ಕಲ್ಲಡ್ಕ ಭಟ್ಟ ಹೇಳಿದ್ದು ಹಿಂದೂ ಜಾತಿಗ್ರಸ್ತ ಸಮಾಜದ ‘ಅಲಿಖಿತ ಪದ್ಧತಿ’

Date:

ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ

- Advertisement -

“ದಿನಕ್ಕೊಬ್ಬ ಗಂಡ” – ಸನಾತನ ಧರ್ಮದೊಳಗಿನ ಮಹಿಳಾ ದೌರ್ಜನ್ಯದ ಈ ಪಿಡುಗು ಮತ್ತು ಅದರ ವಿರುದ್ದದ ಬಂಡಾಯ ಚರಿತ್ರೆಯೇ ದೊಡ್ಡದಿದೆ. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ : ಪರ್ಮನೆಂಟ್ ಗಂಡನೇ ಇಲ್ಲ’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕೇವಲ ರಾಜಕೀಯ ಹಿನ್ನಲೆ ಹೊಂದಿದೆಯೇ ಹೊರತು ಮುಸ್ಲಿಮರ ಧಾರ್ಮಿಕ, ಸಾಮಾಜಿಕ ಇತಿಹಾಸದಲ್ಲಿ ಅಂತಹ ಕುರುಹುಗಳಿಲ್ಲ. ಆದರೆ ಸಂವಿಧಾನ ಜಾರಿಯಾಗುವ ಮೊದಲು ಹಿಂದೂ ಸಮಾಜದಲ್ಲಿ ‘ದಿನಕ್ಕೊಬ್ಬ ಗಂಡ’ ಪಿಡುಗು ಈ ನೆಲದ ಕಾನೂನೆಂಬಂತೆ ಜಾರಿಯಲ್ಲಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ದ್ರೌಪದಿಗೆ ಐದು ಗಂಡಂದಿರು ಸೇರಿದಂತೆ ಪುರಾಣ, ಧಾರ್ಮಿಕ ಕತೆಗಳಲ್ಲಿ ಬರುವ ದಿನಕ್ಕೊಬ್ಬರು ಗಂಡಂದಿರ ನೂರಾರು ಕತೆಯನ್ನು ಬದಿಗಿಡೋಣಾ. ತೀರಾ ಇತ್ತಿಚೆಗೆ, ಅಂದರೆ ನಮ್ಮ ಹಿಂದಿನ ತಲೆಮಾರು ಅನುಭವಿಸಿದ ಸಂಕಟಗಳನ್ನೊಮ್ಮೆ ಅವಲೋಕಿಸಿ. ಭಾರತದಲ್ಲಿ ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಭಾರತದ ಹಲವು ಹಳ್ಳಿಗಳಲ್ಲಿ ಹಿಂದುಳಿದ ವರ್ಗದ ಯುವಕರು ಮದುವೆಯಾದ ಮೊದಲ ದಿನ ವಧುವನ್ನು ಜಮೀನ್ದಾರರ ಮನೆಗೆ ಬಿಟ್ಟು ಬರಬೇಕು ಎಂಬ ನಿಯಮವಿತ್ತು. ಈ ನಿಯಮದ ವಿರುದ್ದ ಬಂಡಾಯ, ಹಿಂಸೆಗಳೇ ನಡೆದ ಇತಿಹಾಸ ಈ ನೆಲದಲ್ಲಿದೆ.

ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ. ತೆಲಂಗಾಣ, ಆಂಧ್ರದ ಹಲವು ಹಳ್ಳಿಗಳಲ್ಲಿರುವ ತೀರಾ ಹಿಂದುಳಿದ ವರ್ಗಗಳ ಮನೆಗೆ ಕೆಲಸ ಮುಗಿಸಿ ಬಂದ ಗಂಡ, ತನ್ನದೇ ಮನೆಯ ಹೊರಗೆ ಜಮೀನ್ದಾರನ ಚಪ್ಪಲಿ ಕಂಡರೆ ವಾಪಸ್ ಹೋಗಬೇಕಿತ್ತು. ಒಂದೆರಡು ತಾಸು ಬಿಟ್ಟು ವಾಪಸ್ ಬಂದಾಗ ಮನೆ ಎದುರು ಜಮೀನ್ದಾರರ ಚಪ್ಪಲಿ ಇದ್ದರೆ ಮತ್ತೆ ವಾಪಸ್ ಹೋಗಬೇಕಿತ್ತು. ಹಿಂದೂ ಸಮಾಜದೊಳಗೆ ನಡೆಯುತ್ತಿದ್ದ ಈ ದೌರ್ಜನ್ಯವನ್ನು ವಿರೋಧಿಸಿದ್ದು ನಕ್ಸಲರು ಮಾತ್ರ. ಆ ಕಾರಣಕ್ಕಾಗಿಯೇ ಆಂಧ್ರ, ತೆಲಂಗಾಣದ ಹಲವು ಹಳ್ಳಿಗಳು ಬೇಷರತ್ತಾಗಿ ನಕ್ಸಲ್ ಚಳವಳಿಯನ್ನು ಬೆಂಬಲಿಸಿದವು.

“ನಾನು ಆಂಧ್ರದ ಹಲವು ಹಳ್ಳಿಗಳಲ್ಲಿ ಹಿಂದುಳಿದ-ಬುಡಕಟ್ಟು ಸಮುದಾಯದ ಅಧ್ಯಯನ ನಡೆಸಿದ್ದೇನೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜಮೀನ್ದಾರರು ಶೂದ್ರರ ಕಾಲನಿಗಳಿಗೆ ತಮಗೆ ಬೇಕಾದಾಗ ಹೋಗಿ ಸುಂದರವಾಗಿದ್ದ ಮಹಿಳೆಯರ ಜೊತೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. ಈ ದೌರ್ಜನ್ಯದ ಸಮಯದಲ್ಲಿ ಮನೆ ಮಂದಿ ಮನೆಯಿಂದ ಹೊರಗೆ ನಿಂತು ಜಮೀನ್ದಾರರಿಗೆ ಸಹಕರಿಸಬೇಕು. ಈಗಲೂ ಈ ಪದ್ಧತಿ ಕೆಲವು ಹಳ್ಳಿಗಳಲ್ಲಿ ಇದೆ. ನಕ್ಸಲರು ಮತ್ತು ಕಮ್ಯುನಿಸ್ಟರನ್ನು ಹೊರತುಪಡಿಸಿ ಬೇರೆ ಯಾರೂ ಕೂಡಾ ಇದರ ವಿರುದ್ದ ಮಾತನಾಡುವುದಿಲ್ಲ” ಎನ್ನುತ್ತಾರೆ ಹಿರಿಯ ನ್ಯಾಯವಾದಿ ಎಸ್ ಬಾಲನ್.

ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡಂದಿರನ್ನು ಕೊಟ್ಟ ಪ್ರಧಾನಿಗಳು ಮತ್ತು ಅದನ್ನು ಬೀದಿಯಲ್ಲಿ ನಿಂತು ಕೆಟ್ಟದಾಗಿ ಆಡಿಕೊಳ್ಳುವ ಆರ್‌‌ಎಸ್‌ಎಸ್‌, ಹಳ್ಳಿಗಳ ಈ ದುರಂತ ಕಥನಕ್ಕೆ ಅಂತ್ಯ ಹಾಡಲು ಏನಾದರೂ ಮಾಡಿದ್ದಾರೆಯೇ? ನೀವು ದೇಶದ್ರೋಹಿಗಳು ಎಂದು ಕರೆಯುವ ನಕ್ಸಲರು ಮತ್ತು ಕಮ್ಯುನಿಸ್ಟರೇ ಈ ಹಿಂದೂ ಮಹಿಳೆಯರಿಗೆ ಪರ್ಮನೆಂಟ್ ಗಂಡನಿರಬೇಕು ಎಂದು ಹೋರಾಡಿ ನ್ಯಾಯ ಒದಗಿಸಿದವರು‌.

ಹರಿಯಾಣದಲ್ಲಿ ಇತ್ತೀಚೆಗೆ ‘ವಧು ಕಳ್ಳಸಾಗಾಣಿಕೆ’ ಬಗ್ಗೆ ವರದಿಯಾಗಿತ್ತು. ದೇಶದ ಬೇರೆ ಬೇರೆ ರಾಜ್ಯಗಳಿಂದ ‘ಮದುಮಗಳ’ನ್ನು ಹರಿಯಾಣಕ್ಕೆ ತರಿಸಿಕೊಂಡು ‘ಒಂದಕ್ಕಿಂತ ಹೆಚ್ಚು ಗಂಡಂದಿರಿಗೆ ಹಂಚಲಾಗುತ್ತಿತ್ತು’ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಈ ವಧುಗಳ ಪೈಕಿ ಒಬ್ಬರೇ ಒಬ್ಬರು ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟವರಲ್ಲ!

ಹಿಂದೆಯೂ, ಈಗಲೂ ಕಲ್ಲಡ್ಕ ಪ್ರಭಾಕರ ಭಟ್ಟರು ಬೆಂಬಲಿಸುವ ಜಮೀನ್ದಾರಿ ವರ್ಗವು ‘ದಿನಕ್ಕೊಂದು ಗಂಡ’ ಪದ್ದತಿಯನ್ನು ಜಾರಿಯಲ್ಲಿಟ್ಟಿದೆ. ಈ ಪದ್ದತಿಯನ್ನು ವಿರೋಧಿಸಿಯೇ ಅಂಬೇಡ್ಕರ್, ಬಸವಣ್ಣ, ಮಾರ್ಕ್ಸ್, ಮಾವೋ ಸಿದ್ದಾಂತಗಳು ಕೆಲಸ ಮಾಡಿದವು. ದಿನಕ್ಕೊಬ್ಬ ಗಂಡ ಎಂಬ ಹೀನ ಅಲಿಖಿತ ಪದ್ದತಿ ಹಿಂದೂ ಜಾತಿಗ್ರಸ್ತ ಸಮಾಜದಲ್ಲಿ ಇದೆಯೇ ಹೊರತು ಇಸ್ಲಾಂನಲ್ಲಿ ಅಲ್ಲ!

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿಓಂಕಾರನಾದವೆಂಬ ಸೆಳೆಕೋಲಂ...

ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.ಅಳುಪಿಲ್ಲದಿರ್ಪುದೆ ವ್ರತ....

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...