‘ನನಗೆ ಶಿಕ್ಷಿತರಿಗಿಂತ ಅಪರಾಧ, ರೆಡ್-ಲೈಟ್ ಪ್ರದೇಶಗಳಿಂದಲೇ ಹೆಚ್ಚು ಮತ ಸಿಕ್ಕಿದೆ: ನಿತಿನ್ ಗಡ್ಕರಿ ಹೇಳಿಕೆ ಟ್ರೋಲ್

Date:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ ಅವರು ಚುನಾವಣೆಯಲ್ಲಿ ತಮಗೆ ಸಿಗುವ ಬೆಂಬಲ ಮತ್ತು ಮತಗಳ ಕುರಿತು ನೀಡಿರುವ ಹೇಳಿಕೆಯೊಂದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ನಾಗಪುರದಲ್ಲಿ ನಡೆದ ‘ಮಿಡಿಯಾ ಕಾನ್‌ಕ್ಲೇವ್ 2026’ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, “ಶಿಕ್ಷಿತ ವರ್ಗದ ಪ್ರದೇಶಗಳಿಗಿಂತಲೂ ಅಂಡರ್‌ವರ್ಲ್ಡ್, ಅಪರಾಧ ಹಿನ್ನೆಲೆ ಮತ್ತು ರೆಡ್-ಲೈಟ್ ಪ್ರದೇಶಗಳಿಂದಲೇ ತಮಗೆ ಅತಿ ಹೆಚ್ಚು ಮತಗಳು ಲಭಿಸಿವೆ” ಎಂದು ಗಡ್ಕರಿ ಹೇಳಿದ್ದಾರೆ.

- Advertisement -

ನಿತಿನ್ ಗಡ್ಕರಿ ಹೇಳಿಕೆಯು ಈಗ ತೀವ್ರ ವಿವಾದಕ್ಕೆ ಈಡಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ತೀವ್ರ ಟೀಕೆಗೆ ಗುರಿಯಾಗಿದೆ, ಟ್ರೋಲ್‌ಗೆ ಗುರಿಯಾಗಿದೆ. “ಅಪರಾಧ ಲೋಕದ ಶೇ. 99 ರಷ್ಟು ಜನರು ನನ್ನ ಬೆಂಬಲಿಗರು ಎಂದು ಒಬ್ಬ ಕೇಂದ್ರ ಸಚಿವರೇ ಮುಕ್ತವಾಗಿ ಹೇಳಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ” ಎಂದು ಹಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಇದನ್ನೂ ಓದಿ: ಸಾವರ್ಕರ್‌ ಪಠ್ಯ ಕೈಬಿಟ್ಟಿರುವುದು ನೋವು ತಂದಿದೆ: ನಿತಿನ್‌ ಗಡ್ಕರಿ

“ನಾಗಪುರದ ಪ್ರಬುದ್ಧ ಮತ್ತು ಶಿಕ್ಷಿತ ಜನರು ವಾಸಿಸುವ ಭಾಗಗಳಲ್ಲಿ ತಮಗೆ ಸುಮಾರು 70% ರಿಂದ 75% ರಷ್ಟು ಮತಗಳು ಸಿಕ್ಕಿವೆ. ಅದೇ ಸಮಯದಲ್ಲಿ ಅಪರಾಧ ಹಿನ್ನೆಲೆ, ಅಂಡರ್‌ವರ್ಲ್ಡ್ ಹಾಗೂ ರೆಡ್-ಲೈಟ್ ಪ್ರದೇಶಗಳೆಂದು ಗುರುತಿಸಿಕೊಂಡಿರುವ ಭಾಗಗಳಲ್ಲಿ ತಮಗೆ ಬರೋಬ್ಬರಿ 92% ರಷ್ಟು ಮತಗಳು ಲಭಿಸಿವೆ” ಎಂದು ಹೇಳಿದ್ದರು.

“ನಾಗಪುರದ 99% ಅಂಡರ್‌ವರ್ಲ್ಡ್ ಮತ್ತು ಸಾಮಾಜಿಕ ಕ್ಷೇತ್ರದ ಜನರು ನನ್ನ ಬೆಂಬಲಿಗರು. ಆದರೆ, ಇದರರ್ಥ ನಾನು ಅವರ ಅಕ್ರಮ ಅಥವಾ ಅಪರಾಧ ಚಟುವಟಿಕೆಗಳನ್ನು ಬೆಂಬಲಿಸುತ್ತೇನೆ ಎಂದಲ್ಲ” ಎಂದು ಹೇಳಿದ್ದರು. ಸಂಬಂಧಿತ ಪ್ರದೇಶಗಳಲ್ಲಿ ತಾವೇ ಸ್ವತಃ ರಸ್ತೆಗಳು, ಮೂಲಸೌಕರ್ಯ ಮತ್ತು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದರಿಂದ ಈ ಬೆಂಬಲ ಸಿಕ್ಕಿದೆ ಎಂದು ಸ್ಪಷ್ಟನೆ ನೀಡಿದ್ದರು.

ಸಚಿವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (X, ಫೇಸ್‌ಬುಕ್, ಇನ್‌ಸ್ಟಾಗ್ರಾಮ್) ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಹಾಗೂ ವಿಪಕ್ಷಗಳು ಸಚಿವರ ನಾಲಿಗೆ ಜಾರುವಿಕೆಯನ್ನು ಕಟುವಾಗಿ ಟೀಕಿಸಲು ಪ್ರಾರಂಭಿಸಿದ್ದಾರೆ. “ಸುಶಿಕ್ಷಿತ ನಾಗರಿಕರಿಗಿಂತ ಅಪರಾಧ ಹಿನ್ನೆಲೆಯ ವಲಯದಿಂದಲೇ ತಮಗೆ ಹೆಚ್ಚು ಬೆಂಬಲ ಸಿಕ್ಕಿದೆ ಎಂದು ಹೇಳುವ ಮೂಲಕ, ಸಚಿವರು ಶಿಕ್ಷಿತ ಮತದಾರರನ್ನು ಪರೋಕ್ಷವಾಗಿ ಹಗುರವಾಗಿ ಕಂಡಿದ್ದಾರೆ” ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಅಪರಾಧಿಗಳೊಂದಿಗಿನ ‘ಸಂಬಂಧ’ ಅಥವಾ ‘ಬೆಂಬಲ’ದ ಮಾತುಗಳು ಕಾನೂನು ಜಾರಿ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸುತ್ತವೆ ಎಂದು ಜಾಲತಾಣ ಬಳಕೆದಾರರು ವಾದಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...