ಭಾರತದೊಳಗಿನ ʼಇನ್ನೊಂದು ಭಾರತʼವನ್ನು ಅನಾವರಣ ಮಾಡುತ್ತಿರುವ ಜಿ-20 ಶೃಂಗಸಭೆ

Date:

Advertisements
ಜಗತ್ತಿನೆದುರು ಭಾರತದ ಭವ್ಯ ಪರಂಪರೆ, ಆಹಾರ ಸಂಸ್ಕೃತಿ ಇತ್ಯಾದಿಗಳನ್ನು ಜಿ-20 ಮೂಲಕ ಸಾರಲು ಮುಂದಾಗಿರುವ ಕೇಂದ್ರ ಸರ್ಕಾರ, ದೆಹಲಿಯ ಬಡವರನ್ನು ಮತ್ತು ಬಡವರು ವಾಸಿಸುವ ಪ್ರದೇಶಗಳನ್ನು ವಿದೇಶಿ ಗಣ್ಯರಿಂದ ಮರೆಮಾಚುತ್ತಿದೆ. ಜಿ-20 ಶೃಂಗಸಭೆ ದೆಹಲಿಯ ಬಡವರ ಘನತೆಯ ಮೇಲಷ್ಟೇ ಅಲ್ಲ, ಅವರ ದಿನದ ದುಡಿಮೆ, ಬದುಕುಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. 

ಜಿ 20 ಶೃಂಗಸಭೆಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಈಗ ಸಿಂಗಾರಗೊಂಡಿದೆ. ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಗತ್ತಿನ ಅತಿ ದೊಡ್ಡ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ಅದರಲ್ಲಿ ಜಗತ್ತಿನ 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟದ ನಾಯಕರು ಪಾಲ್ಗೊಳ್ಳಲಿದ್ದಾರೆ.

ಜಗತ್ತಿನ ಮಹಾ ನಾಯಕರು ಬಂದು ಸೇರುತ್ತಿರುವ ಜಿ 20 ಶೃಂಗಸಭೆಗಾಗಿ ಭಾರತವು 990 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ದೆಹಲಿಯನ್ನು ಶೃಂಗಸಭೆಗಾಗಿ ಅಣಿಗೊಳಿಸಲಿ 4,100 ರೂಪಾಯಿಯನ್ನು ವೆಚ್ಚ ಮಾಡಲಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶೃಂಗಸಭೆಯ ಬಗ್ಗೆ ಹೊರದೇಶಗಳಲ್ಲಿ ಎಷ್ಟಿದೆಯೋ, ನಮ್ಮ ದೇಶದಲ್ಲಿಯೂ ಅಷ್ಟರ ಮಟ್ಟಿಗೆ ಕುತೂಹಲ, ನಿರೀಕ್ಷೆ ಇದೆ.

ಜಾಗತಿಕ ಮಟ್ಟದಲ್ಲಿ ತಮ್ಮ ಇಮೇಜ್ ರೂಪಿಸಿಕೊಳ್ಳಲು ಮತ್ತು ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೂ ಪ್ರಧಾನಿ ನರೇಂದ್ರ ಮೋದಿಗೆ ಇದೊಂದು ಮಹತ್ವದ ಅವಕಾಶವಾಗಿ ಒದಗಿದೆ. ಅದನ್ನು ಬಿಜೆಪಿ ಮತ್ತು ಮೋದಿ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

Advertisements

ಜಿ20ರ ಲಾಂಛನದಲ್ಲಿ ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲ ಇದೆ. ಅದರ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ. ಬಿಜೆಪಿ ಅದನ್ನು ನಾನಾ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಚುನಾವಣೆ ಹೀಗೆ ಸದಾ ಒಂದರ ಜಪ ಮಾಡುವ ಬಿಜೆಪಿ ತತ್ವದಂತೆ ಶೃಂಗಸಭೆಗೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎನ್ನುವ ಘೋಷವಾಕ್ಯ ನೀಡಲಾಗಿದೆ. ಮೋದಿಯವರ ಫೋಟೋಗಳು, ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

ಜಿ 20ಶೃಂಗಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಪ್ರಧಾನಿ ಮೋದಿ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಪಾಠವನ್ನೇ ಮಾಡಿದ್ದಾರಂತೆ. ಇನ್ನು ಸಭೆಯಲ್ಲಿ ಭಾಗವಹಿಸುತ್ತಿರುವ ದೇಶ ವಿದೇಶಗಳ ಪ್ರತಿನಿಧಿಗಳಿಗೆ ಚಿನ್ನ, ಬೆಳ್ಳಿ ಲೇಪಿತ ಪಾತ್ರೆ, ಚಮಚಗಳಲ್ಲಿ ಊಟ, ಉಪಾಹಾರ ನೀಡಲಾಗುತ್ತದೆ. ಪ್ರತಿನಿಧಿಗಳಿಗಾಗಿ ಸಿರಿಧಾನ್ಯಗಳ ತರಹೇವಾರಿ ಭಕ್ಷ್ಯಗಳ ಮೆನು ಸಿದ್ದಪಡಿಸಲಾಗಿದೆ. ಇದು ಜಿ-20 ಶೃಂಗಸಭೆಯ ಒಂದು ಮುಖ. ಸರ್ಕಾರ ಜನರಿಗೆ ಮತ್ತು ಜಗತ್ತಿಗೆ ತೋರಿಸುತ್ತಿರುವ ಮುಖ.

ಅದರ ಇನ್ನೊಂದು ಮುಖ ದಾರುಣವಾಗಿದೆ. ಭಾರತದೊಳಗಿನ ‘ಇನ್ನೊಂದು ಭಾರತ’ವನ್ನು ಅನಾವರಣ ಮಾಡುತ್ತದೆ. ಜಗತ್ತಿನೆದುರು ಭಾರತದ ಭವ್ಯ ಪರಂಪರೆ, ಆಹಾರ ಸಂಸ್ಕೃತಿ ಇತ್ಯಾದಿಗಳನ್ನು ಸಾರಲು ಮುಂದಾಗಿರುವ ಕೇಂದ್ರ ಸರ್ಕಾರ, ದೆಹಲಿಯ ಬಡವರನ್ನು ಮತ್ತು ಬಡವರು ವಾಸಿಸುವ ಪ್ರದೇಶಗಳನ್ನು ವಿದೇಶಿ ಗಣ್ಯರಿಂದ ಮರೆಮಾಚುತ್ತಿದೆ. ಶೃಂಗಸಭೆ ದೆಹಲಿಯ ಬಡವರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.  

ರಾಷ್ಟ್ರದ ರಾಜಧಾನಿಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದ್ದು, ಕಚೇರಿ, ಶಾಲಾ ಕಾಲೇಜು, ಹೋಟೆಲ್ ಮತ್ತಿತರ ಉದ್ಯಮಗಳನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ರಕ್ಷಣೆಯ ಕಾರಣಕ್ಕಾಗಿ ವಿಪರೀತ ಬಂದೋಬಸ್ತ್ ಮಾಡಲಾಗಿದ್ದು, ರಸ್ತೆಗಳಲ್ಲಿ ಜನ ಸಂಚಾರವೇ ಕಷ್ಟವಾಗಿದೆ. ಇದರಿಂದ ದೆಹಲಿಯ ಜನಜೀವನ ತತ್ತರಿಸಿದೆ. ಸರ್ಕಾರವು ಇದು ಲಾಕ್‌ಡೌನ್ ಅಲ್ಲ ಎಂದು ಹೇಳಿದ್ದರೂ, ಅದಕ್ಕಿಂತ ದುರ್ಭರವಾದ ವಾತಾವರಣ ಸೃಷ್ಟಿಯಾಗಿದೆ.

ಜಿ 20ವಿಶ್ವದ ಐದನೆಯ ಬಲಿಷ್ಠ ಆರ್ಥಿಕತೆಯ ದೇಶವಾದ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಬಡವರು ವಾಸಿಸುವ ದೇಶವೂ ಆಗಿದೆ. ಇಲ್ಲಿ ನಗರಗಳಲ್ಲಿ ಮೇಲುಸೇತುವೆಗಳ ಕೆಳಗೆ, ರಸ್ತೆಗಳ ಪಕ್ಕದಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಜಾಗಗಳಲ್ಲಿ ವಾಸಿಸುವ ಜನರ ಸಂಖ್ಯೆ ಗಣನೀಯವಾಗಿದೆ. ಅಂಥವರನ್ನೆಲ್ಲ ಈಗ ದೆಹಲಿಯಲ್ಲಿ ಜಾಗ ಖಾಲಿ ಮಾಡಿಸಿ, ದೂರ ಓಡಿಸಲಾಗಿದೆ. ಬೀದಿ ವ್ಯಾಪಾರಿಗಳು, ದಿನಗೂಲಿ ನೌಕರರು ಮೂರು ದಿನ ಉಪವಾಸ ಇರಬೇಕಾದ ಸ್ಥಿತಿ ಇದೆ.

ಈ ಸುದ್ದಿ ಓದಿದ್ದೀರಾ: ಶಾರುಖ್ ಖಾನ್‌ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?

ದೆಹಲಿಯ ಸ್ಲಮ್‌ಗಳನ್ನು ವಿದೇಶಿ ಗಣ್ಯರು ನೋಡಬಾರದು ಎಂದು ರಸ್ತೆಗಳ ಪಕ್ಕದಲ್ಲಿ ದೊಡ್ಡ ಪರದೆಗಳನ್ನು, ಪ್ಲಾಸ್ಟಿಕ್ ಶೀಟ್‌ಗಳನ್ನು ಅಳವಡಿಸಿ, ಸ್ಲಮ್‌ಗಳನ್ನು ಅಕ್ಷರಶಃ ಮುಚ್ಚಲಾಗಿದೆ. ಇದರಿಂದ ಕೊಳಚೆ ಪ್ರದೇಶಗಳ ನಿವಾಸಿಗಳ ಘನತೆಗೆ ಕುಂದುಂಟಾಗಿದ್ದು, ಅಲ್ಲಿನ ಜನ ಮಾಧ್ಯಮಗಳ ಮುಂದೆ ಬೇಸರ ಹೊರಹಾಕಿದ್ದಾರೆ. ‘ಚುನಾವಣೆಗಳ ಕಾಲದಲ್ಲಿ ನಮ್ಮ ಏರಿಯಾಗಳಿಗೆ ಪದೇ ಪದೆ ಬರುವ ರಾಜಕಾರಣಿಗಳು, ನಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುವ, ನಮ್ಮೊಂದಿಗೆ ಊಟ ಮಾಡುವ ಮಂತ್ರಿ ಮಹೋದಯರು ಈಗ ನಮ್ಮನ್ನು ‘ಗಣ್ಯ’ರು ನೋಡಬಾರದು ಎಂದು ನಮ್ಮ ಪ್ರದೇಶಗಳನ್ನು ಪರದೆಗಳಿಂದ ಮುಚ್ಚಿದ್ದಾರೆ’ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಜಿ-20 ಶೃಂಗಸಭೆ ಅವರ ಘನತೆಯ ಮೇಲಷ್ಟೇ ಅಲ್ಲ, ಅವರ ದಿನದ ದುಡಿಮೆ, ಬದುಕುಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ದಕ್ಷಿಣ ದೆಹಲಿಯ ಕೂಲಿ ಕ್ಯಾಂಪ್, ಜನತಾ ಕ್ಯಾಂಪ್, ಹಾಫಿಜ್ ನಗರ ಮುಂತಾದೆಡೆ ಬಡವರು ಜಿ-20 ಶೃಂಗಸಭೆಯ ಅಡ್ಡಪರಿಣಾಮಗಳನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ. ಪೊಲೀಸರು ತಮ್ಮನ್ನು ನಾಗರಿಕರಂತೆ ನೋಡದೇ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.     

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X