ತಮಾಷೆ ಮಾಡಲೆಂದು ಯುವಕ ಗುಪ್ತಾಂಗಕ್ಕೆ ಆತನ ಸ್ನೆಹಿತನೊಬ್ಬ ಕಂಪ್ರೆಸರ್ ಪೈಪ್ ಇಟ್ಟಿದ್ದು, ಯುವಕನ ದೇಹಕ್ಕೆ ಗಾಳಿ ತುಂಬಿಕೊಂಡು, ಆತನ ಸಾವನ್ನಪ್ಪಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಮೃತನನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ. ಆತನ ಗುಪ್ತಾಂಗಕ್ಕೆ ಸ್ನೇಹಿತ ಅಲ್ಪೇಶ್ ಎಂಬಾತ ಕಂಪ್ರೆಸರ್ ಪೈಪ್ ಇಟ್ಟಿದ್ಧಾನೆ ಎಂದು ತಿಳಿದುಬಂದಿದೆ.
ಪ್ರಕಾಶ್ ಲೋಹದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕಾಶ್ ಮತ್ತು ಅವರ ಸಹೋದರ ಘೇವಾಬಾಯಿ ಅವರು ಅಲ್ಪೇಶ್‌ನನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ, ಅಲ್ಪೇಶ್ ತಮಾಷೆಗಾಗಿ ಪ್ರಕಾಶ್ ಅವರ ಗುಪ್ತಾಂಗಕ್ಕೆ ಕಂಪ್ರೆಸರ್ ಪೈಪ್ ಇಟ್ಟಿದ್ದಾರೆ. ಕ್ಷಣಾರ್ಧದಲ್ಲೇ ಪ್ರಕಾಶ್ ದೇಹಕ್ಕೆ ಗಾಳಿ ತುಂಬಿಕೊಂಡಿದೆ. ವಾಂತಿಯಾಗಿ ಪ್ರಕಾಶ್ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಿಸದೆ ಪ್ರಕಾಶ್ ಸಾವನ್ನಪ್ಪಿದ್ದಾರೆ.
“ಅಲ್ಪೇಶ್‌ಗೆ ಕಂಪ್ರೆಸರ್ ಪೈಪ್‌ನಲ್ಲಿ ಗಾಳಿಯ ಒತ್ತಡ ಹೆಚ್ಚಿರುತ್ತದೆ ಎಂಬುದು ತಿಳಿದಿತ್ತು. ಆದರೂ, ಅದನ್ನು ಲೆಕ್ಕಿಸದೆ ಪ್ರಕಾಶ್ ಅವರ ಗುಪ್ತಾಂಗಕ್ಕೆ ಕಂಪ್ರೆಸರ್ ಪೈಪ್ ಇಟ್ಟಿದ್ದರು. ಇದೇ ಪ್ರಕಾಶ್ ಸಾವಿಗೆ ಕಾರಣ” ಎಂದು ಪ್ರಕಾಶ್ ಸಹೋದರ ಘೇವಾಬಾಯಿ ಹೇಳಿದ್ದಾರೆ.
ಘೇವಾಭಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಆರಂಭಿಕ ತನಿಖೆಯಲ್ಲಿ, ಆರೋಪಿ ಅಲ್ಪೇಶ್ ಅವರಿಗೆ ಪ್ರಕಾಶ್‌ಗೆ ತೊಂದರೆ ಕೊಡುವ ಯಾವ ಉದ್ದೇಶವೂ ಇರಲಿಲ್ಲ. ತಮಾಷೆಗಾಗಿ ಮಾಡಿದ ಕೃತ್ಯ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.