ಹಿಂದೂಗಳ ಜನಸಂಖ್ಯೆಯ ಪಾಲು 1950 ರಿಂದ 2015ರ ಅವಧಿಯಲ್ಲಿ ಶೇ.7.82 ಕುಸಿದಿದ್ದರೆ, ಮುಸ್ಲಿಮರ ಜನಸಂಖ್ಯೆ ಶೇ. 43.15 ರಷ್ಟು ಏರಿಕೆಯಾಗಿದೆ. ಇದು ಭಾರತದಲ್ಲಿ ವೈವಿದ್ಯತೆಯ ವಾತಾವರಣವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ(ಇಎಸಿ-ಪಿಎಂ) ಇತ್ತೀಚಿನ ವರದಿಯೊಂದು ತಿಳಿಸಿದೆ.
ಧಾರ್ಮಿಕ ಅಲ್ಪಸಂಖ್ಯಾತರ ಪಾಲು – ದೇಶಾದ್ಯಂತ ವಿಶ್ಲೇಷಣೆ’(1950-2015) ವರದಿಯಲ್ಲಿ ತಿಳಿಸಲಾಗಿದೆ. ಜೈನರ ಜನಸಂಖ್ಯೆಯು ಭಾರತದಲ್ಲಿ 1950-2015ರವರೆಗೂ ಶೇ. 0.45 ರಿಂದ ಶೇ. 0.36 ಕ್ಕೆ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಿಂದೂಗಳ ಸಂಖ್ಯೆ 1950 ರಿಂದ 2015ರವರೆಗೆ ಶೇ. 84.68 ರಿಂದ ಶೇ. 78.06ರವರೆಗೆ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 9.84 ರಿಂದ ಶೇ. 14.09ರವರೆಗೆ ಏರಿಕೆಯಾಗಿದೆ. ಭಾಗಾಂಶದಲ್ಲಿ ಹಿಂದೂಗಳ ಸಂಖ್ಯೆ ಶೇ.7.82 ಇಳಿಕೆಯಾಗಿದ್ದರೆ, ಮುಸ್ಲಿಮರ ಪಾಲು ಶೇ.43.15 ರಷ್ಟು ಏರಿಕೆಯಾಗಿದೆ ಎಂದು ವರದಿಯನ್ನು ಸಿದ್ಧಪಡಿಸಿದ ಇಎಸಿ-ಪಿಎಂ ಮಂಡಳಿಯ ಮುಖ್ಯಸ್ಥರಾದ ಶಮಿಕ ರವಿ ತಿಳಿಸಿದ್ದಾರೆ.
ವರದಿಯಲ್ಲಿ 1950 ರಿಂದ 2015ರವರೆಗೆ ಕ್ರೈಸ್ತರ ಜನಸಂಖ್ಯೆ ಶೇ. 2.24 ರಿಂದ ಶೇ. 2.36 ವರೆಗೆ ಏರಿಕೆಯಾಗಿದೆ. ಭಾಗಾಂಶದಲ್ಲಿ ಶೇ.5.38 ರಷ್ಟು ಹೆಚ್ಚಳ ಕಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ
ಸಿಖ್ಖರ ಜನಸಂಖ್ಯೆ 1950 ರಿಂದ 2015ರ ಅವಧಿಯಲ್ಲಿ ಶೇ.24 ರಷ್ಟು ಏರಿಕೆಯಾಗಿದೆ. ಭಾಗಾಂಶದಲ್ಲಿ ಶೇ.6.58 ರಷ್ಟು ಹೆಚ್ಚಾಗಿದೆ. ಅದೇ ರೀತಿ ಪಾರ್ಸಿ ಜನಸಂಖ್ಯೆ ಶೇ. 85 ರಷ್ಟು ಕುಸಿತ ಕಂಡಿದೆ. ಶೇಕಡವಾರಿನಲ್ಲಿ 0.03 ರಿಂದ 0.004 ರಷ್ಟು ಹೆಚ್ಚಳಗೊಂಡಿದೆ.
ಅಂಕಿಅಂಶಗಳು ಭಾರತದಲ್ಲಿ ವೈವಿದ್ಯತೆಯನ್ನು ಬೆಳಸಲು ಉತ್ತಮ ವಾತಾವರಣವಿದೆ ಎಂಬುದನ್ನು ಸೂಚಿಸುತ್ತದೆ. ತಳಮಟ್ಟದ ವಿಧಾನದ ಮೂಲಕ ಪೌಷ್ಟಿಕ ವಾತಾರಣ ಹಾಗೂ ಸಾಮಾಜಿಕ ಬೆಂಬಲ ಒದಗಿಸದೆ ಅನುಕೂಲ ವಂಚಿತ ಸಮಾಜಗಳ ಉತ್ತಮ ಜೀವನ ಮಟ್ಟವನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಿಂದೂಗಳ ಜನಸಂಖ್ಯೆಯ ಇಳಿಕೆ ಹಾಗೂ ಅಲ್ಪಸಂಖ್ಯಾತರ ಗಮನಾರ್ಹ ಏರಿಕೆಗೆ ನೀತಿ ನಿರೂಪಣೆಗಳು, ರಾಜಕೀಯ ನಿರ್ಧಾರಗಳು ಹಾಗೂ ಸಾಮಾಜಿಕ ಪ್ರಕ್ರಿಯೆಗಳು ಪ್ರಮುಖ ಕಾರಣ ಎಂದು ತಿಳಿಸಲಾಗಿದೆ.
ಮಾಲ್ಡೀವ್ಸ್ ಹೊರತುಪಡಿಸಿ ಉಳಿದ ದಕ್ಷಿಣ ಏಷ್ಯಾದ ಮುಸ್ಲಿಂ ಬಾಹುಳ್ಯ ದೇಶಗಳಲ್ಲಿ ಅಲ್ಲಿನ ಪ್ರಮುಖ ಧಾರ್ಮಿಕ ಜನಸಂಖ್ಯೆ ಏರಿಕೆಗೊಂಡಿದೆ. ಅದೇ ರೀತಿ ಹಿಂದೂಗಳು ಹೆಚ್ಚಿರುವ ಭೂತಾನ್ ಹಾಗೂ ಬೌದ್ಧರ ಪ್ರಾಬಲ್ಯದ ಶ್ರೀಲಂಕಾದಲ್ಲಿ ಪ್ರಮುಖ ಧಾರ್ಮಿಕ ಜನಸಂಖ್ಯೆ ಏರಿಕೆ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಾಂಗ್ಲಾದೇಶದಲ್ಲಿ ಶೇ.18, ಪಾಕಿಸ್ತಾನದಲ್ಲಿ ಶೇ.3.75 ಹಾಗೂ ಬಾಂಗ್ಲಾದೇಶದಲ್ಲಿ ಶೇ. 10 ರಷ್ಟು ಮುಸ್ಲಿಮರ ಜನಸಂಖ್ಯೆ ಏರಿಕೆಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
