‘ದಿ ನ್ಯೂಸ್ ಮಿನಿಟ್’ ಸಂಸ್ಥಾಪಕಿ ಧನ್ಯ ರಾಜೇಂದ್ರನ್ ಮತ್ತು ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ವಿರುದ್ಧದ ಅವಹೇಳನಕಾರಿ ಯೂಟ್ಯೂಬ್ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಮಾಧ್ಯಮ ಸಂಸ್ಥೆಗಳಾದ ಕರ್ಮ ನ್ಯೂಸ್, ಜನ್ಮಭೂಮಿ, ಜನಮ್ ಟಿವಿ ಮತ್ತು ನ್ಯೂಸ್ ಇಂಡಿಯಾ ಮಲಯಾಳಂನ ಲೇಖನಗಳು ಮತ್ತು ವಿಡಿಯೋಗಳು ಧನ್ಯ ರಾಜೇಂದ್ರನ್ ಅವರು ಅಂತಾರಾಷ್ಟ್ರೀಯ ಘಟಕ, ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ ಅವರ ಏಜೆಂಟ್ ಮತ್ತು ಡಿಜಿಪಬ್ ಮೂಲಕ ಹಣವನ್ನು ರವಾನಿಸಿದ್ದಾರೆ ಎಂದು ಆರೋಪಿಸಿ ವರದಿ ಮಾಡಿದೆ.
ಡಿಜಿಪಬ್ ದೇಶದ ಪ್ರಮುಖ ಡಿಜಿಟಲ್ ಮಾಧ್ಯಮಗಳ ಸಂಘವಾಗಿದೆ. ಪ್ರಸ್ತುತ ಅಧ್ಯಕ್ಷೆ ಧನ್ಯ ರಾಜೇಂದ್ರನ್ ಆಗಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ದಿ ನ್ಯೂಸ್ ಮಿನಿಟ್, ನ್ಯೂಸ್‌ಲಾಂಡ್ರಿ ಮತ್ತು ಕನ್‌ಫ್ಲುಯೆನ್ಸ್ ಮೀಡಿಯಾದ ಸಂಯೋಜನೆಯೊಂದಿಗೆ ಕೇರಳ ಮೀಡಿಯಾ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮವಾದ ಕಟಿಂಗ್ ಸೌತ್ ಬಗ್ಗೆ ಜನ್ಮಭೂಮಿ ಸೇರಿದಂತೆ ಕೆಲವು ಮಾಧ್ಯಮಗಳು ಮಾನಹಾನಿಕರ ಲೇಖನಗಳನ್ನು ಮತ್ತು ವೀಡಿಯೊಗಳನ್ನು ಬಿತ್ತರಿಸಿದ್ದವು/ ಪ್ರಸಾರ ಮಾಡಿದ್ದವು.
ಕಟಿಂಗ್ ಸೌತ್ ಕಾರ್ಯಕ್ರಮವನ್ನು ಮಾಧ್ಯಮ ಸಂಸ್ಥೆಗಳಾದ ಕರ್ಮ ನ್ಯೂಸ್, ಜನಮ್ ಟಿವಿ ಮತ್ತು ಜನ್ಮಭೂಮಿ ಪತ್ರಿಕೆ ಪ್ರತ್ಯೇಕತಾವಾದಿ ಅಜೆಂಡಾ ಎಂದು ಆರೋಪಿಸಿತ್ತು. ಆದರೆ ಮೇಲ್ನೋಟಕ್ಕೆ ವೀಡಿಯೊಗಳು ಮತ್ತು ಪೋಸ್ಟ್‌ಗಳು ಮಾನಹಾನಿಕರ ಆರೋಪಗಳನ್ನು ಒಳಗೊಂಡಿದ್ದು, ಸತ್ಯವನ್ನು ಪರಿಗಣಿಸದೆ ಅಜಾಗರೂಕತೆಯಿಂದ ಮಾಡಲಾಗಿದೆ ಎಂದು ಹೈಕೋರ್ಟ್ ಗಮನಿಸಿದೆ.
ಇದನ್ನು ಓದಿದ್ದೀರಾ? 600 ಜನ ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮ ನಿರ್ಬಂಧ ಆದೇಶ ಪಡೆದುಕೊಂಡಿದ್ದಾರೆ!
2 ಕೋಟಿ ರೂಪಾಯಿ ಮಾನನಷ್ಟ ಪರಿಹಾರ, ಕಡ್ಡಾಯ ತಡೆಯಾಜ್ಞೆ ಮತ್ತು ಕರ್ಮ ನ್ಯೂಸ್ ಕ್ಷಮೆಯಾಚಿಸುವಂತೆ ಕೋರಿ ಧನ್ಯ ರಾಜೇಂದ್ರನ್ ಮತ್ತು ಡಿಜಿಪಬ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಧನ್ಯ ರಾಜೇಂದ್ರನ್ ವಿರುದ್ಧದ ಅವಹೇಳನಕಾರಿ ವೀಡಿಯೊ, ಪೋಸ್ಟ್‌ಗಳನ್ನು ತೆಗೆದುಹಾಕಲು ಹೈಕೋರ್ಟ್ ಆದೇಶಿಸಿದೆ.
2023ರಲ್ಲಿ, ನ್ಯೂಸ್‌ಲಾಂಡ್ರಿ ಮತ್ತು ಕನ್‌ಫ್ಲೂಯೆನ್ಸ್ ಮೀಡಿಯಾ ಕೂಡ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು ‘ಕಟಿಂಗ್ ಸೌತ್ 2023’ ಎಂಬ ಹೆಸರು ವಿಭಜಿಸುವ ಉದ್ದೇಶವನ್ನು ಸೂಚಿಸುವುದಿಲ್ಲ. ಬದಲಾಗಿ ‘ಕಟಿಂಗ್ ಎಡ್ಜ್’ ಎಂಬ ಪದಗುಚ್ಛದಿಂದ ಬರುವ ‘ಕಟಿಂಗ್ ಚಾಯ್’ ಎಂಬುವುದಾಗಿದೆ. ನಾಸ್ಟಾಲ್ಜಿಯಾ, ಪರಿಚಿತತೆ, ಸತ್ಯ ಮತ್ತು ಸೌಕರ್ಯ ಅರ್ಥವನ್ನು ತಿಳಿಸುವ ಗುರಿಯನ್ನು ಸೇರಿದ ಸುವಾಸನೆಯುಕ್ತ ಚಹಾವನ್ನು ಸೂಚಿಸುತ್ತದೆ ಎಂದು ಸಂಸ್ಥೆಯು ಹೇಳಿದೆ.