ಮೋದಿಗೆ ʼDo Your Jobʼ ಎಂದಿದ್ದ Gen Z ಐಕಾನ್ ರಿಯಾ ಆಹಿರ್‌ ಬಿಗ್‌ಬಾಸ್‌ನಿಂದ ಔಟ್‌; ಲವ್‌ ಗಿಲ್‌ಗೆ ಎಂಟ್ರಿ!

Date:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘Do Your Job’ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದ ಹಾಗೂ CJP ಪ್ರತಿಭಟನೆಯ ವೇಳೆ ಪೊಲೀಸ್‌ ವ್ಯಾನ್‌ ತಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ರಿಯಾ ಆಹಿರ್‌ ಅವರಿಗೆ‌ ಹಿಂದಿಯ ಬಿಗ್‌ಬಾಸ್‌ 20 ಮನೆಯೊಳಗೆ ಪ್ರವೇಶಿಸುವ ಅವಕಾಶ ಕೈತಪ್ಪಿದೆ. ‘ಫ್ಯಾನ್ಸ್‌ ಕಾ ಫೈಸಲಾ’ ಎಂಬ ವಿಶೇಷ ಸುತ್ತಿನಲ್ಲಿ ವೀಕ್ಷಕರ ಮತದಾನದ ಮೂಲಕ ರಿಯಾ ಆಹಿರ್‌ ಹಾಗೂ ಪಂಜಾಬಿ ನಟಿ ಲವ್‌ ಗಿಲ್‌ ನಡುವೆ ಸ್ಪರ್ಧೆ ನಡೆದಿದ್ದು, ಕೊನೆಗೆ ಲವ್‌ ಗಿಲ್‌ ಹೆಚ್ಚು ಮತಗಳನ್ನು ಪಡೆದು ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.

- Advertisement -

ಸ್ಪರ್ಧೆ ತೀವ್ರಗೊಳ್ಳುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಕಾರ್ಯಕ್ರಮದ ಹೋಸ್ಟ್ ಸಲ್ಮಾನ್‌ ಖಾನ್‌ ಮಾತನಾಡುತ್ತಾ, ಲವ್‌ ಗಿಲ್‌ ಮತ್ತು ರಿಯಾ ಆಹಿರ್‌ ಪರಸ್ಪರ ಗೌರವ ಹೊಂದಿದ್ದಾರೆ ಎಂದು ಹೇಳಿದ ಬಳಿಕ ಈ ಮಾತಿನ ಚರ್ಚೆ ಆರಂಭವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ತಮ್ಮ ಬಗ್ಗೆ ಸಲ್ಮಾನ್‌ ಹೇಳಿದ ಮಾತನ್ನು ತಿದ್ದಿದ ರಿಯಾ, ‘ʼನೀವು ನನ್ನ ಬಗ್ಗೆ ಒಂದು ಮಾತು ಹೇಳಿದ್ರಿ. ‘ಬಸ್‌ ನಿಲ್ಲಿಸುವ ಧೈರ್ಯ ನಿಮಗಿದ್ದರೆ…ʼ ಎಂದು ಹೇಳಿದ್ರಿ. ಅದು ಬಸ್‌ ಅಲ್ಲ, ವ್ಯಾನ್‌ʼ ಎಂದು ಹೇಳಿದರು.

ಇದಕ್ಕೆ ಲವ್‌ ಗಿಲ್‌, ʼಡ್ರೈವರ್‌ ವಾಹನ ನಿಲ್ಲಿಸದೇ ಇದ್ದಿದ್ದರೆ, ಬಹುಶಃ ಅವರು ಇಂದು ಇಲ್ಲಿ ಇರುತ್ತಿರಲಿಲ್ಲ ಎಂದು ಯೋಚಿಸುತ್ತಿದ್ದೆʼ ಎಂದರು. ಅದಕ್ಕೆ ರಿಯಾ, ʼಆಗ ನನ್ನ ಜೀವನದ ಉದ್ದೇಶವೇ ಈಡೇರಿರುತ್ತಿತ್ತುʼ ಎಂದು ತಿರುಗೇಟು ನೀಡಿದರು.

ಬಳಿಕ ಇಬ್ಬರ ನಡುವೆ ‘ವೈಯಕ್ತಿಕತೆ’ ಹಾಗೂ ‘ಹಕ್ಕುಗಳಿಗಾಗಿ ಧ್ವನಿ ಎತ್ತುವುದು’ ಎಂಬ ವಿಚಾರದಲ್ಲಿ ಮಾತಿನ ಚರ್ಚೆ ನಡೆಯಿತು. ‘‘ಹುಡುಗಿಯೊಬ್ಬಳು ಮತ್ತೊಬ್ಬ ಹುಡುಗಿಯನ್ನು ಅಗೌರವಿಸಬಹುದು. ಆದರೆ ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗಾಗಿ ಮಾತನಾಡಬಹುದು’’ ಎಂದು ಲವ್‌ ಗಿಲ್‌ ಹೇಳಿದರು.

ಇದಕ್ಕೆ ರಿಯಾ, ಲವ್‌ ಗಿಲ್‌ ಪದೇಪದೇ ‘ಗೌರವ’, ‘ವೈಯಕ್ತಿಕತೆ’, ‘ದೃಷ್ಟಿಕೋನ’ದಂತಹ ಪದಗಳನ್ನು ಬಳಸುತ್ತಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ‘‘ವೈಯಕ್ತಿಕತೆಯ ಬಗ್ಗೆ ಮಾತನಾಡುವಾಗ ಅವರು ಕೆಲವೊಮ್ಮೆ ಶೆಹನಾಜ್‌ ಗಿಲ್‌, ಕೆಲವೊಮ್ಮೆ ಶೆಹಬಾಜ್‌ ಗಿಲ್‌, ಮತ್ತೆ ಕೆಲವೊಮ್ಮೆ ಶುಭ್‌ಮನ್‌ ಗಿಲ್‌ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ನನ್ನ ವೈಯಕ್ತಿಕತೆಯನ್ನು ತೋರಿಸಲು ನಾನು ಬೇರೆಯವರ ಹೆಗಲ ಮೇಲೆ ಸವಾರಿ ಮಾಡುವ ವ್ಯಕ್ತಿಯಲ್ಲ. ನಾನು 13 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ’’ ಎಂದು ಹೇಳಿದರು.

ಇದನ್ನೂ ಓದಿ: ಮನೆಗೆ ನುಗ್ಗಿ ಮಹಿಳೆಯ ಬಟ್ಟೆ ಎಳೆಯುವುದು ‘ಅತ್ಯಾಚಾರದ ಯತ್ನ’ವಲ್ಲ: ಝಾರ್ಖಂಡ್ ಹೈಕೋರ್ಟ್

ಇದಕ್ಕೆ ಲವ್‌ ಗಿಲ್‌, ‘‘ನಾನು ನಿಮ್ಮ ಕೆಲಸವನ್ನು ಎಂದಿಗೂ ನೋಡಿಲ್ಲ’’ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಲ್ಮಾನ್‌ ಖಾನ್‌ ಸಾರ್ವಜನಿಕ ಮತದಾನದ ಫಲಿತಾಂಶವನ್ನು ಪ್ರಕಟಿಸಿದರು. ವೀಕ್ಷಕರಿಂದ ಹೆಚ್ಚು ಮತಗಳನ್ನು ಪಡೆದ ಲವ್‌ ಗಿಲ್‌ ಬಿಗ್‌ಬಾಸ್‌ 20 ಮನೆಯೊಳಗೆ ಶಾಶ್ವತ ಸ್ಪರ್ಧಿಯಾಗಿ ಪ್ರವೇಶಿಸುವ ಅವಕಾಶ ಪಡೆದುಕೊಂಡರು.

ಇದರೊಂದಿಗೆ ರಿಯಾ ಆಹಿರ್‌ ಅವರ ಬಿಗ್‌ಬಾಸ್‌ ಜರ್ನಿ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿದೆ. ಸಿಜೆಪಿ ಪ್ರತಿಭಟನೆಯ ವೇಳೆ ವೈರಲ್‌ ಆಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದ ರಿಯಾ, ಬಿಗ್‌ಬಾಸ್‌ ಮನೆಯ ಅಧಿಕೃತ ಸ್ಪರ್ಧಿಯಾಗಿ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ಸೀಸನ್‌ನಲ್ಲಿ ನಷ್ಟದ ಆತಂಕ: ‘ಇಂಡಿಯಾ’ ಒಕ್ಕೂಟದ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವರ್ತಕರ ಮನವಿ!

ದೀಪಾವಳಿ, ಧನತ್ರಯೋದಶಿ ಹಬ್ಬಗಳ ಸೀಸನ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರಮಾಣದ ಶೃಂಗಾರ...

ಶಿವಮೊಗ್ಗ | ಜಿಲ್ಲಾ ಶೋಟೊಕಾನ್ ಕರಾಟೆ ಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು...

ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಬೇಕಾಬಿಟ್ಟಿ FIR ಹಾಕುವಂತಿಲ್ಲ, ಬಂಧಿಸುವಂತಿಲ್ಲ: ಪೊಲೀಸರಿಗೆ ಹೈಕೋರ್ಟ್ ಮಾರ್ಗಸೂಚಿಗಳೇನು?

ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳು, ಅಭಿಪ್ರಾಯಗಳು...