ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾತ್ಕಾಲಿಕ ದ್ವಾರ ಕುಸಿದ ಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ದಾಂಡೇನಿಯಾ ಸಭಾಂಗಣದಲ್ಲಿ ಮಾಹಿತಿ ಮತ್ತು ಸಂಸ್ಖೃತಿ ಇಲಾಖೆ ಬಂಗಾಳದ ಪ್ರಸಿದ್ಧ ನಟ ಉತ್ತಮ್ ಕುಮಾರ್ ಅವರ 44ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ.
ಸಭಾಂಗಣಕ್ಕೆ ಬರುವ ಹೆಚ್ಚಿನ ಜನರನ್ನು ನಿರ್ವಹಣೆ ಮಾಡುವ ಸಲುವಾಗಿ ಬೃಹತ್ ದ್ವಾರವನ್ನು ನಿರ್ಮಿಸಲಾಗಿತ್ತು. ಇದ್ದಕ್ಕಿದ್ದಂತೆ ದ್ವಾರ ಕುಸಿದ ಕಾರಣ ದ್ವಾರದಡಿ ಹಲವರು ಸಿಲುಕಿದ್ದಾರೆ. ಇದರಿಂದಾಗಿ ಹಲವು ಮಂದಿ ಗಾಯಗೊಂಡರು.
ತುರ್ತು ಸೇವಾ ವಾಹನಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಜನರಿಗೆ ವೈದ್ಯಕೀಯ ನೆರವು ನೀಡಿದರು. ಕೆಲವರಿಗೆ ಸಣ್ಣ ಪ್ರಮಾಣದ ಗಾಯವಾದರೆ, ಇನ್ನು ಕೆಲವರಿಗೆ ತೀವ್ರವಾದ ಗಾಯವಾಗಿದೆ. ದ್ವಾರ ಬಿದ್ದ ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ದ್ವಾರ ಕುಸಿತವುಂಟಾಗಿ ಹಲವು ಮಂದಿ ಗಾಯಗೊಂಡ ನಂತರ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಈ ಸಭಾಂಗಣವನ್ನು ಮಮತಾ ಬ್ಯಾನರ್ಜಿ ಅವರು 2023 ಏಪ್ರಿಲ್ 13 ರಂದು ಉದ್ಘಾಟಿಸಿದ್ದರು.
ಬಂಗಾಳದ ಪ್ರಸಿದ್ಧ ನಟರಾದ ಉತ್ತಮ್ ಕುಮಾರ್ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕರಾಗಿ ಕೆಲಸ ನಿರ್ವಹಿಸಿದ್ದಾರೆ. 1940 ರಿಂದ 1980ರ ದಶಕದವರೆಗೂ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಉತ್ತಮ್ ಕುಮಾರ್ ನಟಿಸಿದ್ದರು. ಬಂಗಾಳ ಸಿನಿಮಾ ಇತಿಹಾಸದಲ್ಲಿ ಇವರು ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ನಟರಾಗಿದ್ದರು.
VIDEO | Injuries reported after temporary gate collapses at West Bengal CM Mamata Banerjee's event in Kolkata.
The event was organised by the Information and Cultural Affairs Department at Dhanadhanya Auditorium to mark the 44th death anniversary of legendary actor Uttam Kumar. pic.twitter.com/luQkQpmXQs
— Press Trust of India (@PTI_News) July 24, 2024