ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಮೂವರು ಮುಸ್ಲಿಂ ಯುವಕರ ಮೇಲೆ ಹಿಂದುತ್ವ ಕೋಮುವಾದಿ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಮಹಾಸೇನಾ ಜಿಲ್ಲೆಯ ವಳವಾಡಿ ಗ್ರಾಮದಲ್ಲಿ ದುರ್ಘಟನೆ ನಡೆಸಿದೆ. ವಳವಾಡಿ ಸಮೀಪದ ಅಗೋಲ್ ಗ್ರಾಮದ ನಿವಾಸಿ ಸಾಹಿಲ್ ಪರವಾನಗಿ ಪಡೆದು ದನದ ವ್ಯಾಪಾರ ಮಾಡುತ್ತಿದ್ದರು. ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಕಾನೂನಾತ್ಮಕವಾಗಿ ಅನುಮತಿ ಪಡೆದು ಮೂರು ಹಸುಗಳನ್ನು ವಳವಾಡಿ ಗ್ರಾಮದ ಮೂಲಕ ತಮ್ಮೂರಿಗೆ ಸಾಗಿಸುತ್ತಿದ್ದರು.
ಈ ವೇಳೆ, ಅವರನ್ನು ಅಡ್ಡಗಟ್ಟಿದ ಹಿಂದುತ್ವ ಕೋಮುವಾದಿಗಳ ಗುಂಪು, ಗೋಸಂರಕ್ಷಣೆಯ ಹೆಸರಿನಲ್ಲಿ ಥಳಿಸಿದ್ದಾರೆ. ಅಮಾನುಷವಾಗಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದುತ್ವವಾದಿಗಳು ಪೊಲೀಸರಿಗೆ ಕರೆ ಮಾಡಿ, ಮೂವರನ್ನು ಬಂಧಿಸಿ, ಕೈಕಾಲು ಮುರಿದು ಪಾಠ ಕಲಿಸಿದೆ ಎಂದು ಹೇಳಿತ್ತಿವುದು ವಿಡಿಯೋದಲ್ಲಿ ಸೆರೆಯಾಗಿದೆ.