ಭಾರತದ 144 ಕೋಟಿ ಜನಸಂಖ್ಯೆಯಲ್ಲಿ 14ರೊಳಗಿನ ವಯಸ್ಸಿನವರೇ ಹೆಚ್ಚು

Date:

Advertisements

ಭಾರತದ ಜನಸಂಖ್ಯೆ ಅಂದಾಜು 144 ಕೋಟಿ ಇದ್ದು, 14 ವಯೋಮಾನದವರು ಶೇ.24 ರಷ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆ ನಿಧಿಯ ವಿಶ್ವ ಜನಸಂಖ್ಯಾ ಸ್ಥತಿ (ಯುಎನ್‌ಎಫ್‌ಪಿಎ)ಯ 2024ರ ವರದಿಯ ಅಂಕಿಅಂಶಗಳು ತಿಳಿಸಿವೆ.

ಯುಎನ್‌ಎಫ್‌ಪಿಎದಲ್ಲಿನ ಲೈಂಗಿಕ ಹಾಗೂ ಸಂತಾನೋತ್ಪತ್ತಿಯ ಆರೋಗ್ಯ ಮತ್ತು ಹಕ್ಕುಗಳಲ್ಲಿನ ಅಸಮಾನತೆ ಹೋಗಲಾಡಿಸುವ ವರದಿಯ ಪ್ರಕಾರ ಭಾರತದ ಜನಸಂಖ್ಯೆ ಕಳೆದ 77 ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ.

2011ರಲ್ಲಿ ಹಮ್ಮಿಕೊಳ್ಳಲಾದ ಕೊನೆಯ ಜನಗಣತಿಯ ಅವಧಿಯಲ್ಲಿ ಭಾರತದ ಜನಸಂಖ್ಯೆ 121 ಕೋಟಿಯಷ್ಟು ದಾಖಲಾಗಿತ್ತು.

Advertisements

ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ 0-14 ವರ್ಷದೊಳಗಿನ ವಯೋಮಾನದವರು ಶೇ. 24 ರಷ್ಟಿದ್ದರೆ, 10 ರಿಂದ 19 ವರ್ಷದೊಳಗಿನ ವಯಸ್ಸಿನವರು ಶೇ.17 ರಷ್ಟಿದ್ದಾರೆ.

10 ರಿಂದ 24ರೊಳಗಿನ ವಯಸ್ಕರು ಶೇ.26ರಷ್ಟಿದ್ದರೆ, 15 ರಿಂದ 64 ವಯಸ್ಸಿನವರು ಶೇ.68ರಷ್ಟಿದ್ದಾರೆ. 65 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಶೇ.7 ರಷ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಪುರುಷರ ಜೀವಿತಾವಧಿ 71 ವರ್ಷವಿದ್ದರೆ, ಮಹಿಳೆಯರ ಆಯಸ್ಸು 74 ವರ್ಷವಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

ಈ ವರದಿಯಲ್ಲಿ ಕಂಡುಬಂದಂತೆ ವಿಶ್ವದಾದ್ಯಂತ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳನ್ನು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಪ್ರಗತಿಯನ್ನು ಕಳೆದ 30 ವರ್ಷಗಳಲ್ಲಿ ಹೆಚ್ಚು ನಿರ್ಲಕ್ಷಿಸಲಾಗಿದೆ.

ವರದಿಗಳ ಪ್ರಕಾರ 2006 ರಿಂದ 2023ರವರೆಗೆ ಭಾರತದ ಬಾಲ್ಯ ವಿವಾಹಗಳು ಶೇ.23 ರಷ್ಟಿದೆ. ತಾಯಿಯ ಮರಣ ವಿಶ್ವದಾದ್ಯಂತ ಶೇ.8ಕ್ಕೆ ಹೋಲಿಸಿದರೆ ಭಾರತದಲ್ಲಿ ಗಣನೀಯವಾಗಿ ಕುಸಿದಿದೆ. ತಾಯಂದಿರ ಮರಣದ ಪ್ರಮಾಣವು ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ ಹೇಳಲಾಗಿದೆ.

ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ತಾಯಂದಿರು ಮರಣಿಸುವ ಪ್ರಮಾಣ ಭಾರತದ 114 ಜಿಲ್ಲೆಗಳಲ್ಲಿ ಶೇ.210ಕ್ಕಿಂತ ಹೆಚ್ಚಿದೆ. ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಮಕ್ಕಳಿಗೆ ಜನ್ಮ ನೀಡುವ ವೇಳೆಯಲ್ಲಿ ಮರಣಿಸುವ ತಾಯಂದಿರ ಪ್ರಮಾಣ ಅತ್ಯಂತ ಹೆಚ್ಚಿದೆ ಎಂದು ವರದಿಯ ಅಂಕಿಅಂಶಗಳು ಹೇಳುತ್ತವೆ.

ವಿಕಲಾಂಗತೆಯುಳ್ಳವರು, ವಲಸಿಗರು ಹಾಗೂ ನಿರಾಶ್ರಿತರು ಅಲ್ಪಾಸಂಖ್ಯಾತರು, ಲಿಂಗತ್ವ ಅಲ್ಪಸಂಖ್ಯಾತರು, ಶೋಷಿತ ಸಮುದಾಯದಲ್ಲಿನ ಮಹಿಳೆಯರು ಹಾಗೂ ಬಾಲಕಿಯರು  ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ತೊಂದರೆಗಳನ್ನು ಹೆಚ್ಚು ಅನುಭವಿಸುತ್ತಿದ್ದಾರೆ. ಅಲ್ಲದೆ ಲೈಂಗಿಕತೆಯ ಸ್ವಾತಂತ್ರ ಹಾಗೂ ಸಂತಾನೋತ್ಪತ್ತಿ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಶೇ.25ರಷ್ಟು ಮಹಿಳೆಯರು ತಮ್ಮ ಪತಿಯರಿಗೆ ಲೈಂಗಿಕತೆ ಬೇಡ ಎಂದು ಹೇಳಲು ಆಗುತ್ತಿಲ್ಲ. ಹತ್ತರಲ್ಲಿ ಒಬ್ಬ ಮಹಿಳೆಯರು ಗರ್ಭನಿರೋಧಕ ತೆಗೆದುಕೊಳ್ಳುವ ಬಗ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ.

ವರದಿಗಳ ಪ್ರಕಾರ ದಲಿತಪರ ಕಾರ್ಯಕರ್ತರು ಕೆಲಸದ ಸ್ಥಳ ಹಾಗೂ ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯ ಎದುರಿಸುತ್ತಿರುವ ಮಹಿಳೆಯರಿಗೆ ಕಾನೂನು ರಕ್ಷಣೆ ನೀಡಬೇಕೆಂದು ಹೋರಾಟ ನಡೆಸುತ್ತಲೆ ಇದ್ದಾರೆ. ಅರ್ಧದಷ್ಟು ದಲಿತ ಮಹಿಳೆಯರಿಗೆ ಪ್ರಸವಪೂರ್ವ ಆರೈಕೆ ದೊರೆಯುತ್ತಿಲ್ಲ. ಲಿಂಗ ಆಧಾರಿದ ದಬ್ಬಾಳಿಕೆಗಳು ಕೂಡ ಮುಂದುವರೆಯುತ್ತಲೆ ಇದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X