ಡಿಸೆಂಬರ್ ಮುಗಿದು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದು, ಇದರ ಜತೆಗೆ 2024ರ ಜನವರಿ ತಿಂಗಳಿನಲ್ಲಿ ರಜಾ ದಿನಗಳ ಅಬ್ಬರವೂ ಮುಂದುವರೆದಿದೆ. ಭಾರತದಲ್ಲಿ ಹಣಕಾಸಿನ ವಹಿವಾಟು ಮತ್ತು ಸೇವೆಗಳ ಮೇಲೆ ಬ್ಯಾಂಕ್ ರಜಾದಿನಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಪ್ರತಿ ವರ್ಷ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಾಷ್ಟ್ರೀಯ ಮತ್ತು ಸರ್ಕಾರಿ ರಜಾದಿನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ವರ್ಷವೂ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜನವರಿಯಲ್ಲಿ ಒಟ್ಟು 16 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಜನವರಿ 11ರಿಂದ 17ರವರೆಗೆ ಸತತ ಏಳು ದಿನಗಳ ಕಾಲ ರಜೆ ಇದ್ದು, ಕರ್ನಾಟಕದಲ್ಲಿ ಈ ಅವಧಿಯಲ್ಲಿ ಜನವರಿ 13ರಿಂದ 15ರವರೆಗೆ ಸತತ ಮೂರು ದಿನ ರಜೆ ಇದೆ. ಜನವರಿ 26 ಗಣರಾಜ್ಯೋತ್ಸವ ಹಿನ್ನೆಲೆ, ಸಾರ್ವತ್ರಿಕ ರಜೆಯಾಗಿದೆ.
ಸಂಕ್ರಾಂತಿ, ಪೊಂಗಲ್, ಗುರು ಗೋವಿಂದ್ ಜಯಂತಿ, ಸುಭಾಷ್ ಚಂದ್ರ ಬೋಸ್ ಜಯಂತಿ ಇತ್ಯಾದಿ ಹಬ್ಬ ಹರಿದಿನಗಳಿಗೆ ನಾನಾ ಪ್ರದೇಶಗಳಲ್ಲಿ ರಜೆ ಇದೆ.
ಭಾರತದಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ
ಜನವರಿ 1: ಹೊಸ ವರ್ಷದ ದಿನ ರಾಜಸ್ಥಾನ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ಸಿಕ್ಕಿಂ, ತಮಿಳುನಾಡಿನಲ್ಲಿ ರಜೆ
ಜನವರಿ 7: ಭಾನುವಾರದ ರಜೆ
ಜನವರಿ 11, ಗುರುವಾರ: ಮಿಷನರಿ ದಿನ (ಮಿಝೋರಾಮ್ ರಾಜ್ಯದಲ್ಲಿ ರಜೆ)
ಜನವರಿ 12, ಶುಕ್ರವಾರ: ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳದಲ್ಲಿ ರಜೆ)
ಜನವರಿ 13: ಎರಡನೇ ಶನಿವಾರದ ರಜೆ
ಜನವರಿ 14: ಸಂಕ್ರಾಂತಿ ಹಾಗೂ ಭಾನುವಾರದ ರಜೆ
ಜನವರಿ 15, ಸೋಮವಾರ: ಪೊಂಗಲ್, ತಿರುವಳ್ಳುವರ್ ದಿನ (ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ರಜೆ)
ಜನವರಿ 16, ಮಂಗಳವಾರ: ತುಸು ಪೂಜಾ (ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ನಲ್ಲಿ ರಜೆ)
ಜನವರಿ 17, ಬುಧವಾರ: ಗುರು ಗೋವಿಂದ್ ಸಿಂಗ್ ಜಯಂತಿ
ಜನವರಿ 21: ಭಾನುವಾರದ ರಜೆ
ಜನವರಿ 23, ಮಂಗಳವಾರ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25, ಗುರುವಾರ: ಹಿಮಾಚಲ ಪ್ರದೇಶ ರಾಜ್ಯ ದಿನ
ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ
ಜನವರಿ 27: ನಾಲ್ಕನೇ ಶನಿವಾರದ ರಜೆ
ಜನವರಿ 28: ಭಾನುವಾರದ ರಜೆ
ಜನವರಿ 31, ಬುಧವಾರ: ಮೀ ದಾಮ್ ಮೇ ಫೀ ಉತ್ಸವ (ಅಸ್ಸಾಮ್ನಲ್ಲಿ ರಜೆ)
ಕರ್ನಾಟಕದಲ್ಲಿ ಬ್ಯಾಂಕ್ ರಜೆ
ಕರ್ನಾಟಕದಲ್ಲಿ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಹಾಗೂ ಭಾನುವಾರ, ಶನಿವಾರದ ರಜೆಗಳೂ ಸೇರಿ ಜನವರಿಯಲ್ಲಿ 8 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಜನವರಿ 7: ಭಾನುವಾರದ ರಜೆ
ಜನವರಿ 13: ಎರಡನೇ ಶನಿವಾರದ ರಜೆ
ಜನವರಿ 14: ಭಾನುವಾರದ ರಜೆ
ಜನವರಿ 15, ಸೋಮವಾರ: ಸಂಕ್ರಾಂತಿ,
ಜನವರಿ 21: ಭಾನುವಾರದ ರಜೆ
ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ
ಜನವರಿ 27: ನಾಲ್ಕನೇ ಶನಿವಾರದ ರಜೆ
ಜನವರಿ 28: ಭಾನುವಾರದ ರಜೆ
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲಾರಿಗೆ ಕಾರು ಢಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು: ಮೂವರ ಸ್ಥಿತಿ ಗಂಭೀರ
2024ರಲ್ಲಿ 21 ಸರ್ಕಾರಿ ರಜಾ ದಿನಗಳು
ಕರ್ನಾಟಕ ಸರ್ಕಾರವು 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಬರುವ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ, ಒಟ್ಟು 21 ದಿನ ಸರ್ಕಾರಿ ರಜೆಗಳಿವೆ ಎಂದು ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
2024ನೇ ಸಾಲಿನಲ್ಲಿ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ, ಒಟ್ಟು 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ ಎಂದು ಹೇಳಿದೆ. ಈ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಅಂಬೇಡ್ಕರ್ ಜಯಂತಿ (ಏ. 14), ಮಹಾವೀರ ಜಯಂತಿ (ಏಪ್ರಿಲ್ 21), ಎರಡನೇ ಶನಿವಾರ ಬರುವ ವಿಜಯದಶಮಿ (ಅ. 12) ನಮೂದಿಸಿಲ್ಲ.
2024ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ
ಜನವರಿ 15: ಸಂಕ್ರಾಂತಿ ಹಬ್ಬ
ಜನವರಿ 26: ಗಣರಾಜ್ಯೋತ್ಸವ
ಮಾರ್ಚ್ 8: ಮಹಾಶಿವರಾತ್ರಿ
ಮಾರ್ಚ್ 29: ಗುಡ್‌ಫ್ರೈಡೆ
ಏಪ್ರಿಲ್ 9: ಯುಗಾದಿ ಹಬ್ಬ
ಏಪ್ರಿಲ್ 11: ರಂಜಾನ್
ಮೇ 1: ಕಾರ್ಮಿಕರ ದಿನಾಚರಣೆ
ಮೇ 10: ಬಸವಜಯಂತಿ/ ಅಕ್ಷಯ ತೃತೀಯ
ಜೂನ್ 17: ಬಕ್ರೀದ್
ಜುಲೈ 17: ಮೊಹರಂ ಕಡೇ ದಿನ
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 7: ಗಣೇಶ ಚತುರ್ಥಿ
ಸೆಪ್ಟೆಂಬರ್ 16: ಈದ್ ಮಿಲಾದ್
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 11: ಮಹಾನವಮಿ/ ಆಯುಧ ಪೂಜೆ
ಅಕ್ಟೋಬರ್ 17: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31: ನರಕ ಚತುರ್ದಶಿ
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 2: ಬಲಿಪಾಡ್ಯಮಿ
ನವೆಂಬರ್ 18: ಕನಕದಾಸ ಜಯಂತಿ
ಡಿಸೆಂಬರ್ 25: ಕ್ರಿಸ್‌ಮಸ್
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.