ಕೇಂದ್ರ ಸರ್ಕಾರವು ಬಿಜೆಪಿ ಆಡಳಿತವಿರುವ ಗುಜರಾತ್ ಅನ್ನು ‘ಮಾದರಿ ರಾಜ್ಯ’ ಎಂದು ಕರೆಯುತ್ತದೆ. ತ್ವರಿತ ಕೈಗಾರಿಕಾ ವಿಸ್ತರಣೆಯ ಕಾರಣದಿಂದಾಗಿ ಗುಜರಾತ್‌ನ ಅಭಿವೃದ್ಧಿ ಮಾದರಿಯನ್ನು ಹಾಡಿಹೊಗಳಲಾಗುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಅಸಮಾನತೆ ವಿಚಾರಕ್ಕೆ ಬಂದಾಗ, ಅಪೌಷ್ಟಿಕತೆ, ಬಡತನ, ಶಿಕ್ಷಣದ ವಿಚಾರಕ್ಕೆ ಬಂದಾಗ ಗುಜರಾತ್ ಹಿಂದುಳಿದಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಆರೋಗ್ಯ, ಶಿಕ್ಷಣ ಮತ್ತು ಬಡತನ ನಿರ್ವಹಣೆ ಸೇರಿದಂತೆ ಇತರ ಸೂಚ್ಯಂಕಗಳಲ್ಲಿ ಗುಜರಾತ್, ಹಿಂದುಳಿದ ರಾಜ್ಯ ಎನಿಸಿಕೊಂಡಿರುವ ಬಿಹಾರಕ್ಕೆ ಅಧಿಕ ಸಮೀಪದಲ್ಲಿದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ.
ಇದನ್ನು ಓದಿದ್ದೀರಾ? ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್ ಮಾಡಿ ಬಿಹಾರದ ಇಲಾಖೆಯೆಂದು ಮರುನಾಮಕರಣ
‘ಇಂಡಿಯಾ:ದಿ ಚಾಲೆಂಜ್ ಆಫ್ ಕಾಂಟ್ರಾಸ್ಟೆಡ್ ರೀಜನಲ್ ಡೈನಾಮಿಕ್ಸ್’ ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿ ಕ್ರಿಸ್ಟೋಫ್ ಜಾಫ್ರೆಲಾಟ್, ವಿಘ್ನೇಶ್ ರಾಜಮಣಿ ಮತ್ತು ನೀಲ್ ಭಾರದ್ವಾಜ್ ಅವರು ಮೂರು ರಾಜ್ಯಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ.
‘ಭಾರತದೊಳಗಿನ ವಿಭಿನ್ನ ಭಾರತ’ ಎಂಬ ಪರಿಕಲ್ಪನೆಯಲ್ಲಿ ಬಿಹಾರ, ಗುಜರಾತ್ ಮತ್ತು ತಮಿಳುನಾಡು- ಮೂರು ರಾಜ್ಯಗಳ ವಿಶ್ಲೇಷಣೆ ಮಾಡಿದ್ದಾರೆ. ಈ ಮೂರು ರಾಜ್ಯಗಳ ಸಾಮಾಜಿಕ- ಆರ್ಥಿಕ ವ್ಯತ್ಯಾಸಗಳು, ಸರ್ಕಾರದ ನೀತಿಗಳನ್ನು ಈ ಅಧ್ಯಯನದಲ್ಲಿ ಹೋಲಿಕೆ ಮಾಡಲಾಗಿದೆ.
ಒಂದೆಡೆ ಬಿಹಾರ ಅಭಿವೃದ್ಧಿ ಹೊಂದದ ರಾಜ್ಯವಾದರೆ, ಗುಜರಾತ್ ತಲಾ ಆದಾಯ ಲೆಕ್ಕಾಚಾರದಲ್ಲಿ ಶ್ರೀಮಂತ ರಾಜ್ಯವಾಗಿದೆ. ಕ್ಷಿಪ್ರವಾಗಿ ಕೈಗಾರಿಕಾ ಅಭಿವೃದ್ಧಿ ನಡೆದ ಕಾರಣದಿಂದಾಗಿ ಮಾದರಿ ರಾಜ್ಯವಾಗಿದೆ. ಆದರೆ ಶಿಕ್ಷಣಕ್ಕೆ ಹೆಚ್ಚು ಹೂಡಿಕೆ ಮಾಡದ ಕಾರಣದಿಂದಾಗಿ ಅಸಮಾನತೆಯು ಗುಜರಾತ್‌ನಲ್ಲಿ ಮೇಲುಗೈ ಸಾಧಿಸಿದೆ” ಎಂದು ಅಧ್ಯಯನ ವರದಿ ಹೇಳಿದೆ.
ಇದನ್ನು ಓದಿದ್ದೀರಾ? ಗುಜರಾತ್ | ಮಹಿಳಾ ರೋಗಿಗಳ ಖಾಸಗಿ ವಿಡಿಯೋ ಮಾರಾಟ; ಏಳು ಮಂದಿ ಬಂಧನ
ಸಾಮಾಜಿಕ ಕ್ಷೇತ್ರಗಳಿಗೆ ಮಾಡಲಾದ ವೆಚ್ಚದ ಆಧಾರದಲ್ಲಿ ಈ ಮೂರು ರಾಜ್ಯಗಳು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತದೆ ಎಂಬುದನ್ನು ಸಂಶೋಧನೆ ಮಾಡಲಾಗಿದೆ. “ಬಿಹಾರ ಅತೀ ಕಡಿಮೆ ಮೂಲಸಂಪತ್ತು ಇದ್ದರೂ ಕೂಡಾ ಸಾಮಾಜಿಕ ಕ್ಷೇತ್ರಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತದೆ, ತಮಿಳುನಾಡು ಅದಕ್ಕೂ ಅಧಿಕ ಹೂಡಿಕೆ ಮಾಡುತ್ತದೆ. ಆದರೆ ಗುಜರಾತ್ ಶಿಕ್ಷಣ, ಆರೋಗ್ಯ ಮತ್ತು ವಸತಿ ವ್ಯವಸ್ಥೆ ಮೊದಲಾದವುಗಳಿಗೆ ಅತೀ ಕಡಿಮೆ ಹೂಡಿಕೆ ಮಾಡುತ್ತದೆ. ಈ ವಿಚಾರದಲ್ಲಿ ತಮಿಳುನಾಡಿಗಿಂತ ಹಿಂದಿರುವುದು ಮಾತ್ರವಲ್ಲ, ಬಿಹಾರಕ್ಕಿಂತ ಹಿಂದಿದೆ” ಎಂದು ವರದಿ ತಿಳಿಸಿದೆ.
“ಗುಜರಾತ್ ಸಂಪನ್ಮೂಲಭರಿತವಾಗಿದ್ದರೂ ಕೂಡಾ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಲ್ಲ. ಆದರೆ ಬಿಹಾರಕ್ಕಿಂತ ಹೆಚ್ಚು ಹೂಡಿಕೆ ಮಾಡುತ್ತದೆ. ಆದರೂ ಕೂಡಾ ಗುಜರಾತ್‌ನ ಹೂಡಿಕೆಯು ಶೇಕಡ 10.5ರಷ್ಟು ಏರಿಕೆಯಾಗಿದ್ದರೆ, ಬಿಹಾರದ ಹೂಡಿಕೆ ಶೇಕಡ 29.5ರಷ್ಟು ಹೆಚ್ಚಳವಾಗಿದೆ. ತಮಿಳುನಾಡು ಹೂಡಿಕೆ ಶೇಕಡ 20.5ರಷ್ಟು ಏರಿಕೆಯಾಗಿದೆ” ಎಂದು ತಿಳಿಸಿದ್ದಾರೆ.
