ಈ ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಬೇಸಿಗೆಯ ಗರಿಷ್ಠ ಪ್ರಯಾಣದ ಅವಧಿಯಲ್ಲಿ 18,262 ವಿಶೇಷ ರೈಲು ಪ್ರಯಾಣಿಸಲಿದೆ ಎಂದು ರೈಲ್ವೆ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಬೇಸಿಗೆ ವಿಶೇಷ ಸೇವೆಗಳ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಈ ಬಗ್ಗೆ ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಪ್ರಯಾಣಿಕರ ಸಂಚಾರವನ್ನು ಸುಲಭಗೊಳಿಸಲು ಮತ್ತು ಹೆಚ್ಚಿನ ಬೇಡಿಕೆ ಇರುವಲ್ಲಿ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ನಾನಾ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ: ನೈರುತ್ಯ ರೈಲ್ವೆ
2026ರ ಏಪ್ರಿಲ್ 15ರಿಂದ ಜುಲೈ 15ರ ನಡುವಿನ ಅವಧಿಯಲ್ಲಿ ವಿಶೇಷ ರೈಲು ಸೇವೆಗಳನ್ನು ಆರಂಭಿಸಲಾಗಿದೆ. 11,878 ಟ್ರಿಪ್‌ಗಳನ್ನು ಈಗಾಗಲೇ ಸೂಚಿಸಲಾಗಿದೆ. ಉಳಿದವುಗಳನ್ನು ಹಂತ ಹಂತವಾಗಿ ಘೋಷಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನವದೆಹಲಿ, ಮುಂಬೈ, ಸೂರತ್, ಅಹಮದಾಬಾದ್ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ಹರಿವನ್ನು ನಿರ್ವಹಿಸಲು ರೈಲ್ವೆ ಈ ಕ್ರಮ ಕೈಗೊಂಡಿದೆ.





