ಕಳೆದ ವರ್ಷ ಬೆಳಗಾವಿ ರೈತರಿಗೆ ಸಿಕ್ಕ ಕಬ್ಬಿನ ನಿಗದಿತ ದರ ಹಾವೇರಿ ಜಿಲ್ಲೆಯ ರೈತರರಿಗೆ ಸಿಕ್ಕಿಲ್ಲ. ಈ ವರ್ಷ ಅಖಂಡ ಉತ್ತರ ಕರ್ನಾಟಕಕ್ಕೆ ಒಂದು ಟನ್ ಕಬ್ಬಿಗೆ ರೂ. 5500 ದರ ನಿಗದಿ ಪಡಿಸಲೇಬೇಕೇಂದು ಒತ್ತಾಯಿಸಿ ಹಾವೇರಿ ಜಿಲ್ಲೆಯ ರೈತರು ಹಳ್ಳಿ ಹಳ್ಳಿಗಳಲ್ಲಿ ಸಭೆ ನಡೆಸುತ್ತಿದ್ದು, ಸಂಘಟನಾತ್ಮಕವಾಗಿ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಹಾವೇರಿ ಜಿಲ್ಲಾದ್ಯಾಂತ ರೈತರು ಕಬ್ಬು ಬೆಳೆದಿದ್ದು, ಕಟಾವು ಹಂತಕ್ಕೆ ಬಂದಿದೆ. ಇತ್ತ ಸಕ್ಕರೆ ಕಾರ್ಖಾನೆಗಳು ಕಬ್ಬು ಬರುವ ನಿರೀಕ್ಷೆಯಲ್ಲಿ ಎಲ್ಲ ರೀತಿಯ ತಯಾರು ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಾಗಿದ್ದು, ಒಂದು ಕೆ.ಜಿ ಸಕ್ಕರೆಗೆ 55 ರಿಂದ 100ವರೆಗೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಒಂದು ಟನ್ ಕಬ್ಬಿಗೆ ರೂ. 5500 ದರ ನಿಗದಿಪಡಸಲೇಕೆಂದು ಜಿಲ್ಲಾದ್ಯಾಂತ ಆಗ್ರಹಿಸುತ್ತಿದ್ದಾರೆ.
ಉತ್ತರ ಕರ್ನಾಟದಲ್ಲಿ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಖಾನೆಗಳು ಹೆಚ್ಚಾಗಿವೆ. ಈ ಪ್ರದೇಶದಲ್ಲಿ ಕಬ್ಬು ಬೆಳೆಗಾರರೂ ಹೆಚ್ಚು ಇದ್ದಾರೆ. ಹಾಗೇಯೇ ಹಾವೇರಿ ಜಿಲ್ಲೆಯಲ್ಲಿಯೂ ಕಬ್ಬು ಬೆಳೆಯಲು ಉತ್ತಮ ಫಲವತ್ತಾದ ಪ್ರದೇಶವಿದ್ದು, ಕಬ್ಬು ಬೆಳೆಗಾರರು ಹೆಚ್ಚಿದ್ದಾರೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ಸಂಘಟನಾತ್ಮಕವಾಗಿ ದೊಡ್ಡ ಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಿದ್ದರು. ಈ ಸಂಘಟನಾತ್ಮಕ ಉಗ್ರ ಪ್ರತಿಭಟನೆಯು ಹಾವೇರಿ ಕಬ್ಬು ಬೆಳೆಗಾರರಲ್ಲಿ ಕೊರತೆ ಎಂದು ಕಾಣಿಸಿತ್ತು. 2025ರಲ್ಲಿ ಹಾವೇರಿಯಲ್ಲಿ ಕಬ್ಬಿಗೆ ದರ ನಿಗದಿ ಮಾಡುವಂತೆ ಕಬ್ಬು ಬೆಳೆಗಾರರು ಕಡಿಮೆ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರೂ ತಕ್ಕಮಟ್ಟಿಗೆ ಯಶಸ್ಸು ಸಾಧಿಸಿದ್ದರು. ಆದರೆ ಬೆಳಗಾವಿ ಕಬ್ಬಿಗೆ ಸಿಕ್ಕ ದರ ಹಾವೇರಿ ಜಿಲ್ಲೆಯ ಕಬ್ಬಿಗೆ ನಿಗದಿತ ಸಿಗಲಿಲ್ಲ ಎಂಬ ಅಸಮಾದಾನ ರೈತರಲ್ಲಿ ಇದ್ದೆ ಇತ್ತು.
ರಾಜ್ಯ ಸರಕಾರದ ಸಕ್ಕರೆ ಸಚಿವರಾಗಿ ರುದ್ರಪ್ಪ ಲಮಾಣಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ತವರು ಜಿಲ್ಲೆಯಲ್ಲಿಯೇ ಕಬ್ಬು ಬೆಳೆಗಾರರು ಕಬ್ಬಿಗೆ ರೂ. 5500 ದರ ನಿಗದಿಪಡಿಸಲೇಬೇಕೆಂದು ಜಿಲ್ಲೆಯಲ್ಲಿ ಉಗ್ರ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಕಬ್ಬಿಗೆ ದರ ನಿಗದಿ ಜೊತೆಗೆ ಅನೇಕ ಸಮಸ್ಯೆಗಳು ಸಕ್ಕರೆ ಕಾರ್ಖಾನೆಯವರ ಮೋಸ, ವಿದ್ಯುತ್, ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಬೇಕು. ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಮಾಡಬೇಕು. ಕಾರ್ಖಾನೆಯವರು ಉಳಿಸಿಕೊಂಡಿರುವ ಬಾಕಿ ಹಣ ಕೊಡಿಸಬೇಕು. ಕಬ್ಬು ಬೆಳೆಗೆ ವಿಮಾ ಸೌಲಭ್ಯ ಕೊಡಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘವು ಜಿಲ್ಲೆಯಲ್ಲಿ ಹೋರಾಟಕ್ಕೆ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ.
ಕಳೆದ ಬಾರಿ ಬೆಳಗಾವಿ ಜಿಲ್ಲೆಯ ಕಬ್ಬಿಗೆ ಒಂದು ರೀತಿಯ ದರ, ಬೇರೆ ಜಿಲ್ಲೆಯ ಕಬ್ಬಿಗೆ ಇನ್ನೊಂದುಬ ರೀತಿಯ ದರ ನಿಗದ ಮಾಡಿರುವುದನ್ನು ಈ ಬಾರಿ ಒಪ್ಪುವುದಲ್ಲ. ಅಖಂಡ ಉತ್ತರ ಕರ್ನಾಟಕಕ್ಕೆ ಕಬ್ಬಿಗೆ ಒಂದೇ ದರ ನೀಗದಿ ಪಡಿಸಬೇಕು. ಈ ವರ್ಷದ ಕಬ್ಬಿಗೆ ರೂ. 5500 ದರ ನಿಗದಿಪಡಿಸಲೇಕು. ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಉಗ್ರ ಹೋರಾಟ ಮಾಡಲು, ರಾಜ್ಯ ಕಬ್ಬು ಬೆಳೆಗಾರರ ಸಂಘವು ಜಿಲ್ಲೆಯ ಹಾವೇರಿ, ಹಾನಗಲ್, ರಾಣಿಬೆನ್ನೂರು, ಹಿರೆಕೇರೂರು, ರಟ್ಟಿಹಳ್ಳಿ, ಬ್ಯಾಡಗಿ, ಸವಣೂರು ಹಾಗೂ ಶಿಗ್ಗಾವಿ ತಾಲೂಕುಗಳಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಸಿದ್ದಾರೆ.
ಈ ವರ್ಷದಲ್ಲಿ ಹಾವೇರಿ ಜಿಲ್ಲಾದ್ಯಾಂತಮಳೆ ಕೊರತೆ ಕಂಡು ಬಂದಿದೆ. ಇದರಿಂದ ಕಬ್ಬು ಇಳುವರಿ ಕಡಿಮೆಯಾದರೆ ಅಂತವರಿಗೆ ಸರಕಾರ ಸರಕಾರ ಸೂಕ್ತ ಪರಿಹಾರ ಕೊಡಬೇಕು. ಕಾರ್ಖಾನೆಗಳಲ್ಲಿ ಉಪ ಉತ್ಪನ್ನಗಳಾದ ಮೋಲಾಸಿಸ್, ಬಗ್ಯಾಸ, ಕೋಜನ್ ಬೂದಿ ಸೇರಿ ಕಚ್ಚಾ ವಸ್ತುಗಳ ಮಾರಾಟದಿಂದ ಬರುವ ಹಣದಲ್ಲಿ ರೈತರಿಗೂ ಪಾಲೂ ಕೊಡಬೇಕು. ಹೀಗೆ ಕಬ್ಬು ಬೆಳೆಗಾರರ ಹತ್ತು ಹಲವು ಬೇಡಿಕೆಗಳ ಇಟ್ಟುಕೊಂಡು ಹೋರಾಟಕ್ಕೆ ಅನಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಗುತ್ತಲ, ಹೊಸರಿತ್ತಿ, ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮಗಳಲ್ಲಿ ಸುತ್ತಮುತ್ತಲಿರುವ ಗ್ರಾಮಗಳಲ್ಲಿರುವ ಕಬ್ಬು ಬೆಳೆಗಾರರನ್ನು ಒಗ್ಗೂಡಿಸಿ ಸಭೆ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕಬ್ಬು ಕಬ್ಬು ಬೆಳೆಗಾರರ ಕಬ್ಬಿಗೆ ರೂ. 5500 ದರ ನಿಗದಿ ಪಡಿಸುವಂತೆ, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ರೈತರು ಪ್ರತಿಕ್ರಿಯೇ ನೀಡಿದ್ದಾರೆ.
ಈ ಭಾರಿ ಜಿಲ್ಲೆಯ ಎಲ್ಲ ತಾಲೂಕು ಕಬ್ಬು ಬೆಳೆಗಾರರು ಸಂಘಟನಾತ್ಮಕ ಒಗ್ಗೂಡಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ, ಈಡೀ ರಾಜ್ಯವೇ ನಮ್ಮ ಕಡೆ ತಿರುಗುವಂತೆ, ರಾಜ್ಯ ಸರಕಾರದ ಸಕ್ಕರೆ ಸಚಿವರ ಗಮನ ಸೆಳೆಯುವಂತೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಈದಿನ.ಕಾಮ್ ಜೊತೆಗೆ ಮಾತನಾಡಿ, “ಈ ವರ್ಷ ಒಂದು ಟನ್ ಕಬ್ಬಿಗೆ ರೂ. 5,500 ದರ ನಿಗದಿ ಮಾಡಬೇಕು. ದರ ನಿಗದಿಯಾಗುವವರೆಗೂ ರೈತರು ಕಬ್ಬನ್ನು ಕಡಿಸಲು ಮುಂದಾಗಬಾರದು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಆಗುತ್ತದೆ” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




