕಿ ಭಯೋತ್ಪಾದನಾ ದಾಳಿಯ ಹಿಂದಿದ್ದಾರೆ ಎಂದು ಆರೋಪಿಸಿದೆ.

ರಷ್ಯಾದ ಸ್ಥಳೀಯ ಪತ್ರಿಕೆಯಲ್ಲಿ ಹೇಳಿಕೆ ನೀಡಿರುವ ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರರಾದ ಮರಿಯಾ ಝಕರೋವಾ, “ಈ ಪ್ರಶ್ನೆಯು ವೈಟ್‌ಹೌಸ್‌ನ ಅವಗಾಹನೆಗೆ: ಮಾಸ್ಕೋ ಮೇಲೆ ಐಸಿಸ್ ದಾಳಿ ಮಾಡಿರುವುದು ನಿಮಗೆ ಖಚಿತವಿದೆಯೆ? ನಂತರದಲ್ಲಿ ನಿಮ್ಮ ಮನಸ್ಸನ್ನು ಬದಲಿಸುವುದಿಲ್ಲ ತಾನೆ” ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್‌ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ

ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಮರಿಯಾ ಝಕರೋವಾ, ಮಧ್ಯ ಪೂರ್ವದ ದೇಶಗಳ ವ್ಯವಹಾರಗಳ ಮೇಲೆ ಅಮೆರಿಕ ಮಧ್ಯಸ್ಥಿಕೆ ವಹಿಸುತ್ತಿರುವುದು ಏರಿಕೆಯಾಗುತ್ತಲೇ ಇದೆ, ಭಯೋತ್ಪಾದನೆಯ ಗುಂಪುಗಳನ್ನು ಬಲಪಡಿಸುವುದು ಹಾಗೂ ಮೂಲಭೂತವಾದದ ಕಡೆ ಸಾಂಸ್ಥಿಕಗೊಳಿಸುವುದು, ಇಂದಿಗೂ ಈ ದೇಶಗಳಲ್ಲಿ ಹೆಚ್ಚಾಗುತ್ತಲೇ ಇದೆ ಎಂದು ತಿಳಿಸಿದ್ದಾರೆ.

“ಇದರ ತರ್ಕವೇನು ಎಂಬುದನ್ನು ನೀವು ಕೇಳಬಹುದು? ಹಣ ಮತ್ತು ಅಧಿಕಾರ. ನೇರ ಮಧ್ಯಸ್ಥಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಬದ್ಧವಾಗಿ ನಿಷೇಧಿಸುವುದನ್ನು ಪರಿಗಣಿಸಬೇಕಾಗಿದೆ. ಇದು ಹೆಚ್ಚುತ್ತಿರುವ ಅನಿಯಂತ್ರಿತ ವ್ಯವಸ್ಥೆಯಿಂದ, ಭಯೋತ್ಪಾದಕರ ಕೈಯಲ್ಲಿರುವ ವಿಶ್ವವನ್ನು ಮರುರೂಪಿಸಿಕೊಳ್ಳಬೇಕಿದೆ” ಎಂದು ಮರಿಯಾ ಝಕರೋವಾ ಹೇಳಿದ್ದರು.

ಅಮೆರಿಕವು ಉಕ್ರೇನ್‌ನ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾದನೆ ಹರಡುತ್ತಿದೆ ಎಂದು ಸುದ್ದಿಗಳನ್ನು ಹರಡುತ್ತಿದೆ. ಅಮೆರಿಕದ ಬೆಂಬಲಿತ ಮುಜಾಯಿದ್ದೀನ್‌ ಹೋರಾಟಗಾರರು ಸೋವಿಯತ್‌ ಸೇನೆಯ ವಿರುದ್ಧ 1980ರ ದಶಕದಲ್ಲಿ ಯುದ್ದ ಮಾಡಿದ್ದನ್ನು ಓದುಗರು ನೆನಪಿಸಿಕೊಳ್ಳಬೇಕು ಎಂದು ಮರಿಯಾ ಝಕರೋವಾ ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಳಸಿಕೊಂಡ ಟ್ರಂಪ್-ಮಸ್ಕ್ ದೋಸ್ತಿ: ಅಮೆರಿಕ ರಾಜಕಾರಣ ಅತಂತ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್-...

ಟಿಕ್‌ಟಾಕ್‌ನಲ್ಲಿ ಜನಾಂಗೀಯ ನಿಂದನೆ: ಭಾರತೀಯ ಮೂಲದ ಸಿಂಗಾಪುರದ ಬ್ಲಾಗರ್‌ಗೆ ದಂಡ

ಸಿಂಗಾಪುರದ ವಿವಿಧ ಜನಾಂಗೀಯ ಗುಂಪುಗಳ ನಡುವೆ ಸಾಮರಸ್ಯ ಕದಡುವ ರೀತಿಯಲ್ಲಿ...

74 ವರ್ಷದ ವೃದ್ಧೆ ಮೇಲೆ ನಿರಂತರ ಅತ್ಯಾಚಾರ: ಆರೋಪಿಗೆ 394 ವರ್ಷ ಜೈಲು ಶಿಕ್ಷೆ

ಎಪ್ಪತ್ನಾಲ್ಕು ವರ್ಷ ವಯಸ್ಸಿನ ವೃದ್ಧೆಯೊಬ್ಬರನ್ನು ಅಪಹರಿಸಿ ಹೋಟೆಲ್​ನಲ್ಲಿ ಬಂಧಿಯಾಗಿಸಿ 2 ವರ್ಷಗಳ...

5 ರೂ. ಪಾರ್ಲೆ ಜಿ ಬಿಸ್ಕತ್ತು ಗಾಜಾದಲ್ಲಿ 2400 ರೂ.ಗಳಿಗೆ ಮಾರಾಟ

ಭಾರತೀಯರಿಗೆ ಹಲವು ದಶಕಗಳಿಂದಲೂ ಪಾರ್ಲೆ ಜಿ ಹೆಸರು ಚಿರಪರಿಚಿತವಾದ ಹೆಸರು. ಕಡಿಮೆ...

Download Eedina App Android / iOS

X