ʼಜೆನ್‌ ಝಿʼ ಎಂಬ ಸಮತಾ ನಿಲುವು

Date:

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ ಹೊತ್ತಿರುವ ಮುಖ್ಯ ನ್ಯಾಯಾಮೂರ್ತಿಗಳ ಈ ಮಾತು ಭಾರತದ ಸಂವಿಧಾನದ ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಕಳಂಕ.

- Advertisement -

ಈ ಕ್ಷಣವನ್ನೂ ಒಳಗೊಂಡು ಕೆಲದಿನಗಳ ಹಿಂದಷ್ಟೇ ಆರಂಭವಾದ ಜೆನ್‌ ಝಿ ಎಂಬ ಯುವ ತಲೆಮಾರು ಭಾರತೀಯ ಚಳವಳಿಯ ದಿಕ್ಕನ್ನೇ ಹೊರಳಿಸುತ್ತಿದೆ. ಕಾರಣ ಪರಿಣಾಮದ ಕುರಿತು ನಮಗೆಲ್ಲಾ ತಿಳಿದೇ ಇದೆ. ಶಿಕ್ಷಣಕ್ಷೇತ್ರದ ಗುಣಮಟ್ಟ ಸುಧಾರಣೆಯು ವ್ಯಕ್ತಿ ಮಾತ್ರವಲ್ಲ ಜಗತ್ತಿನ ಅಭಿವೃದ್ದಿಯನ್ನು ಅವಲಂಬಿಸಿರುತ್ತದೆ. ಆದರೆ ಈ ಶಿಕ್ಷಣವೇ ಕಳಪೆಯಾದರೆ ಯಾರಿಗೆ ದೂರು ಕೊಡುವುದು ಒಳಿತು? ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ. ಈ ಎಲ್ಲಾ ಪರೀಕ್ಷಾ ಅಕ್ರಮಗಳಿಗೆ ಶಿಕ್ಷಣ ಸಚಿವರು ಕ್ಷಮೆ ಕೇಳುವ ಮತ್ತು ಹೊಣೆಗಾರಿಕೆ ಹೊತ್ತುಕೊಳ್ಳುವ ನಡೆ ಕುರಿತು ವಿದ್ಯಾರ್ಥಿ ಸಮೂಹವಲ್ಲ ಪ್ರವಾಹವೇ ದೆಹಲಿಗೆ ಹರಿದು ಬಂತು. ಸ್ವಾತಂತ್ರ್ಯ ಹೋರಾಟಕ್ಕೆ ಸಾವಿರಾರು ನದಿಗಳು ಸೇರುವಂತೆ ಬಸುರಿ-ಬಾಣಂತಿ, ಕೂಸು-ಕುನ್ನಿಗಳು, ಹಿರಿಯ ನಾಗರಿಕರು , ಜೊಮೆಟೊ-ಸ್ವಿಗ್ಗಿ ಯುವಕರು, ರೈತಬಾಂಧವರು, ಸ್ವತಃ ವೈದ್ಯರು…ಸೇರಿದಂತೆ ಯಾವುದೋ ಗುಡಿಸಲ ಬಿಸಿಲುಮಳೆಗೆ ಮೈಯೊಡ್ಡಿ ಬೆಳೆದ ಇರ್ಫಾನ್ ಎಂಬ ವಿಚಾರವಾದಿ ಹಾಗು ಎಲ್ಲ ವರ್ಗದ ಜನಸಮುದಾಯದ ಹೊಳೆಯೇ ಒಂದೆಡೆ ಸೇರಿ ಪ್ರಭುತ್ವವನ್ನು ಪ್ರಶ್ನಿಸಿದ್ದು ಗೊತ್ತಿರುವ ವಿಷಯವೇ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಶಿಕ್ಷಣಸಚಿವರ ರಾಜೀನಾಮೆ ಮತ್ತು ಅದರ ಹೊಣೆಗಾರಿಕೆಯ ಕುರಿತು ಪ್ರಶ್ನೆ ಕೇಳುವ ಹಕ್ಕನ್ನು ನಮ್ಮ ಸಂವಿಧಾನವೇ ಕೊಡಮಾಡಿದೆ. ಭಾರತದ ಪ್ರಜಾರಾಜ್ಯ ಹಾಗೂ ರಾಜ್ಯಗಳ ಒಕ್ಕೂಟ ವ್ಯವಸ್ಥೆಯಾಗಿದೆ. ಕೇಂದ್ರಾಡಳಿತ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ರಾಜ್ಯಗಳು ತನ್ನದೇ ಸ್ವಾಯತ್ತತೆಯನ್ನು ಹೊಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...
delhi protest jpg

ಭಾರತೀಯ ಸಂವಿಧಾನವು 14 ನೇ ವಿಧಿ ಅನ್ವಯ ‘ಯಾವುದೇ ವ್ಯಕ್ತಿಗೆ (ಭಾರತೀಯನಾಗಿರಬಹುದು ಅಥವಾ ವಿದೇಶಿಯನಾಗಿರಬಹುದು) ಕಾನೂನಿನ ದೃಷ್ಟಿಯಲ್ಲಿ ರಾಜ್ಯವೂ ಸಮಾನತೆಯನ್ನು ನಿರಾಕರಿಸಬಾರದು. ಎಲ್ಲರಿಗೂ ಸಮಾನ ರಕ್ಷಣೆ ದೊರೆಯಬೇಕು. ಕಾನೂನಿನ ಮುಂದೆ ಸಮಾನತೆ ಎಂದರೆ ಯಾರೇ ಆಗಲಿ ಕಾನೂನಿಗಿಂತ ಶ್ರೇಷ್ಠ ಅಲ್ಲ. ಪ್ರತಿಯೊಬ್ಬರೂ ರಾಜ್ಯದ ಕಾನೂನಿಗೆ ಬದ್ಧರಾಗಿರಬೇಕು’ ಎಂದು ಹೇಳುತ್ತದೆ. 15(1) ವಿಧಿ ಅನ್ಚಯ ಧರ್ಮ, ಕುಲ, ಜಾತಿ, ಲಿಂಗ, ಜನ್ಮಸ್ಥಳಗಳ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡಬಾರದು. ಇಂತಹ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸಿ, ಅವುಗಳನ್ನು ರಕ್ಷಿಸಲು ನ್ಯಾಯಾಲಗಳಿಗೆ ಅಧಿಕಾರಗಳನ್ನು ನೀಡಲಾಗುತ್ತದೆಯೋ ಅಂತಹ ಹಕ್ಕುಗಳನ್ನು ಮೂಲಭೂಲ ಹಕ್ಕುಗಳೆಂದು ಕರೆಯಲಾಗಿದೆ.

ನ್ಯಾಯಾಲಯಗಳು ಸ್ವತಂತ್ರ್ಯವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲಾಗಿದೆ. ಈ ಪ್ರಕಾರ ಜನವರಿ 28, 1950ರಲ್ಲಿ ಸುಪ್ರೀಂಕೋರ್ಟು ರಚನೆಯಾಯಿತು. ಇತರ ಶ್ರೇಷ್ಠ ನ್ಯಾಯಾಲಯಗಳಿಗಿಂತ ಭಾರತದ ಸುಪ್ರೀಂಕೋರ್ಟು ಹೆಚ್ಚು ಅಧಿಕಾರಗಳನ್ನು ಹೊಂದಿದೆ. ಸಂವಿಧಾನದ 142 ನೇ ವಿಧಿ ಅನ್ವಯ ಸುಪ್ರೀಂಕೋರ್ಟು ಕೆಲವು ಸಂದರ್ಭಗಳಲ್ಲಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಬಹುದು. ಯಾವುದೇ ಮೊಕದ್ದಮೆ ಬಗ್ಗೆ ಪೂರ್ಣನ್ಯಾಯ ಒದಗಿಸಲು ಆಜ್ಞೆ ಅಥವಾ ಆದೇಶವನ್ನು ನೀಡಲು ಅಧಿಕಾರವನ್ನು ಹೊಂದಿದೆ. ಮತ್ತು ಸಂಸತ್ತಿನ ಕಾನೂನು ಅನ್ವಯ ಯಾವುದೇ ವ್ಯಕ್ತಿಯನ್ನು ತನ್ನ ಮುಂದೆ ಹಾಜರಾಗುವಂತೆ ಆದೇಶಿಸುವ ಅಪರಿಮಿತ ಅಧಿಕಾರವನ್ನು ಹೊಂದಿದೆ. ಯಾವುದೇ ವಿಷಯ ಕಾನೂನು ಬಾಹಿರವೆಂದು ಕಂಡು ಬಂದರೆ ಅಥವಾ ಅಧಿಕಾರ ವ್ಯಾಪ್ತಿಯಿಲ್ಲದೆ, ಅಧಿಕಾರ ಚಲಾಯಿಸಿದರೆ ಅಥವಾ ಯಾರಿಗಾದರೂ ಅನ್ಯಾಯ ಉಂಟಾದರೆ ಭಾರತದ ಸುಪ್ರೀಂಕೋರ್ಟು ಈ ವಿಧಿ ಅನ್ವಯ ತನ್ನ ಅಧಿಕಾರವನ್ನು ಚಲಾಯಿಸಬಹುದು.

ಮದರಾಸು ಮತ್ತು ಕಲ್ಕತ್ತಾ ಹೈಕೋರ್ಟುಗಳ ನ್ಯಾಯಾಧೀಶಯಾಗಿದ್ದ ಸಿ.ಎಸ್. ಕರ್ಣನ್ ಪ್ರಕರಣದಲ್ಲಿ ಭಾರತದ ಇತಿಹಾಸದಲ್ಲಿ ಭ್ರಷ್ಠಾಚಾರ ಆರೋಪದಲ್ಲಿ ನ್ಯಾಯಾಧೀಶರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮೇ 9, 2017 ರಂದು ನ್ಯಾಯಾಧೀಶ ಕರ್ಣನ್ ಅವರಿಗೆ ಆರು ತಿಂಗಳು ಕಾರಾಗೃಹ ಶಿಕ್ಷೆ ಎಂದು ಸೂಪ್ರೀಂಕೋರ್ಟಿನ ನ್ಯಾಯಾಮೂರ್ತಿಗಳ ಪೀಠ ತೀರ್ಪು ನೀಡಿದ ಪ್ರಕರಣವನ್ನು ಮರೆಯುವಂತಿಲ್ಲ. ದೇಶದ ಅತ್ಯುನ್ನತ ನ್ಯಾಯಾಲಯವಾಗಿರುವ ಸುಪ್ರೀಂಕೋರ್ಟು “ರೂಲ್ ಆಫ್ ಲಾ” ವನ್ನು ಎತ್ತಿ ಹಿಡಿಯುವ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ. ನ್ಯಾಯಮೂರ್ತಿ ಸೂರ್ಯಕಾಂತ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಸೇವೆಯಲ್ಲಿದ್ದಾರೆ. ಭಾರತದ ಯುವಜನಾಂಗದ ಅಥವಾ ವಿದ್ಯಾರ್ಥಿ ಯುವಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ಹೊಣೆ ಹೊತ್ತಿದ್ದಾರೆ ಕೂಡ. ಆದರೆ ಮುಖ್ಯ ನ್ಯಾಯಮೂರ್ತಿಗಳೇ ಸಮಾಜದ ಸ್ವಾಸ್ಥ್ಯವನ್ನು ಕದಲಿಸುವ ಮಾತುಗಳನ್ನಾಡುವ ಮೂಲಕ ಒಟ್ಟು ಭಾರತದ ಬಹುಪಾಲು ಜನಸಾಮಾನ್ಯರ ಪ್ರಶ್ನೆಗಳಿಗೆ ಗುರಿಯಾಗಿದ್ದಾರೆ. ಹೇಗೆಂದರೆ ‘ಕಾಕ್ರೋಚ್’ ಪದದ ಉಲ್ಲೇಖವನ್ನು ಭಾರತದ ಒಟ್ಟು ವಿದ್ಯಾರ್ಥಿ ಸಮೂಹಕ್ಕೆ ಅನ್ವಯಿಸಿ ಹೇಳಿದ್ದು ಒಂದಾದರೆ, ಶಾಂತಿಯುತವಾಗಿ ತಮ್ಮ ಹಕ್ಕು-ಬಾಧ್ಯತೆಗಳ ಕುರಿತು ಸಭೆ ಸೇರುವ, ಪ್ರತಿಭಟನೆ ಮಾಡುವ ಯುವಸಮುದಾಯದ ಮೇಲೆ ಅತ್ಯಂತ ಅಮಾನವೀಯವಾಗಿ ನಮ್ಮದೇ ಪೊಲೀಸ್ ವ್ಯವಸ್ಥೆ ಕ್ರೌರ್ಯತೆ ಮೆರೆಯುವಾಗ ಇದೇ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ವಿದ್ಯಾರ್ಥಿಗಳಿಗೆ ಆದ ಅನ್ಯಾಯ, ಹಿಂಸೆ, ಹಲ್ಲೆ, ದೌರ್ಜನ್ಯ, ಅವಮಾನ ಕುರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟಿಗೆ ಸಮಯವಿಲ್ಲ ಎಂಬ ಮಾತುಗಳನ್ನಾಡುತ್ತಾರೆ. ಹಾಗಾದರೆ ದೇಶದ ಜನರನ್ನು ಬಾಧಿಸುವ ಸಮಸ್ಯೆಗಳನ್ನು ಕೇಳಲು ಸಮಯವಿಲ್ಲವಾದರೆ, ಇದಕ್ಕಿಂತಲೂ ಮಹತ್ವದ ಕೆಲಸವೇನು ?

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ ಹೊತ್ತಿರುವ ಮುಖ್ಯ ನ್ಯಾಯಮೂರ್ತಿಯ ಈ ಮಾತು ಭಾರತದ ಸಂವಿಧಾನದ ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಕಳಂಕ.

Abhijeeth Dipke

ಪ್ರಾಚೀನ ಭಾರತೀಯ ಮಹಾಕಾವ್ಯವಾದ ಮಹಾಭಾರತ ಕೃತಿಯಲ್ಲಿ ಪಾಂಡವರ ಪತ್ನಿ ದ್ರೌಪದಿ (ಪಾಂಚಾಲಿ) ತುಂಬಿದ ಸಭೆಯಲಿ ತನಗಾದ ಅವಮಾನವನ್ನು ಸಹಿಸದೇ ‘ಗಂಡರೆಂಬ ಗಂಡರ್, ಮೂರುಲೋಕದ ಗಂಡರ್, ಒಬ್ಬಳನ್ನು ಆಳಲಾರಿರಿ’ ಎಂದು ತನ್ನ ಐವರು ಗಂಡಂದಿರನ್ನು ಮತ್ತು ಸಭೆಯ ಘನತೆವೆತ್ತ ಭೀಷ್ಮನನ್ನು ಕೂಡ ಪ್ರಶ್ನೆ ಮಾಡುತ್ತಾಳೆ. ಇದು ಹೆಣ್ಣುಲೋಕದ ಅಸ್ಮಿತೆಯನ್ನು ದಟ್ಟವಾಗಿ ಸಾರುತ್ತದೆ ಕೂಡಾ. 2026 ನೇ ವರ್ಷದ ಸೆಪ್ಟಂಬರ್ ತಿಂಗಳು ಕೂಡಾ ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡ ಭಾರತ ದೇಶವು ಇಂತಹದ್ದೇ ಮತ್ತೊಂದು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಂದರೆ ದಲಿತ, ದಮನಿತ, ಲಿಂಗತ್ವ, ಅಲ್ಪಸಂಖ್ಯಾತ, ಆದಿವಾಸಿ, ರೈತ, ಮಹಿಳೆ, ವಿದ್ಯಾರ್ಥಿ ಯುವ ಸಮುದಾಯ ಕುರಿತ ಕಾಳಜಿ ದೇಶದ ಪೋಲಿಸ್ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ಸದಾ ಜಾಗೃತವಾಗಿರಬೇಕಿತ್ತು. ಆದರೆ ಭಾರತೀಯ ಕಾನೂನನ್ನು ಕಾಯುವವರೇ ಕೊಲ್ಲುವ ವಾಸ್ತವದ ಘಟನೆಗಳು ದೇಶದಾದ್ಯಂತ ನಡೆಯುತ್ತಿವೆ. ಮತ್ತು ಇದೆಲ್ಲವನ್ನೂ ಜಗತ್ತು ತೆರೆದ ಕಣ್ಣುಗಳಿಂದ ನೋಡುತ್ತಿದೆ. ಪ್ರತಿರೋಧ ವ್ಯಕ್ತಪಡಿಸುತ್ತಿದೆ.
ಯುವಜನರು ದೇಶದ ಅಭಿವೃದ್ಧಿಯಲ್ಲಿ ಬಹುಪಾಲು ಪ್ರಮುಖ ಪಾತ್ರ ವಹಿಸುತ್ತಾರೆ. ಮತ್ತು ಸಂಖ್ಯೆಯಲ್ಲೂ ಕೂಡಾ ಬಹುಮತ ಹೊಂದಿದ್ದಾರೆ. ಅವರ ಬೇಡಿಕೆ, ಅಗತ್ಯತೆ, ಹಕ್ಕುಗಳ ಕುರಿತು ಶಾಂತಿಯುತವಾಗಿ ಸರ್ಕಾರದೊಂದಿಗೆ ಮಾತನಾಡುವ, ಸಭೆ ಸೇರುವ ಹಕ್ಕನ್ನು ಈ ದೇಶದ ಸಂವಿಧಾನವೇ ಕೊಡಮಾಡಿದೆ.

ಆದರೆ ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವಲ್ಲಿ ಪೊಲೀಸ್‌ ಮತ್ತು ನ್ಯಾಯಾಂಗ ವ್ಯವಸ್ಥೆ, ಗೃಹಸಚಿವಾಲಯ ಮತ್ತು ದೇಶದ ಪ್ರಧಾನಮಂತ್ರಿಗಳು ನೇರವಾಗಿ ಹೊಣೆಯಾಗಿದ್ದಾರೆ ಮತ್ತು ದೆಹಲಿಯ ಇಂದಿನ ತುರ್ತುಪರಿಸ್ಥಿಗೆ ಕಾರಣವಾಗಿದ್ದಾರೆ. ಶಾಂತಿಯುತ ಸಭೆ, ಅಸಹಕಾರ, ಪ್ರತಿಭಟನೆ ನಡೆಸುವ ವಿದ್ಯಾರ್ಥಿ ಯುವಸಮುದಾಯವನ್ನು ರೌಡಿಗಳ ಹಾಗೆ ಬೆನ್ನಟ್ಟಿ ಹೊಡೆಯುವ, ಅವರ ಮೇಲೆ ದೈಹಿಕ ಹಲ್ಲೆಮಾಡಿ, ಗೂಂಡಾಗಿರಿ ನಡೆಸುವ ಅಧಿಕಾರವನ್ನು ಈ ಪ್ರಭುತ್ವಕ್ಕೆ ಕೊಟ್ಟಿದ್ದು ಯಾರು? ವಿದ್ಯಾರ್ಥಿನಿಯರ ಮೈಮೇಲಿನ ಬಟ್ಟಗಳನ್ನು ನಡುರಸ್ತೆಯಲ್ಲೇ ಹರಿದುಹಾಕಿ, ಅವರನ್ನು ಬೆತ್ತಲು ಮಾಡುವ ನಿಯಮವನ್ನು ಸಂವಿಧಾನದ ಯಾವ ವಿಧಿ ಅನ್ವಯ ಹೇಳಲಾಗಿದೆ ಎಂಬುದನ್ನು ದೇಶದ ಉನ್ನತ ನ್ಯಾಯಾಲಯ ಮೊದಲು ಸ್ಪಷ್ಟಪಡಿಸಲೇಬೇಕು. ಇಲ್ಲವಾದರೆ ಈ ಅಪರಾಧದ ಹೊಣೆಗಾರಿಕೆಯನ್ನು ಮನುಷ್ಯತ್ವ ಇರುವ ಯಾವುದೇ ಸರ್ಕಾರ ಹೊತ್ತುಕೊಳ್ಳಬೇಕಿದೆ.

ಇದನ್ನೂ ಓದಿ ​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ ಪ್ರಕರಣದ ‘ವಿಐಪಿ’ ಕಳಂಕಿತ ದುಶ್ಯಂತ್ ಗೌತಮ್‌ಗೆ ರಾಜ್ಯಪಾಲ ಹುದ್ದೆ!

‘ಹೆಣ್ಣುಮಗಳ ಅನುಮತಿ ಪಡೆಯದೇ ಆಕೆಯನ್ನು ಮುಟ್ಟುವ ಅಧಿಕಾರ ಆಕೆಯ ಗಂಡನಿಗೂ ಇಲ್ಲ’ ಎಂದು ತೀರ್ಪುಕೊಟ್ಟು ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸುಪ್ರಿಂಕೋರ್ಟ್ ಕೂಡ ಕಣ್ಮುಚ್ಚಿ ಕುಳಿತಿರುವುದು ದುರಂತವೇ ಸರಿ. ದೆಹಲಿಯ ಕಮಿಷನರ್ ಆಫ್ ಪೊಲೀಸ್‌, ಗೃಹಸಚಿವರು ಮತ್ತು ದೇಶದ ಪ್ರಧಾನಮಂತ್ರಿಗಳು ಭಾರತೀಯ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು, ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬುದೇ ಈ ಕ್ಷಣದ ಸತ್ಯಸಂಗತಿ. ದೇಶದಲ್ಲಿ ಬಂಡವಾಳ ಹೂಡುವ ಮೊಬೈಲ್ ಕಂಪನಿಗಳಿಗೆ ಸರ್ಕಾರದ ಕಿಚನ್ ಕ್ಯಾಬಿನೆಟ್ ಏನೆಲ್ಲಾ ಆಫರ್‌ಗಳನ್ನು ನೀಡಿದೆಯೋ ಜನಸಾಮಾನ್ಯರಾದ ನಮಗೆ ತಿಳಿಯುವುದೇ ಇಲ್ಲ. ಆದರೆ ಅದೇ ಕಂಪನಿಗಳ ಮೊಬೈಲ್ ಡೇಟಾ ಬಳಸಿ ನಾವೂ ಸರ್ಕಾರದ ಆಡಳಿತವನ್ನು ಹಗಲು-ರಾತ್ರಿ ಎನ್ನದೇ ಕ್ಷಣಕ್ಷಣ ಗಮನಿಸುತ್ತಲೇ ಇದ್ದೇವೆ. ಭಾರತ ದೇಶ ಸಮತೆ- ಸಹೋದರತ್ವ ಹಂಚುವ ಪ್ರಜೆಗಳ ದೇಶವೇ ಹೊರತು, ನಿಮ್ಮಗಳ ಪ್ರಭುತ್ವದ ರಾಷ್ಟ್ರವಲ್ಲ ಎಂಬ ಸೂಕ್ಷ್ಮತೆ ಕಾಯ್ದುಕೊಳ್ಳಬೇಕು.

WhatsApp Image 2026 10 16 at 11.43.22 e1792131882258
ಡಾ. ರಾಧ ಹೆಚ್. ಎಂ.
+ posts

ಅಧ್ಯಾಪಕರು,ಕನ್ನಡ ಅಧ್ಯಯನ ವಿಭಾಗ ಹಾವೇರಿ ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಡಾ. ರಾಧ ಹೆಚ್. ಎಂ.
ಡಾ. ರಾಧ ಹೆಚ್. ಎಂ.
ಅಧ್ಯಾಪಕರು,ಕನ್ನಡ ಅಧ್ಯಯನ ವಿಭಾಗ ಹಾವೇರಿ ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ: ಸಿಎಂ ಡಿ ಕೆ ಶಿವಕುಮಾರ್

"ಮುಂದಿನ ಬಜೆಟ್‌ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ...

ಔರಾದ್‌ | ಖೋಖೋ : ಕೌಡಗಾಂವ ಶಾಲೆಯ ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

ಬೀದರ್‌ ಹೊರವಲಯದ ನಂದಿನಗರದಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 16ರಂದು ನಡೆದ...

ಕಲಬುರಗಿ | ಸಿಇಸಿ ಜ್ಞಾನೇಶಕುಮಾರ ವಜಾಗೆ ಆಗ್ರಹಿಸಿ ಪ್ರತಿಭಟನೆ

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸಿ, ಮುಖ್ಯ...

₹3 ಲಕ್ಷ ಲಂಚ: ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಚಾಲಕ ಬಂಧನ

ಕೃಷಿಯೇತರ (ಎನ್‌ಎ) ನಿವೇಶನಗಳನ್ನು ವಾಣಿಜ್ಯ ನಿವೇಶನಗಳಾಗಿ ಪರಿವರ್ತಿಸಿಕೊಡಲು ₹3 ಲಕ್ಷ ಲಂಚ...