ಭಾರತವು ವಿಶ್ವಗುರು, 5ನೇ ದೊಡ್ಡ ಆರ್ಥಿಕತೆ ಎಂದೆಲ್ಲ ಪ್ರಧಾನಿ ಮೋದಿ ಅವರು ಅಬ್ಬರ ಭಾಷಣ ಮಾಡುತ್ತಿದ್ದಾರೆ. ಆದರೆ, ವಿಶ್ವಗುರು ಭಾರತದಲ್ಲಿ ಜನರ ಪರಿಸ್ಥಿತಿಯ ಬಗ್ಗೆ ಮೌನವಾಗಿದ್ದಾರೆ. ಪ್ರಧಾನಿ ಮೌನವಾಗಿದ್ದರೂ, ಹಲವಾರು ಅಧ್ಯಯನಗಳು, ಸಮೀಕ್ಷೆಗಳು ಭಾರತದ ಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ. ಹಸಿವು, ಅಪೌಷ್ಟಿಕತೆ, ಬಡತನ, ನಿರುದ್ಯೋಗ, ಆರೋಗ್ಯ ಸ್ಥಿತಿಗತಿಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಹಲವಾರು ಸೂಚ್ಯಂಕಗಳು ಜಾಗತಿಕವಾಗಿ ದೇಶದ ಸ್ಥಾನಮಾನವನ್ನು ಸೂಚಿಸಿವೆ. ಇದೀಗ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸೂಚ್ಯಂಕವೂ ಪ್ರಕಟವಾಗಿದ್ದು, ಶಿಕ್ಷಣದಲ್ಲಿ ಭಾರತದ ಪರಿಸ್ಥಿತಿಯನ್ನು ವಿವರಿಸಿದೆ.
2025ರ ಶೈಕ್ಷಣಿಕ ಸ್ವಾತಂತ್ರ್ಯ ಸೂಚ್ಯಂಕ (ಎಎಫ್ಐ – ಅಕಾಡೆಮಿಕ್ ಫ್ರೀಡಮ್ ಇಂಡೆಕ್ಸ್) ವರದಿ ಹೇಳುವಂತೆ; ಶಿಕ್ಷಣಿಕ ಸ್ವಾತಂತ್ರ್ಯದ ಕುರಿತು ಮೌಲ್ಯಮಾಪನ ಮಾಡಲಾದ 179 ದೇಶಗಳಲ್ಲಿ ಭಾರತವು 156ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತವು 0.38 ಅಂಕ ಪಡೆದಿತ್ತು. ಈ ವರ್ಷ 0.16ಕ್ಕೆ ಕುಸಿದಿದೆ.
ವಿ-ಡೆಮ್ ಸಂಸ್ಥೆ ಪ್ರಕಟಿಸಿದ ಎಎಫ್‌ಐ ವರದಿಯು, ಸಂಶೋಧನೆ ಮತ್ತು ಬೋಧನೆಯ ಸ್ವಾತಂತ್ರ್ಯ; ಶೈಕ್ಷಣಿಕ ವಿನಿಮಯ ಮತ್ತು ಪ್ರಸರಣದ ಸ್ವಾತಂತ್ರ್ಯ; ಸಾಂಸ್ಥಿಕ ಸ್ವಾಯತ್ತತೆ; ಕ್ಯಾಂಪಸ್ ಸಮಗ್ರತೆ; ಹಾಗೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಬೆಳಕು ಚೆಲ್ಲಿದೆ. ಇದು, “ಬಹುತ್ವವನ್ನು ವಿರೋಧಿಸುವ ಪಕ್ಷದ ಚುನಾವಣಾ ಯಶಸ್ಸು ‘ಶೈಕ್ಷಣಿಕ ಸ್ವಾತಂತ್ರ್ಯ ಕುಸಿತ’ಕ್ಕೆ ಕಾರಣವಾಗಿದೆ. 50 ವರ್ಷಗಳ ಅವಧಿಯಲ್ಲಿ ಡೇಟಾವನ್ನು ಆಧರಿಸಿ ನೋಡಿದಾಗ ಬಹುತ್ವವನ್ನು ವಿರೋಧಿಸುವ ಪಕ್ಷಗಳು ಸರ್ಕಾರವನ್ನು ರಚಿಸಿದಾಗ ಶೈಕ್ಷಣಿಕ ಸ್ವಾತಂತ್ರ್ಯವು ಅಪಾಯಕ್ಕೆ ಸಿಲುಕುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ” ಎಂದು ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.
ಈ ವರದಿ ಓದಿದ್ದೀರಾ?: ಜಾಗತಿಕ ಹಸಿವು ಸೂಚ್ಯಂಕ | ಹಸಿದವರ ದೇಶವಾದ ಭಾರತ; ಪಾಕಿಸ್ತಾನಕ್ಕಿಂತ ಕೆಳಕ್ಕೆ ಕುಸಿತ
“ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಶೈಕ್ಷಣಿಕ ಸ್ವಾತಂತ್ರ್ಯದಲ್ಲಿ ಮಹತ್ವದ ಮತ್ತು ಗಣನೀಯವಾದ ಕುಸಿತ ಕಂಡುಬಂದಿದೆ. ಈ ರೀತಿ ಗಣನೀಯ ಕುಸಿತ ಕಂಡ 34 ದೇಶಗಳಲ್ಲಿ ಭಾರತವೂ ಒಂದಾಗಿದೆ” ಎಂದು ವರದಿ ಹೇಳಿದೆ.
ಬಹುತ್ವ ವಿರೋಧಿ ಪಕ್ಷಗಳು ಮತ್ತು ಶೈಕ್ಷಣಿಕ ಸ್ವಾತಂತ್ರ್ಯದಲ್ಲಿನ ಕುಸಿತ
“ಬಹುತ್ವ ವಿರೋಧಿ ಪಕ್ಷಗಳು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಬದ್ಧತೆ, ರಾಜಕೀಯ ವಿರೋಧಿಗಳ ನ್ಯಾಯಸಮ್ಮತತೆ ಹಾಗೂ ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುವುದಿಲ್ಲ. ಅಂತಹ ಪಕ್ಷಗಳು ರಾಜಕೀಯ ಪಕ್ಷಗಳ ನಡುವಿನ ವ್ಯತ್ಯಾಸಗಳನ್ನು ಮತ್ತಷ್ಟು ಆಳವಾಗಿಸಲು, ಸಾರ್ವಜನಿಕ ಸ್ಪರ್ಧೆಯಲ್ಲಿನ ಅವಕಾಶವನ್ನು ಕಡಿಮೆ ಮಾಡಲು ಹಾಗೂ ಪರಸ್ಪರ ಸಹಿಷ್ಣುತೆಯನ್ನು ದುರ್ಬಲಗೊಳಿಸಲು ಒಲವು ತೋರುತ್ತವೆ” ಎಂದು ವರದಿ ಹೇಳಿದೆ.
“ಪರಿಣಾಮವಾಗಿ, ಬಹುತ್ವ ವಿರೋಧಿ ರಾಜಕೀಯ ಪಕ್ಷಗಳು ಮಾಹಿತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ, ನಿರ್ದಿಷ್ಟವಾಗಿ ಶೈಕ್ಷಣಿಕ ಸ್ವಾತಂತ್ರ್ಯವನ್ನೂ ಹಾಳುಮಾಡುತ್ತವೆ” ಎಂದು ವರದಿ ಹೇಳಿದೆ.
ವರದಿಯಲ್ಲಿ ಉಲ್ಲೇಖಿಸಲಾದ ದತ್ತಾಂಶವು, ಪೂರ್ಣ ಶೈಕ್ಷಣಿಕ ಸ್ವಾತಂತ್ರ್ಯ (ಗುಂಪು ಎ) ಹೊಂದಿರುವ ದೇಶಗಳಲ್ಲಿನ ಸರ್ಕಾರಗಳು ಬಹುತ್ವ ವಿರೋಧಿ ಹೇಳಿಕೆಗಳನ್ನು ನೀಡುವುದು ತೀರಾ ಕಡಿಮೆ. ಅಂತಹ ಹೇಳಿಕೆಗಳನ್ನು ವಿರಳವಾಗಿ ನೀಡುತ್ತವೆ. ಮತ್ತೊಂದೆಡೆ, ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ತೀವ್ರ ಅಥವಾ ಸಂಪೂರ್ಣ ನಿರ್ಬಂಧಗಳನ್ನು ಹೊಂದಿರುವ ದೇಶಗಳು ಬಹುತ್ವ ವಿರೋಧಿ ಹೇಳಿಕೆಗಳನ್ನು ವ್ಯಾಪಕವಾಗಿ ನೀಡುವ ಪಕ್ಷಗಳ ಸರ್ಕಾರವನ್ನು ಹೊಂದಿವೆ.
ಈ ವರದಿ ಓದಿದ್ದೀರಾ?: ಮೇಕ್ ಇನ್ ಇಂಡಿಯಾ | ಉತ್ಪಾದನಾ ಸೂಚ್ಯಂಕ ಶೇ. 3.8ಕ್ಕೆ ಕುಸಿತ
“ಬಲವಾದ ಬಹುತ್ವ ವಿರೋಧಿ ಪಕ್ಷಗಳು ಇಲ್ಲದಿರುವ ರಾಷ್ಟ್ರಗಳಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸ್ವಾತಂತ್ರ್ಯವು ಹೆಚ್ಚಾಗಿದೆ” ಎಂದು ವರದಿ ತಿಳಿಸಿದೆ.
ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಮೋದಿ ಸರ್ಕಾರ
ಶೈಕ್ಷಣಿಕ ಸ್ಥಳಗಳ ಒಳಗೆ ಮತ್ತು ಹೊರಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಮನದ ಕಾರಣಕ್ಕಾಗಿ ಮೋದಿ ಸರ್ಕಾರವು ವ್ಯಾಪಕವಾಗಿ ವಿರೋಧವನ್ನು ಎದುರಿಸಿದೆ. ಮೋದಿ ಸರ್ಕಾರದ ವಿರುದ್ಧ ಶಿಕ್ಷಣ ತಜ್ಞರು ಮತ್ತು ಮಾನವ ಹಕ್ಕು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸ್ಕಾಲರ್ಸ್ ಅಟ್ ರಿಸ್ಕ್ (SAR) ಸಂಸ್ಥೆಯು ‘ಅಕಾಡೆಮಿಕ್ ಫ್ರೀಡಂ ಮಾನಿಟರಿಂಗ್ ಪ್ರಾಜೆಕ್ಟ್’ ಅಡಿಯಲ್ಲಿ ಸಿದ್ದಪಡಿಸಿದ ‘ಫ್ರೀ ಟು ಥಿಂಕ್’ 2024ರ ವರದಿಯು ಭಾರತದಲ್ಲಿ ಸ್ವಾತಂತ್ರ್ಯಕ್ಕೆ ಬೆದರಿಕೆ ಮತ್ತು ನಿರ್ಬಂಧಗಳಿವೆ. ರಾಜಕೀಯ ಹಸ್ತಕ್ಷೇಪ, ವಿದ್ಯಾರ್ಥಿಗಳ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು ಹಾಗೂ ಶೈಕ್ಷಣಿಕ ತಜ್ಞರ ಮೇಲಿನ ದಾಳಿಗಳು ಭಾರತದಲ್ಲಿ ಹೆಚ್ಚಾಗಿ ನಡೆದಿವೆ ಎಂದು ಹೇಳಿದೆ.
ಸರ್ಕಾರವು ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಪೊಲೀಸ್ ದೌರ್ಜನ್ಯದ ಮೂಲಕ ಹತ್ತಿಕ್ಕಿದೆ. FCRA ನಿಯಮಗಳ ಮೂಲಕ ಸ್ವತಂತ್ರ ಸಂಶೋಧನಾ ಸಂಸ್ಥೆಗಳಿಗೆ ಅಗತ್ಯವಾದ ಅನುದಾನ ನೀಡಲಾಗುತ್ತಿಲ್ಲ. ಹಣವನ್ನು ಕಡಿತಗೊಳಿಸಲಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಬಲಪಂಥೀಯ ಕಾರ್ಯಸೂಚಿಗಳನ್ನು ಹೇರಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಬಹುತ್ವವನ್ನು ವಿರೋಧಿಸಿಲ್ಲ… ನಿಮ್ಮ ಬಹುಪತ್ನಿತ್ವ ವಿರೋಧಿಸಿದ್ದಕ್ಕೆ ನಿಮಗೆ ಹೊಟ್ಟೆ ಉರಿ