- ರಾಜಸ್ಥಾನ ಜೋಧಪುರದಲ್ಲಿ ಕೇಂದ್ರ ಸರ್ಕಾರ ಅಪರೂಪದ ಕಾಯಿಲೆಗಳ ಕೇಂದ್ರ ಸ್ಥಾಪನೆ
- ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ರೋಗದಿಂದ ಬಳಲುತ್ತಿದ್ದ ಮಗು
ರಾಜಸ್ಥಾನ ರಾಜ್ಯದಲ್ಲಿ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ಮಗುವೊಂದು ಬಹುಕೋಟಿ ವೆಚ್ಚದ ಚುಚ್ಚುಮದ್ದು ದೊರೆಯದೆ ಮೃತಪಟ್ಟಿರುವ ಘಟನೆ ಮಂಗಳವಾರ (ಏಪ್ರಿಲ್ 25) ವರದಿಯಾಗಿದೆ.
ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ತನಿಷ್ಕ ಎಂಬ ಎರಡು ವರ್ಷದ ಮಗುವಿಗೆ ಚಿಕಿತ್ಸೆಗೆ ಬೇಕಾಗಿದ್ದ ಚುಚ್ಚುಮದ್ದಿನ ವೆಚ್ಚ ಬರೋಬ್ಬರಿ ₹16 ಕೋಟಿ.
ಚಿಕಿತ್ಸೆಗಾಗಿ ಮಗುವನ್ನು ಜೈಪುರದ ಜೆ.ಕೆ ಲೋನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿನ ಉಳಿವಿಗಾಗಿ ದಂಪತಿ ಹಣ ಹೊಂದಿಸಲು ಮಗುವಿನ ಪೋಷಕರು ರಾಜಸ್ಥಾನ ಸೇರಿದಂತೆ ಅನೇಕ ಕಡೆ ಮಾಡಿದ ಎಲ್ಲ ರೀತಿಯ ಪ್ರಯತ್ನ ವಿಫಲವಾಗಿದೆ.
ರಾಜಸ್ಥಾನ ಸರ್ಕಾರಕ್ಕೆ ಚುಚ್ಚುಮದ್ದಿನ ಖರೀದಿಗೆ ವ್ಯವಸ್ಥೆ ಮಾಡುವಂತೆ ಮಗು ತನಿಷ್ಕ ತಂದೆ ಶೈತಾನ್ ಸಿಂಗ್ ಅವರು ಮನವಿ ಮಾಡಿದ್ದರು. ಆದರೆ ಈ ವಿಷಯದಲ್ಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಜಸ್ಥಾನ ನೌಗೌರ್ ಜಿಲ್ಲೆಯ ನಡ್ವಾ ಗ್ರಾಮದಲ್ಲಿ ಮಗುವಿನ ಸಾವಿನಿಂದ ಕತ್ತಲು ಆವರಿಸಿದಂತಾಗಿದೆ.
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (ಆರ್‌ಎಲ್‌ಪಿ) ಸಂಸದ ಹನುಮಾನ್ ಬೇನಿವಾಲ್ ಅವರು ಮಗುವಿನ ಚಿಕಿತ್ಸೆಗಾಗಿ ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ರಾಜಸ್ಥಾನ ರಾಜ್ಯದ ಜೈಪುರ ಆಸ್ಪತ್ರೆಯ ವೈದ್ಯರು ಮಗುವಿನ ಕುಟುಂಬ ಸದಸ್ಯರಿಗೆ ಚುಚ್ಚುಮದ್ದಿಗಾಗಿ ₹16 ಕೋಟಿ ವ್ಯವಸ್ಥೆ ಮಾಡುವಂತೆ ಹೇಳಿದ್ದರು.
ಹುಟ್ಟಿದ ಆರು ತಿಂಗಳ ನಂತರ ಮಗು ತನಿಷ್ಕ ಒಂದೂವರೆ ವರ್ಷ ಕಾಲ ಆಸ್ಪತ್ರೆಯಲ್ಲೇ ಕಳೆದಿತ್ತು. ಚುಚ್ಚುಮದ್ದು ಕೊಳ್ಳಲು ಭಾರೀ ಮೊತ್ತದ ನೆರವು ನೀಡುವಂತೆ ಮಗುವಿನ ಕುಟುಂಬ ಹಾಗೂ ಸಂಬಂಧಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ರಾಜಸ್ಥಾನ ನ್ಯಾಯಾಲಯವೊಂದು ಕೆಲವು ತಿಂಗಳ ಹಿಂದೆ ಪ್ರತಿಯೊಬ್ಬ ಅನಾರೋಗ್ಯದ ವ್ಯಕ್ತಿಗೆ ಔಷಧವನ್ನು ನೀಡಬೇಕು ಎಂದು ಆದೇಶಿಸಿತ್ತು. ಆದರೆ ರಾಜ್ಯದಲ್ಲೇ ತನಿಷ್ಕ ಮಗುವಿನ ಪ್ರಕರಣದಲ್ಲಿ ಅದು ಸುಳ್ಳಾಗಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಚುರು ಜಿಲ್ಲೆಯ ಜಮೀಲ್ ಎಂಬ ಮಗುವಿನ ಕುಟುಂಬ ಸದಸ್ಯರು ರಾಜಸ್ಥಾನದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬಳಿಕ ರಾಜ್ಯ ಸರ್ಕಾರ ನೆರವಿನ ಕೇಂದ್ರವನ್ನು ಆರಂಭಿಸಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಜಮೀಲ್ ಮಗುವಿಗೆ ಮಧ್ಯಂತರ ಚಿಕಿತ್ಸೆ ನೀಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ವಾಟರ್ ಮೆಟ್ರೋ | ದೇಶದ ಮೊದಲ ಜಲಸಾರಿಗೆಗೆ ಪ್ರಧಾನಿ ಮೋದಿ ಇಂದು ಚಾಲನೆ ; ಏನಿದರ ವಿಶೇಷ?
ಜಮೀಲ್ ಮಗುವಿನ ಅರ್ಜಿಯ ತೀರ್ಪಿನ ನಂತರ ಕೇಂದ್ರ ಸರ್ಕಾರ ರಾಜಸ್ಥಾನದಲ್ಲಿ ಅಪರೂಪದ ಕಾಯಿಲೆಗಳಿಗೆ ಶ್ರೇಷ್ಠತೆಯ ಏಕೈಕ ಕೇಂದ್ರವನ್ನಾಗಿ ಜೋಧ್‌ಪುರ ಏಮ್ಸ್ ಅನ್ನು ಸ್ಥಾಪಿಸಿದೆ. ಈ ಕೇಂದ್ರದಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಯಾವುದೇ ರೋಗಿಯು ಚಿಕಿತ್ಸೆ ಪಡೆಯಬಹುದು.