ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ವಿಧಿಸಿದೆ.
“ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಪರ್ಸನಲ್ ಕಂಪ್ಯೂಟರ್‌ಗಳು, ಎಚ್‌ಎಸ್‌ಎನ್ 8741 ಅಡಿಯಲ್ಲಿ ಬರುವ ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ ಆಮದನ್ನು ನಿರ್ಬಂಧಿಸಲಾಗಿದೆ. ನಿರ್ಬಂಧಿತ ಆಮದುಗಳಿಗೆ ಮಾನ್ಯ ಪರವಾನಗಿ ಇದ್ದರೆ ಮಾತ್ರ ಆಮದನ್ನು ಅನುಮತಿಸಲಾಗುವುದು,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ಆಮದು ನಿರ್ಬಂಧಿತ ವಸ್ತುಗಳನ್ನು ನೀವು ಆಮದು ಮಾಡಲು ಬಯಸಿದರೆ ಮಾನ್ಯ ಪರವಾನಗಿ ಇರಬೇಕಾಗುತ್ತದೆ. ಪರವಾನಗಿ ಇದ್ದರೆ ಮಾತ್ರ ಆಮದಿಗೆ ಅವಕಾಶ ನೀಡಲಾಗುತ್ತದೆ. ಬ್ಯಾಗೇಜ್ ನಿಯಮಗಳ ಅಡಿಯಲ್ಲಿ ಮಾಡಲಾಗುವ ಆಮದುಗಳ ಮೇಲೆ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಸರ್ಕಾರದ ಅಧಿಸೂಚನೆಯು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಒಂದು ಸೇರಿ ದೇಶದ 20 ವಿವಿ ನಕಲಿ : ಯುಜಿಸಿ ಘೋಷಣೆ
ಬ್ಯಾಗೇಜ್ ನಿಯಮಗಳು ಭಾರತೀಯ ಗಡಿಯನ್ನು ಪ್ರವೇಶಿಸುವ ಅಥವಾ ಗಡಿಯಿಂದ ಹೊರಹೋಗುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಕಸ್ಟಮ್ಸ್ ತಪಾಸಣೆಯ ನಿಯಮ ಜಾರಿಗೊಳಿಸಲಾಗುತ್ತದೆ. ಪ್ರಮುಖವಾಗಿ ಸ್ಥಳೀಯವಾಗಿ ಈ ವಸ್ತುಗಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಮದಿನ ಮೇಲೆ ನಿರ್ಬಂಧ ಹೇರಲಾಗಿದೆ. ಆಮದುಗಳು ಅನ್ವಯವಾಗುವ ಸುಂಕದ ಪಾವತಿಗೆ ಒಳಪಟ್ಟಿರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆರ್ ಅಂಡ್ ಡಿ, ಟೆಸ್ಟಿಂಗ್, ರಿಪೇರಿ ಮತ್ತು ಪ್ರಾಡಕ್ಟ್ ಡೆವಲಪ್‌ಮೆಂಟ್‌ನಿಂದಾಗಿ ಆಮದು ಮಾಡಿಕೊಳ್ಳುವುದಾದರೆ 20 ವಸ್ತುಗಳನ್ನು ಆಮದು ಮಾಡಲು ಪರವಾನಗಿ ಇದ್ದಲ್ಲಿ ವಿನಾಯಿತಿ ಇರುತ್ತದೆ. ಈ ಆಮದು ವಸ್ತುಗಳನ್ನು ತಿಳಿಸಲಾದ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಬೇಕು ಮತ್ತು ಮಾರಾಟ ಮಾಡಲಾಗದು ಎಂಬ ಷರತ್ತಿನ ಮೇಲೆ ಮಾತ್ರ ಅನುಮತಿ ನೀಡಲಾಗುತ್ತದೆ.