ಪಾಪ್‌ಕಾರ್ನ್‌ಗೂ ಜಿಎಸ್‌ಟಿ ವಿಧಿಸುವ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ಈ ಬಗ್ಗೆ ಸ್ಪಷ್ಟನೆ ನೀಡಿರುವುದನ್ನು ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ ಹಾಕಿರುವುದೇ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್ ಆಗಲು ಕಾರಣ. 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಪಾಪ್‌ಕಾರ್ನ್ ಮೇಲಿನ ತೆರಿಗೆ ರಚನೆಯನ್ನು ಸ್ಪಷ್ಟಪಡಿಸಲಾಗಿದೆ. ಅಸ್ತಿತ್ವದಲ್ಲಿರುವ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ಫೋನ್ ಪೇ, ಗೂಗಲ್ ಪೇ ಬಳಕೆಗೂ ಜಿಎಸ್‌ಟಿ ಬಿದ್ದರೆ ಮುಂದೇನು?
‘ಸಕ್ಕರೆ ಮಿಠಾಯಿ’ ಎಂದು ವರ್ಗೀಕರಿಸಲಾದ ಕಾರಣ ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್ ಮೇಲೆ ಸಾಲ್ಟೆಡ್ (ಉಪ್ಪು ಮಿಶ್ರಿತ) ಮತ್ತು ಸಾದಾ ಪಾಪ್‌ಕಾರ್ನ್‌ಗಿಂತ ವಿಭಿನ್ನವಾಗಿ ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
Caramel, Cheese and Salted sab mix karva diya… Ab lagao GST😅😅😅 pic.twitter.com/FnrVoy6t78
— Mohammed Futurewala (@MFuturewala) December 22, 2024
ಪ್ಯಾಕ್ ಮಾಡದ, ಲೇಬಲ್ ಇಲ್ಲದ ಸಾಲ್ಟೆಡ್ ಪಾಪ್‌ಕಾರ್ನ್‌ಗೆ ಶೇಕಡ 5ರಷ್ಟು ಜಿಎಸ್‌ಟಿ, ಪ್ಯಾಕ್ ಮಾಡಲಾದ, ಲೇಬಲ್ ಮಾಡಿದ ಪಾಪ್‌ಕಾರ್ನ್‌ಗೆ ಶೇಕಡ 12ರಷ್ಟು ಜಿಎಸ್‌ಟಿ, ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ಎಂದು ಕೇಂದ್ರ ವಿತ್ತ ಸಚಿವೆ ವಿವರಿಸಿದ್ದಾರೆ. ಇದಾದ ಬಳಿಕ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ.
ಕೆಲವು ಟ್ರೋಲ್‌ಗಳನ್ನು ನೋಡಿ
ಹಲವು ನೆಟ್ಟಿಗರು ಪಾಪ್‌ಕಾರ್ನ್‌ಗೆ ವಿವಿಧ ರೀತಿಯ ಜಿಎಸ್‌ಟಿ ವಿಧಿಸಿರುವುದಕ್ಕೆ ಗೊಂದಲ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೇಂದ್ರ ಸಚಿವೆಯ ಹೇಳಿಕೆ ಇನ್ನಷ್ಟು ಗೊಂದಲಕಾರಿಯಾಗಿದೆ ಎಂದು ಹೇಳಿದ್ದಾರೆ. “ಕ್ಯಾರಮೆಲೈಸ್ಡ್, ಸಾಲ್ಟೆಡ್, ಚೀಸ್ – ಹೀಗೆ ಎಲ್ಲಾ ರೀತಿಯ ಪಾಪ್‌ಕಾರ್ನ್ ಅನ್ನು ನಾನು ಮಿಕ್ಸ್ ಮಾಡಿಕೊಂಡಿದ್ದೇನೆ. ಈಗ ಹೇಗೆ ಜಿಎಸ್‌ಟಿ ಹಾಕುತ್ತೀರಿ” ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
Popcorn lovers, brace yourselves! 🍿
— Suyash Jain (@suyashjain_007) December 23, 2024
The GST Council, led by Finance Minister Nirmala Sitharaman, announced popcorn will attract 12% GST, while caramelised popcorn will be taxed at 18%.
Soon, we will need EMI options to pay for the popcorn🙂#GST #Popcorn #Tax pic.twitter.com/OSAmiyeJ2D
“ಸಾಲ್ಟೆಡ್ ಪಾಪ್‌ಕಾರ್ನ್‌ಗೆ ಶೇಕಡ 5ರಷ್ಟು ಜಿಎಸ್‌ಟಿ, ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಸಿಹಿ ಇಷ್ಟ ಪಡುವ ಜನರಿಗೆ ನ್ಯಾಯ ಎಲ್ಲಿದೆ” ಎಂದು ಮತ್ತೋರ್ವ ನೆಟ್ಟಿಗರು ಪ್ರಶ್ನಿಸಿದ್ದಾರೆ. “ಶೀಘ್ರದಲ್ಲೇ ಪಾಪ್‌ಕಾರ್ನ್ ಜಿಎಸ್‌ಟಿಯನ್ನು ಇಎಂಐ ಮೂಲಕ ಪಾವತಿಸುವ ವ್ಯವಸ್ಥೆ ಬರಬಹುದು” ಎಂದಿದ್ದಾರೆ.
ಇನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಹ್ಮಣ್ಯಂ ಅವರೂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಟ್ಟು ಜೋಳ ಮಾರಾಟ ಪ್ರಮಾಣ, ತೆರಿಗೆ ಲಾಭ ಮೊದಲಾದವುಗಳ ಲೆಕ್ಕಾಚಾರವನ್ನು ವಿವರಿಸಿದ್ದಾರೆ. ಪಾಪ್‌ಕಾರ್ನ್ ಮೇಲೆ ಜಿಎಸ್‌ಟಿ ವಿಧಿಸುವ ಸರ್ಕಾರದ ಈ ಕ್ರಮದಿಂದ ಶೇಕಡ 0.013ರಷ್ಟು ತೆರಿಗೆ ಲಭಿಸುತ್ತದೆ. ಆದರೆ ಅದಕ್ಕಾಗಿ ಜನರಿಗೆ ಆಗುವ ಕಷ್ಟವೆಷ್ಟು? ಇದು ಯಾವ ತಾರ್ಕಿಕತೆ ಎಂದು ಪ್ರಶ್ನಿಸಿದ್ದಾರೆ.
Why Administrative Reforms Covered in India@100 are essential
— Prof. Krishnamurthy V Subramanian (@SubramanianKri) December 22, 2024
Estimated popcorn sales in 2025 (estimated from GlobalData) = ₹1700 cr
Assuming entire is at 18%, GST collection from popcorn = ₹300 cr
Total GST collection (estimated 2025) = ₹22,00,000 Cr
=> Max revenue… https://t.co/KSJOvlT6cc
ಇನ್ನು ಅದಕ್ಕೂ ಹಿಂದಿನ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, “ಇದು ರಾಷ್ಟ್ರೀಯ ದುರಂತವಾಗಿದ್ದು, ಸರಳ ತೆರಿಗೆ ಎಂಬ ಜಿಎಸ್‌ಟಿ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
This is a national tragedy, violating the spirit of the Good & Simple Tax the GST was meant to be
— Arvind Subramanian (@arvindsubraman) December 21, 2024
The folly is compounded because instead of at least moving in the direction of simplicity we are veering to greater complexity, difficulty of enforcement & just irrationality
Sad https://t.co/nSOohAV7MO
Popcorn was living a simple salted life until Nirmala Sitharaman decided it was fancy enough for 18% GST.https://t.co/JepQMPD20A
— Devisha Jatakia (@devishajatakia) December 23, 2024
It’s time to rethink India’s tax policies.#ApniIndianGully #BuyIndianBuildBharat #VocalForLocalIndia #PopcornTax #IndianEconomy pic.twitter.com/1QD3oGSf1A

