ಪಾಪ್‌ಕಾರ್ನ್‌ ಮೇಲೆ ಮೂರು ರೀತಿಯ ಜಿಎಸ್‌ಟಿ; ಟ್ರೋಲ್ ಆದ ನಿರ್ಮಲಾ ಸೀತಾರಾಮನ್

Date:

ಪಾಪ್‌ಕಾರ್ನ್‌ಗೂ ಜಿಎಸ್‌ಟಿ ವಿಧಿಸುವ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ಈ ಬಗ್ಗೆ ಸ್ಪಷ್ಟನೆ ನೀಡಿರುವುದನ್ನು ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

- Advertisement -

ಪಾಪ್‌ಕಾರ್ನ್‌ ಮೇಲೆ ಮೂರು ರೀತಿಯ ಜಿಎಸ್‌ಟಿ ಹಾಕಿರುವುದೇ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್ ಆಗಲು ಕಾರಣ. 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಪಾಪ್‌ಕಾರ್ನ್ ಮೇಲಿನ ತೆರಿಗೆ ರಚನೆಯನ್ನು ಸ್ಪಷ್ಟಪಡಿಸಲಾಗಿದೆ. ಅಸ್ತಿತ್ವದಲ್ಲಿರುವ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಘೋಷಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಇದನ್ನು ಓದಿದ್ದೀರಾ? ಫೋನ್ ಪೇ, ಗೂಗಲ್ ಪೇ ಬಳಕೆಗೂ ಜಿಎಸ್‌ಟಿ ಬಿದ್ದರೆ ಮುಂದೇನು?

‘ಸಕ್ಕರೆ ಮಿಠಾಯಿ’ ಎಂದು ವರ್ಗೀಕರಿಸಲಾದ ಕಾರಣ ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್ ಮೇಲೆ ಸಾಲ್ಟೆಡ್ (ಉಪ್ಪು ಮಿಶ್ರಿತ) ಮತ್ತು ಸಾದಾ ಪಾಪ್‌ಕಾರ್ನ್‌ಗಿಂತ ವಿಭಿನ್ನವಾಗಿ ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

ಪ್ಯಾಕ್ ಮಾಡದ, ಲೇಬಲ್ ಇಲ್ಲದ ಸಾಲ್ಟೆಡ್ ಪಾಪ್‌ಕಾರ್ನ್‌ಗೆ ಶೇಕಡ 5ರಷ್ಟು ಜಿಎಸ್‌ಟಿ, ಪ್ಯಾಕ್ ಮಾಡಲಾದ, ಲೇಬಲ್ ಮಾಡಿದ ಪಾಪ್‌ಕಾರ್ನ್‌ಗೆ ಶೇಕಡ 12ರಷ್ಟು ಜಿಎಸ್‌ಟಿ, ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ಎಂದು ಕೇಂದ್ರ ವಿತ್ತ ಸಚಿವೆ ವಿವರಿಸಿದ್ದಾರೆ. ಇದಾದ ಬಳಿಕ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ.

ಕೆಲವು ಟ್ರೋಲ್‌ಗಳನ್ನು ನೋಡಿ

ಹಲವು ನೆಟ್ಟಿಗರು ಪಾಪ್‌ಕಾರ್ನ್‌ಗೆ ವಿವಿಧ ರೀತಿಯ ಜಿಎಸ್‌ಟಿ ವಿಧಿಸಿರುವುದಕ್ಕೆ ಗೊಂದಲ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೇಂದ್ರ ಸಚಿವೆಯ ಹೇಳಿಕೆ ಇನ್ನಷ್ಟು ಗೊಂದಲಕಾರಿಯಾಗಿದೆ ಎಂದು ಹೇಳಿದ್ದಾರೆ. “ಕ್ಯಾರಮೆಲೈಸ್ಡ್, ಸಾಲ್ಟೆಡ್, ಚೀಸ್ – ಹೀಗೆ ಎಲ್ಲಾ ರೀತಿಯ ಪಾಪ್‌ಕಾರ್ನ್‌ ಅನ್ನು ನಾನು ಮಿಕ್ಸ್ ಮಾಡಿಕೊಂಡಿದ್ದೇನೆ. ಈಗ ಹೇಗೆ ಜಿಎಸ್‌ಟಿ ಹಾಕುತ್ತೀರಿ” ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

“ಸಾಲ್ಟೆಡ್ ಪಾಪ್‌ಕಾರ್ನ್‌ಗೆ ಶೇಕಡ 5ರಷ್ಟು ಜಿಎಸ್‌ಟಿ, ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಸಿಹಿ ಇಷ್ಟ ಪಡುವ ಜನರಿಗೆ ನ್ಯಾಯ ಎಲ್ಲಿದೆ” ಎಂದು ಮತ್ತೋರ್ವ ನೆಟ್ಟಿಗರು ಪ್ರಶ್ನಿಸಿದ್ದಾರೆ. “ಶೀಘ್ರದಲ್ಲೇ ಪಾಪ್‌ಕಾರ್ನ್ ಜಿಎಸ್‌ಟಿಯನ್ನು ಇಎಂಐ ಮೂಲಕ ಪಾವತಿಸುವ ವ್ಯವಸ್ಥೆ ಬರಬಹುದು” ಎಂದಿದ್ದಾರೆ.

ಇನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಹ್ಮಣ್ಯಂ ಅವರೂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಟ್ಟು ಜೋಳ ಮಾರಾಟ ಪ್ರಮಾಣ, ತೆರಿಗೆ ಲಾಭ ಮೊದಲಾದವುಗಳ ಲೆಕ್ಕಾಚಾರವನ್ನು ವಿವರಿಸಿದ್ದಾರೆ. ಪಾಪ್‌ಕಾರ್ನ್‌ ಮೇಲೆ ಜಿಎಸ್‌ಟಿ ವಿಧಿಸುವ ಸರ್ಕಾರದ ಈ ಕ್ರಮದಿಂದ ಶೇಕಡ 0.013ರಷ್ಟು ತೆರಿಗೆ ಲಭಿಸುತ್ತದೆ. ಆದರೆ ಅದಕ್ಕಾಗಿ ಜನರಿಗೆ ಆಗುವ ಕಷ್ಟವೆಷ್ಟು? ಇದು ಯಾವ ತಾರ್ಕಿಕತೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಅದಕ್ಕೂ ಹಿಂದಿನ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, “ಇದು ರಾಷ್ಟ್ರೀಯ ದುರಂತವಾಗಿದ್ದು, ಸರಳ ತೆರಿಗೆ ಎಂಬ ಜಿಎಸ್‌ಟಿ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಎಸ್ ಟಿ 1
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಾಧಿಕಾರಗಳ ನಿರ್ಲಕ್ಷ್ಯ: ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಅಪ್ರಾಪ್ತರು ಹಾಗೂ ಮಹಿಳೆಯರ...

ಜನಸಂಖ್ಯಾ ಸಮಿತಿಯ ‘ಧರ್ಮ ಆಧಾರಿತ’ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಾಜ್ಯ ಸರ್ಕಾರಗಳ ಪರದಾಟ

ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು (HLCDC)...

ಟ್ರ್ಯಾಫಿಕ್ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ವಿದ್ಯುತ್ ಬಿಲ್‌ನೊಂದಿಗೆ ವಸೂಲಿ ಮಾಡಲು ಸುಪ್ರೀಂ ಸಲಹೆ

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ಇ-ಚಲನ್‌ಗಳ ಬಾಕಿ ಮೊತ್ತವನ್ನು ವಸೂಲಿ ಮಾಡಲು...

ಮುಂಬೈ | ಮ್ಯಾನ್‌ಹೋಲ್‌ಗೆ ಇಳಿದ ಓರ್ವ ಕಾರ್ಮಿಕ ಸಾವು, ಮತ್ತೊಬ್ಬರು ಗಂಭೀರ

ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಕಾರ್ಮಿಕರು ವಿಷಕಾರಿ ಅನಿಲದಿಂದ ಅಸ್ವಸ್ಥಗೊಂಡು, ಓರ್ವ...