ಸಾಮೂಹಿಕ ಅತ್ಯಾಚಾರಕ್ಕೆ ಮಹಿಳೆ ನೆರವಾಗಿದ್ದರೆ ಆಕೆಯೂ ಆರೋಪಿ: ದೆಹಲಿ ಹೈಕೋರ್ಟ್

Date:

ಮಹಿಳೆಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಬ್ಬ ಮಹಿಳೆ ಪ್ರತ್ಯಕ್ಷವಾಗಿ ದೈಹಿಕ ದೌರ್ಜನ್ಯ ಎಸಗದೇ ಇದ್ದರೂ, ಕೃತ್ಯ ಎಸಗಲು ಸಮಾನ ಉದ್ದೇಶದಿಂದ ಸಹಕರಿಸಿದ್ದರೆ ಆಕೆಯನ್ನೂ ‘ಸಾಮೂಹಿಕ ಅತ್ಯಾಚಾರ’ದ ಆರೋಪಿಯನ್ನಾಗಿ ಪರಿಗಣಿಸಬಹುದು ಎಂದು ದೆಹಲಿ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.

- Advertisement -

ಅಪ್ರಾಪ್ತ ಹೆಣ್ಣುಮಗಳಿಗೆ ಬೆದರಿಕೆ ಹಾಕಿ, ಮತ್ತೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುವಂತೆ ಬಲವಂತಪಡಿಸಿದ ಮತ್ತು ಘಟನೆಯ ಸಮಯದಲ್ಲಿ ಕೋಣೆಯಲ್ಲಿ ಉಪಸ್ಥಿತರಿದ್ದು ಅಪರಾಧಕ್ಕೆ ನೆರವಾದ ತಾಯಿಯೊಬ್ಬಳ ವಿರುದ್ಧ ವಿಚಾರಣಾ ನ್ಯಾಯಾಲಯವು ದೋಷಾರೋಪ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಆ ಮಹಿಳೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ...

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಇದನ್ನೂ ಓದಿ: ಉತ್ತರಪ್ರದೇಶ: ದಲಿತ ಮಹಿಳೆಯ ಮೇಲೆ ಅತ್ಯಾಚಾರ

“ಕಾನೂನಿನಲ್ಲಿ ಅತ್ಯಾಚಾರ ಎಸಗುವವರನ್ನು ‘ಪುರುಷ’ ಎಂದು ವ್ಯಾಖ್ಯಾನಿಸಿರುವುದರಿಂದ, ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಲು ಬರುವುದಿಲ್ಲ” ಎಂಬುದು ಅರ್ಜಿದಾರ ಮಹಿಳೆಯ ವಾದವಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಭಾರತೀಯ ದಂಡ ಸಂಹಿತೆಯ (IPC) ಕಾಯ್ದೆಯ ಸೆಕ್ಷನ್ 376D ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 70ರ ಅಡಿಯಲ್ಲಿ ‘ಸಾಮೂಹಿಕ ಅತ್ಯಾಚಾರ’ ಎಂಬುದು ಪ್ರತ್ಯೇಕ ಅಪರಾಧವಾಗಿದೆ. ಕಾನೂನಿನಲ್ಲಿ ಉಲ್ಲೇಖವಾಗಿರುವ ‘ಗುಂಪು ರಚಿಸುವ ವ್ಯಕ್ತಿಗಳು’ ಎಂಬ ಪದವು ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ ಎಂದು ಹೇಳಿದೆ.

ಅಪರಾಧ ಎಸಗಲು ಪ್ರತ್ಯಕ್ಷವಾಗಿ ದೈಹಿಕವಾಗಿ ತೊಡಗಿಸಿಕೊಂಡಿರಲೇಬೇಕು ಎಂದೇನಿಲ್ಲ. ಕೃತ್ಯ ಎಸಗಲು ಬೆಂಬಲವಾಗಿ ನಿಂತು, ಸಮಾನ ಉದ್ದೇಶದಿಂದ ಪ್ರಚೋದನೆ ಅಥವಾ ನೆರವು ನೀಡಿದ್ದರೆ ಆಕೆಯೂ ಅಪರಾಧದ ಭಾಗವಾಗುತ್ತಾಳೆ. ಆದರೆ, ಮಹಿಳೆಯೊಬ್ಬಳು ಒಬ್ಬಂಟಿಯಾಗಿ ಗ್ಯಾಂಗ್‌ರೇಪ್ ಆರೋಪವನ್ನು ಎದುರಿಸಲು ಸಾಧ್ಯವಿಲ್ಲ. ಆದರೆ ಗುಂಪೊಂದರ ಭಾಗವಾಗಿ ಕೃತ್ಯಕ್ಕೆ ಅನುವು ಮಾಡಿಕೊಟ್ಟಾಗ ಈ ನಿಯಮ ಅನ್ವಯವಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಬದಲು SSR! ಪ್ರತಿಭಟನೆ, ಉಳಿದಿಬ್ಬರು ಚುನಾವಣಾ ಆಯುಕ್ತರ ತಕರಾರುಗಳಿಗೆ ಕಡೆಗೂ ಮಣಿಯಿತೇ ಗ್ಯಾನೇಶ್- ಮೋದಿ- ಶಾ ತ್ರಿವಳಿ?

ತೀವ್ರ ವಿರೋಧ, ಪ್ರತಿಭಟನೆ, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾದ ಬಳಿಕ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...

ರಾಯಚೂರಿನಲ್ಲಿ ನಿಲ್ಲದ ರೈತರ ಆತ್ಮಹತ್ಯೆ ಸರಣಿ, ಪರಿಹಾರ ವಿತರಣೆಯ ಅಂಕಿ-ಅಂಶಗಳಲ್ಲೇ ಗೊಂದಲ!

ಕೃಷಿ ಪ್ರಧಾನ ಜಿಲ್ಲೆಯೆಂಬ ಹೆಗ್ಗಳಿಕೆ ಹೊಂದಿರುವ ರಾಯಚೂರಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು...

ಬಸವಕಲ್ಯಾಣ | ಫುಲೆ, ಶಾಹು, ಅಂಬೇಡ್ಕರ್ ವಿಚಾರ ಮಂಚ್ ಉದ್ಘಾಟನೆ

ಮಹಾತ್ಮ ಜ್ಯೋತಿಬಾ ಫುಲೆ, ರಾಜರ್ಷಿ ಶಾಹು ಮಹಾರಾಜ್ ಹಾಗೂ ಡಾ. ಬಿ.ಆರ್....