ʼಇಲ್ಲಿ ಕಾಸಿದ್ದವನಿಗೆ ಕಿಮ್ಮತ್ತುʼ: ಭಾರತದ ಪರೀಕ್ಷಾ ವ್ಯವಸ್ಥೆ ಕಲಿಸುತ್ತಿರುವ ಪಠ್ಯೇತರ ಪಾಠ!

Date:

ಈ ಇಡೀ ಸಾಂಸ್ಥಿಕ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ತಾನಂದುಕೊಂಡ ಕೆಲಸವನ್ನ ಸಲೀಸಾಗಿ ಮಾಡುತ್ತಿದೆ. ಅದು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುತ್ತಿಲ್ಲ, ಬದಲಿಗೆ ತಾನು ಮಾಡಿದ ತಪ್ಪುಗಳಿಗೆ ವಿದ್ಯಾರ್ಥಿಗಳೇ ಬೆಲೆ ತೆರುವಂತೆ ಅವರಿಗೆ ತರಬೇತಿ ನೀಡುತ್ತಿದೆ ಮತ್ತು ಮರ್ಯಾದೆ ಇಲ್ಲದೆ ಅದನ್ನೇ ‘ಪ್ರಗತಿ’ ಎಂದು ಕರೆಯುತ್ತಿದೆ!

- Advertisement -

ಪ್ರತಿ ವರ್ಷ ಮಾರ್ಚ್ ಮತ್ತು ಆಗಸ್ಟ್ ತಿಂಗಳ ನಡುವೆ ಭಾರತ ಎರಡು ರೀತಿಯ ಬಿಸಿಲಿಗೆ ಸಾಕ್ಷಿಯಾಗುತ್ತದೆ. ಒಂದು ನಿಸರ್ಗದ ಋತುಮಾನದ ಬಿಸಿಲಾದರೆ, ಮತ್ತೊಂದು ಇಡೀ ವ್ಯವಸ್ಥೆಯೇ ಸೃಷ್ಟಿಸುವ ಸಾಂಸ್ಥಿಕ ಬಿಸಿಲು. ಈ ಸಾಂಸ್ಥಿಕ ಬಿಸಿಲೇ ನಮ್ಮ ದೇಶದ ಪರೀಕ್ಷಾ ಕಾಲ. ಪರೀಕ್ಷೆ, ಫಲಿತಾಂಶ, ಮರುಮೌಲ್ಯಮಾಪನ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪ್ರವೇಶಾತಿ ಗಡುವುಗಳ ಈ ದೀರ್ಘ ಚಕ್ರ ವಿದ್ಯಾರ್ಥಿಗಳನ್ನು ಮತ್ತು ಅವರ ಕುಟುಂಬಗಳನ್ನು ಆರ್ಥಿಕವಾಗಿ, ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಸಂಪೂರ್ಣವಾಗಿ ಹಿಂಡಿಬಿಡುತ್ತದೆ. ಮನುಷ್ಯನೇ ಸೃಷ್ಟಿಸಿರುವ ಈ ಬಿಸಿಲು ನಿಸರ್ಗದ ಬಿಸಿಲಿಗಿಂತ ಭಿನ್ನ, ಭೀಕರ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸಿಬಿಎಸ್‌ಇ (CBSE) ಫಲಿತಾಂಶಗಳು ಪ್ರಕಟವಾದಾಗ, ಅದರ ಪರಿಣಾಮ ಒಬ್ಬ ವಿದ್ಯಾರ್ಥಿಯ ಮೇಲಷ್ಟೇ ಆಗುವುದಿಲ್ಲ. ಒಬ್ಬ ವಿದ್ಯಾರ್ಥಿಗೆ ಬರಬೇಕಿದ್ದ ಅಂಕಗಳು ಬಂದಿಲ್ಲ ಎಂದಿಟ್ಟುಕೊಳ್ಳೋಣ.. ಅಂದರೆ, 85 ಅಂಕಗಳ ಬದಲಿಗೆ 78 ಅಂಕ ಬಂದರೆ, ಅದು ಆ ವಿದ್ಯಾರ್ಥಿಯ ಅಂಕಪಟ್ಟಿ ಅಥವಾ ಗ್ರೇಡ್ ಅನ್ನು ಮಾತ್ರ ಬಾಧಿಸುವುದಿಲ್ಲ. ಇಡೀ ಮನೆಯ ನೆಮ್ಮದಿಯನ್ನೇ ಕೆಡಿಸುತ್ತದೆ. ಮಗನ ಕೋಚಿಂಗ್‌ಗಾಗಿ ಸಾಲ ಮಾಡಿದ್ದ ತಂದೆ, ನೆಂಟರಿಷ್ಟರ ಮುಂದೆ ಮಗಳು 90ಕ್ಕಿಂತ ಹೆಚ್ಚು ಅಂಕ ಗಳಿಸುತ್ತಾಳೆ ಎಂದು ಆಶಿಸಿದ್ದ ತಾಯಿ, ಹಿರಿಯರನ್ನ ನೋಡಿ ಕಲಿಯುವ ಮನೆಯ ಕಿರಿಯರು, ಫೇಲ್‌ ಆದರೆ ಹೇಗಿರಬಹುದೆಂಬುದನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿರುವ ಒಡಹುಟ್ಟಿದವರು… ಹೀಗೆ ಪ್ರತಿಯೊಬ್ಬರೂ ಆಗಲೇ ಬಂದ ʼಅಂಕʼದ ಭಾರವನ್ನು ಹೊರಬೇಕಾಗುತ್ತದೆ. ಪ್ರತಿ ವಿಷಯದ ಮರುಮೌಲ್ಯಮಾಪನಕ್ಕೆ ಸುಮಾರು 500 ರೂಪಾಯಿ ವೆಚ್ಚ ಮಾಡುವುದು ಎಲ್ಲಾ ಪೋಷಕರಿಗೂ ಸಾಮಾನ್ಯ ಎನಿಸುವುದಿಲ್ಲ. ಪೋಷಕರು ಒಂದೆಡೆ ಬೇಸರಗೊಂಡಿರುವ ಮಗುವನ್ನು ಸಮಾಧಾನಪಡಿಸುತ್ತಾ, ಇನ್ನೊಂದೆಡೆ ಖರ್ಚನ್ನು ಲೆಕ್ಕ ಹಾಕುತ್ತಾ, ಯೂನಿವರ್ಸಿಟಿಗಳ ಕಟ್‌-ಆಫ್‌ಗಳು ಬದಲಾಗಿವೆಯೇ ಎಂದು ಆತಂಕದಿಂದ ಪರಿಶೀಲಿಸುತ್ತಾ, ಯಾರಿಗಾಗಿಯೂ ಕಾಯದ ಅಡ್ಮಿಷನ್ ಪೋರ್ಟಲ್‌ಗಳನ್ನು ಅಸಹಾಯಕರಾಗಿ ಜಾಲಾಡುತ್ತಿರುತ್ತಾರೆ. ಮೂರ್ನಾಲ್ಕು ವಿಷಯಗಳ ಅಂಕಗಳಿಂದ ಅತೃಪ್ತರಾದ ವಿದ್ಯಾರ್ಥಿಗಳು ಕೇವಲ ಪೇಪರ್ ಮರುಪರಿಶೀಲನೆಗಾಗಿಯೇ 5,000 ದಿಂದ 10,000 ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗುತ್ತದೆ. ಇದರಲ್ಲಿ ಅವರು ಅನುಭವಿಸುವ ಆತಂಕ, ಲಾಸ್ಟ್‌ ಡೇಟ್‌ ತಳಮಳಕ್ಕಾಗಲೀ ಇಡೀ ವ್ಯವಸ್ಥೆ ಆ ಒಬ್ಬ ವಿದ್ಯಾರ್ಥಿಗೆ ನೀಡುವ ಮಾನಸಿಕ ಹಿಂಸೆಗಾಗಗಲೀ ಲೆಕ್ಕವಿಲ್ಲ. ಬರಬೇಕಾದ ಅಂಕ ಕೊಡದೆ, ತಪ್ಪು ಮಾಡಿದ್ದು ವ್ಯವಸ್ಥೆಯೇ. ಆದರೆ, ʼಅದನ್ನ ಸಾಬೀತುಪಡಿಸಬೇಕಾಗಿರುವುದು, ಅದಕ್ಕೆ ಖರ್ಚಾಗುವ ಹಣ ಭರಿಸಬೇಕಾಗುವುದು ವಿದ್ಯಾರ್ಥಿಯೇ.

ಇಲ್ಲಿಗೆ ಮುಗಿಯಲ್ಲ. ಸಿಬಿಎಸ್‌ಇ ಎಂಬುದು ಆರಂಭವಷ್ಟೇ. ಭಾರತದ ಪ್ರತಿಯೊಂದು MBBS ಸೀಟಿಗೆ ಏಕೈಕ ದಾರಿಯಾಗಿರುವ ಮತ್ತು ವಾರ್ಷಿಕವಾಗಿ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಬರೆಯುವ NEET-UGಯದ್ದು ಇನ್ನೊಂದು ದೊಡ್ಡ ಕಥೆ.  ಸಾಂಸ್ಥಿಕ ವೈಫಲ್ಯ ಎಷ್ಟು ಭೀಕರವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇತ್ತೀಚಿನ NEET ಹಗರಣ ನೆನಪಿಸಿಕೊಂಡರೆ ಸಾಕು. ಹಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದವು, ನಿರ್ದಿಷ್ಟ ಕಾರಣಗಳಿಲ್ಲದೆಯೂ ಸುಮಾರು 1,563 ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು (Grace Marks) ನೀಡಲಾಯಿತು ಮತ್ತು ಗೋದ್ರಾದ ಒಂದೇ ಕೇಂದ್ರದ 6 ಅಭ್ಯರ್ಥಿಗಳಿಗೆ ಫುಲ್‌ ಮಾರ್ಕ್ಸ್‌ ನೀಡಲಾಯಿತು. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತನ್ನ ಸಾರ್ವಜನಿಕವಾಗಿ ಬೆತ್ತಲಾಯಿತು. ಒಂದು ನೀಟ್ ಪರೀಕ್ಷೆಯ ಪ್ರಯತ್ನದ ನಿಜವಾದ ವೆಚ್ಚದ ಮುಂದೆ 1,700 ರೂಪಾಯಿಗಳ ಪರೀಕ್ಷಾ ಶುಲ್ಕ ತೀರಾ ನಗಣ್ಯವಾಗಿ ಕಾಣಬಹುದು. ವಾರ್ಷಿಕವಾಗಿ 1.5 ಲಕ್ಷದಿಂದ 4 ಲಕ್ಷ ರೂಪಾಯಿಗಳವರೆಗೆ ಕೋಚಿಂಗ್ ಫೀಸ್, ಜತೆಗೆ ವಸತಿ ವೆಚ್ಚ, ಅಧ್ಯಯನ ಸಾಮಗ್ರಿಗಳು ಮತ್ತು ಕಳೆದುಹೋಗುವ ಅಮೂಲ್ಯವಾದ ಯೌವನದ ದಿನಗಳು.. ಇವೆಲ್ಲವೂ ನಿಜವಾದ ವೆಚ್ಚಗಳೇ ಆಗಿವೆ. ಇಲ್ಲಿಯೂ ವಿಫಲವಾಗಿದ್ದು ವ್ಯವಸ್ಥೆಯೇ. ಆದರೆ, ವಿದ್ಯಾರ್ಥಿಯು ಒಂದುವೇಳೆ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿ ಬಂದಾಗ, ಈ ಹಿಂದೆ ಮಾಡಿದ ಯಾವುದೇ ಖರ್ಚುಗಳು ವಾಪಸ್ ಸಿಗುವುದಿಲ್ಲ. ಮತ್ತೊಮ್ಮೆ ಶುಲ್ಕ ಕಟ್ಟಬೇಕು, ಮತ್ತೆ ಕೋಚಿಂಗ್ ಆರಂಭವಾಗುತ್ತದೆ ಮತ್ತು ಒಂದಿಡೀ ವರ್ಷ ವ್ಯರ್ಥ. ಮೊದಲ ಪ್ರಯತ್ನಕ್ಕಾಗಿ ಜಮೀನು ಅಥವಾ ಪಿಂಚಣಿ ಉಳಿತಾಯವನ್ನು ಒತ್ತೆ ಇಟ್ಟು ಸಾಲ ಮಾಡಿದ್ದ ಕುಟುಂಬ, ಎರಡನೇ ಹೇಗೋ ತಡಕಾಡಿ, ಶತಾಯ ಗತಾಯ ಮತ್ತೆ ಹಣ ಹೊಂದಿಸಬೇಕಾಗುತ್ತದೆ.

ಇದೇ ಮಾದರಿ ದೇಶದ ಇತರ ಪರೀಕ್ಷೆಗಳಲ್ಲೂ ಪುನರಾವರ್ತನೆಯಾಗುತ್ತದೆ. JEE Main ಪರೀಕ್ಷೆಯಲ್ಲಿ ಸರ್ವರ್ ಕ್ರ್ಯಾಶ್‌ಗಳು, ಪ್ರವೇಶ ಪತ್ರದ ಸಮಸ್ಯೆಗಳು, ಕೊನೆ ಘಳಿಗೆಯ ಕೇಂದ್ರ ಬದಲಾವಣೆಗಳು ಮತ್ತು ಎಂದಿಗೂ ಪಾರದರ್ಶಕವಾಗಿ ವಿವರಿಸದ ಅಂಕಗಳ ನಾರ್ಮಲೈಸೇಶನ್ ಸೂತ್ರಗಳ ಗೊಂದಲಗಳಿರುತ್ತವೆ. ಪದವಿ ಪ್ರವೇಶಾತಿಯನ್ನು ಸರಳಗೊಳಿಸಲು 2022ರಲ್ಲಿ ಆರಂಭಿಸಲಾದ CUET ಪರೀಕ್ಷೆಯು, ತನ್ನ ಮೊದಲ ವರ್ಷದಲ್ಲೇ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ಮರುನಿಗದಿಪಡಿಸಿತು. ಇದು ದೆಹಲಿ ವಿಶ್ವವಿದ್ಯಾಲಯದ ಇಡೀ ಪ್ರವೇಶ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಿತು. ಹದಿಹರೆಯದ ಮಕ್ಕಳು ಸರಿಯಾದ ಮಾಹಿತಿಯಿಲ್ಲದೆ, ಕೈಗೆ ಸಿಕ್ಕ ಕಾಲೇಜನ್ನ ಆಯ್ಕೆ ಮಾಡಿಕೊಳ್ಳಬೇಕಾಯಿತು.

ಇತ್ತ CLAT ಪರೀಕ್ಷೆಯ ಉತ್ತರ ಪತ್ರಿಕೆಯ ವಿವಾದಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ರಾಷ್ಟ್ರ ಮಟ್ಟದ ಪ್ರತಿಯೊಂದು ಪರೀಕ್ಷೆಯ ಹಣೆಬರಹವೂ ಇದೇ. ಒಂದು ಸಂಸ್ಥೆ ಫೇಲ್ ಅದಾಗ ಅದು ತಾತ್ಕಾಲಿಕವಾಗಿ ತನ್ನ ಕೀರ್ತಿಯನ್ನಷ್ಟೇ ಕಳೆದುಕೊಳ್ಳುತ್ತದೆ. ಆದರೆ ಆ ಸಂಸ್ಥೆ ವಿದ್ಯಾರ್ಥಿಗೆ ದ್ರೋಹ ಬಗೆದಾಗ, ಆ ವಿದ್ಯಾರ್ಥಿಯೇ ತನ್ನ ಹಣ ಮತ್ತು ಜೀವಮಾನದ ಅಮೂಲ್ಯ ಸಮಯದ ಸಂಪೂರ್ಣ ಹೊರೆಯನ್ನು ಹೊರಬೇಕಾಗುತ್ತದೆ. ಈ ಅಸಮತೋಲನ ಆಕಸ್ಮಿಕವಲ್ಲ. ವ್ಯವಸ್ಥೆ ಇರುವುದೇ ಹೀಗೆ.

ಈ ವಿದ್ಯಮಾನಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದಾಗ, ಈ ಇಡೀ ವ್ಯವಸ್ಥೆಯನ್ನ ಒಂದು ‘ಆತಂಕವನ್ನು ಸುಲಿಯುವ ಆರ್ಥಿಕತೆ’ (Anxiety Extraction Economy) ಎಂದು ಕರೆಯಬಹುದು. ಇಲ್ಲಿ ಮಾರಾಟವಾಗುವ ಮುಖ್ಯ ಉತ್ಪನ್ನ ಜ್ಞಾನ ಅಥವಾ ಪ್ರಮಾಣಪತ್ರವಲ್ಲ, ಬದಲಿಗೆ ‘ಅನಿಶ್ಚಿತತೆ’. ಮೊದಲು ವ್ಯವಸ್ಥಿತವಾಗಿ ಅನಿಶ್ಚಿತತೆಯನ್ನು ಸೃಷ್ಟಿಸಲಾಗುತ್ತದೆ ಮತ್ತು ನಂತರ ಅದನ್ನೇ ವಿದ್ಯಾರ್ಥಿಗಳಿಗೆ ಹಣದ ಪರಿಹಾರಗಳ ರೂಪದಲ್ಲಿ ಮರಳಿ ಮಾರಲಾಗುತ್ತದೆ. ಇದರ ಸೂತ್ರ ತೀರಾ ಸರಳ.. ಇಡೀ ಭವಿಷ್ಯದ ಬದುಕನ್ನು ಒಂದೇ ಒಂದು ಪರೀಕ್ಷೆಯ ಮೇಲೆ ತೂಗು ಹಾಕುವುದು, ಕೋಚಿಂಗ್ ಉದ್ಯಮದ ಮೂಲಕ ತಯಾರಿಯನ್ನೇ ದೊಡ್ಡ ವ್ಯಾಪಾರ ಮಾಡುವುದು, ಪರೀಕ್ಷೆಯಲ್ಲಿ ಭಾಗವಹಿಸಲು ಶುಲ್ಕ ವಸೂಲಿಗಿಳಿಯುವುದು, ವ್ಯವಸ್ಥೆಯೊಳಗೆ ಒಮ್ಮೊಮ್ಮೆ ಬೇಕಂತಲೇ ತಪ್ಪುಗಳನ್ನು ತರುವುದು, ನಂತರ ಆ ತಪ್ಪುಗಳಿಂದ ಸೃಷ್ಟಿಯಾದ ಅನುಮಾನಗಳನ್ನು ಬಗೆಹರಿಸಲು ಮತ್ತೆ ಹಣ ಪೀಕುವುದು. ಪೇಪರ್ ಮರುಪರಿಶೀಲನೆಗೆ 500 ರೂಪಾಯಿ, ಉತ್ತರ ಪತ್ರಿಕೆ ನೋಡಲು 700 ರೂಪಾಯಿ ಮತ್ತು ಒಂದು ಪ್ರಶ್ನೆಯನ್ನು ಪ್ರಶ್ನಿಸಲು 100 ರೂಪಾಯಿ! ಪ್ರಕ್ರಿಯೆಯಲ್ಲಿ ಆಗುವ ವಿಳಂಬವೂ ಈ ವ್ಯವಸ್ಥೆಗೆ ದೊಡ್ಡ ಲಾಭದಾಯಕವೇ. ಏಕೆಂದರೆ ತಪ್ಪಿಹೋಗುವ ಪ್ರವೇಶಾತಿಗಳು ಮತ್ತೊಂದು ವರ್ಷದ ಪರೀಕ್ಷೆ, ಹೆಚ್ಚುವರಿ ಶುಲ್ಕ ಮತ್ತು ಮತ್ತೊಂದು ಸುತ್ತಿನ ಕೋಚಿಂಗ್ ಬ್ಯುಸಿನೆಸ್‌ಗೆ ದಾರಿ ಮಾಡಿಕೊಡುತ್ತದಲ್ಲವೇ? ಸಾಂಪ್ರದಾಯಿಕ ಭ್ರಷ್ಟಾಚಾರ ಒಂದು ತೆರನಾದರೆ, ಈ ವ್ಯವಸ್ಥೆ ಎಲ್ಲರ ಕಣ್ಣೆದುರೇ ಹಗಲು ದರೋಡೆ ನಡೆಸುತ್ತದೆ. ಪ್ರತಿ ಶುಲ್ಕವೂ ಅಧಿಕೃತವಾಗಿ ಪ್ರಕಟವಾಗುತ್ತದೆ, ಪ್ರತಿ ಪೋರ್ಟಲ್ ಕೂಡ ಅಧಿಕೃತವಾಗಿರುತ್ತದೆ ಮತ್ತು ಪ್ರತಿ ಪಾವತಿಗೂ ರಸೀದಿ ಸಿಗುತ್ತದೆ! ಈ ವ್ಯವಸ್ಥೆ ಕಾಸು ಸುಲಿಯುವುದನ್ನು ಆಡಳಿತಾತ್ಮಕ ಪ್ರಕ್ರಿಯೆಯನ್ನಾಗಿ ಪರಿವರ್ತಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಅದಿನ್ನೂ ಭದ್ರವಾಗಿ ಉಳಿದುಕೊಂಡಿದೆ!

ಇದನ್ನೂ ಓದಿ: ʼಲಗಾನ್‌ʼಗೆ 25ರ ಸಂಭ್ರಮ: ಸಾರ್ವಕಾಲಿಕ ಶ್ರೇಷ್ಠ ʼಕ್ರಿಕೆಟ್ ಮಹಾಕಾವ್ಯʼದ ಬಿಹೈಂಡ್‌ ದ ಸೀನ್ಸ್ ಕಥೆಗಳಿವು…!

ಈ ತಲೆ ಗಿರ್‌ ಎನ್ನಿಸುವ ಈ ಸಿಸ್ಟಮ್ ಹಿಂದೆ ಮಾನಸಿಕವಾಗಿ ತೆರಬೇಕಾದ ವೆಚ್ಚ ಇನ್ನಷ್ಟಿದೆ. ಪರೀಕ್ಷಾ ಅವಧಿಯಲ್ಲಿ ಯುವಜನರೊಂದಿಗೆ ಕೆಲಸ ಮಾಡುವ ಮಾನಸಿಕ ಆರೋಗ್ಯ ತಜ್ಞರು ಇದನ್ನು ಕೇವಲ ಸಾಮಾನ್ಯ ಪರೀಕ್ಷಾ ಒತ್ತಡ ಎಂದು ಕರೆಯುವುದಿಲ್ಲ. ‘ಸಾಂಸ್ಥಿಕ ಆತಂಕ’ (Institutionalised Anxiety) ಎನ್ನುತ್ತಾರೆ. ಅಂದರೆ, ತಾನು ನಂಬಿರುವ ಈ ವ್ಯವಸ್ಥೆಯನ್ನು ನಿಜವಾಗಿಯೂ ನಂಬಬಹುದೇ ಅಥವಾ ಇಲ್ಲವೇ ಎಂಬ ತಳಮಳದಿಂದ ಉಂಟಾಗುವ ವಿಶಿಷ್ಟವಾದ ಮಾನಸಿಕ ಯಾತನೆ ಇದು. ಕುಟುಂಬಗಳು ಸಹ ಈ ಯಾತನೆಯನ್ನು ಅನುಭವಿಸುತ್ತವೆ. ಊಟದ ಮೇಜಿನ ಬಳಿ ಆವರಿಸುವ ಮೌನದಲ್ಲಿ, ಯಾರಿಗೂ ತಿಳಿಯದಂತೆ ಬೆಟ್ಟದಂತೆ ಬೆಳೆಯುವ ಸಾಲಗಳಲ್ಲಿ, ಮಗುವಿನ ಫಲಿತಾಂಶವನ್ನು ಇಡೀ ಕುಟುಂಬಕ್ಕೆ ನೀಡುವ ಯೋಗ್ಯತೆ ಸರ್ಟಿಫಿಕೇಟಿನಂತೆ ನೋಡುವ ಸಾಮಾಜಿಕ ಸಂಸ್ಕೃತಿಯಲ್ಲಿ ಈ ನೋವು ಎದ್ದುಕಾಣುತ್ತದೆ.

ದೇಶದ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ಮತ್ತು ಮೌಲ್ಯಮಾಪನಗಳನ್ನು ಸುಧಾರಿಸುವ ಬಗ್ಗೆ ಮಾತನಾಡುತ್ತದೆ. ಆದರೆ ವಾಸ್ತವ ಬೇರೆಯದೇ ಇದೆ. ಆ ಒತ್ತಡವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಣಗಳಿಕೆಯ ಮಾರ್ಗವನ್ನಾಗಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಗೂ ಹಣ ನೀಡಬೇಕು, ಪರೀಕ್ಷೆ ಬರೆಯುವುದಕ್ಕೂ ಹಣ ನೀಡಬೇಕು, ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲೂ ಹಣ ನೀಡಬೇಕು ಮತ್ತು ಸಾಂಸ್ಥಿಕ ತಪ್ಪುಗಳಾದಾಗ ಅದಕ್ಕೂ ತಾವೇ ದಂಡ ತೆರಬೇಕು. ಈ ಇಡೀ ಪ್ರಕ್ರಿಯೆಯ ಮೂಲಕ ಒಬ್ಬ ವಿದ್ಯಾರ್ಥಿ ತನ್ನ ಪಠ್ಯದಲ್ಲಿರುವುದನ್ನು ಬಿಟ್ಟು ಎಂದಿಗೂ ಮರೆಯಲಾಗದ ಪಾಠವೊಂದನ್ನು ಕಲಿಯುತ್ತಾನೆ. ಸಾರ್ವಜನಿಕ ಸಂಸ್ಥೆಗಳು ಎಂದರೆ, ಹಣ ದೋಚುವ ತಾಣಗಳು ಮತ್ತು ಆ ವ್ಯವಹಾರದಲ್ಲಿ ತಾನು ಯಾವಾಗಲೂ ಸೋಲುವ ಕಡೆಯೇ ಇರುತ್ತೇನೆ ಎಂಬುದು. ʼಒಬ್ಬ ವಿದ್ಯಾರ್ಥಿ ತಾನು ಬರೆದ ಪರೀಕ್ಷೆಗೆ ನ್ಯಾಯಯುತವಾಗಿ ಮೌಲ್ಯಮಾಪನ ನಡೆದಿದೆಯೇ ಎಂದು ಖಚಿತಪಡಿಸಿಕೊಳ್ಳಲು ತಾನೇ ಹಣ ಪಾವತಿಸುತ್ತಿದ್ದಾನೆ ಎಂದರೆ, ಅವನು ತನಗೆ ಮೊದಲೇ ಉಚಿತವಾಗಿ ಸಿಗಬೇಕಿದ್ದ ‘ನಂಬಿಕೆ’ ಎಂಬ ಮೂಲಭೂತ ಹಕ್ಕಿನ ಒಂದು ಸಣ್ಣ ತುಣುಕನ್ನು ತನ್ನದೇ ಸ್ವಂತ ವೆಚ್ಚದಲ್ಲಿ ಮಾರುಕಟ್ಟೆಯಿಂದ ಖರೀದಿಸುತ್ತಿದ್ದಾನೆ ಎಂದರ್ಥ.

ಆ ನಿಟ್ಟಿನಲ್ಲಿ ನೋಡಿದರೆ, ಈ ಇಡೀ ಸಾಂಸ್ಥಿಕ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ತಾನಂದುಕೊಂಡ ಕೆಲಸವನ್ನ ಸಲೀಸಾಗಿ ಮಾಡುತ್ತಿದೆ. ಅದು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುತ್ತಿಲ್ಲ, ಬದಲಿಗೆ ತಾನು ಮಾಡಿದ ತಪ್ಪುಗಳಿಗೆ ವಿದ್ಯಾರ್ಥಿಗಳೇ ಬೆಲೆ ತೆರುವಂತೆ ಅವರಿಗೆ ತರಬೇತಿ ನೀಡುತ್ತಿದೆ ಮತ್ತು ಮರ್ಯಾದೆ ಇಲ್ಲದೆ ಅದನ್ನೇ ‘ಪ್ರಗತಿ’ ಎಂದು ಕರೆಯುತ್ತಿದೆ!

ಇದು ಡೆಕ್ಕನ್‌ ಹೆರಾಲ್ಡ್‌ನಲ್ಲಿ ಪ್ರಕಟವಾದ ತ್ರಿಶ್ನಾ ಸರ್ಕಾರ್‌ ಅವರ ಲೇಖನವೊಂದರ ಅನುವಾದ
https://www.deccanherald.com/education/indias-exam-economy-why-students-bear-the-cost-of-institutional-failure-4023973

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...