ಜಮಾತ್-ಎ-ಇಸ್ಲಾಮ್‌ನ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಹಾಕಿದ್ದ ಪ್ಯಾಲೆಸ್ತೀನ್ ಪರ ಪೋಸ್ಟರ್‌ಗಳನ್ನು ಹರಿದ ಆರೋಪದ ಮೇಲೆ ಇಬ್ಬರು ಆಸ್ಟ್ರೇಲಿಯಾದ ಮಹಿಳಾ ಪ್ರವಾಸಿಗರ ವಿರುದ್ಧ ಕೊಚ್ಚಿ ನಗರ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಫೋರ್ಟ್ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಐಪಿಸಿ ಸೆಕ್ಷನ್ 153 ಅಡಿಯಲ್ಲಿ (ಗಲಭೆಯಾಗಲಿ ಅಥವಾ ಗಲಭೆ ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಪ್ರಕರಣ ದಾಖಲಿಸಲಾಗಿದೆ. ಜಾಮೀನು ಪಡೆದ ಬಳಿಕ ಈ ಇಬ್ಬರು ಆಸ್ಟ್ರೇಲಿಯಾದ ಮಹಿಳೆಯರು ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.
Austrian Jewish “Karen” tourist on a vacation in India was caught tearing down pro-Palestine posters. She learned the hard way not to disturb the peace getting arrested and angering locals lol. The expectation is quite clear for Western tourists, come to India and respect the… pic.twitter.com/hYlfq8w6eZ
— Deep Barot (@deepbarot) April 16, 2024
ಪೊಲೀಸರ ಪ್ರಕಾರ, ಪ್ರವಾಸಿಗರು ಸೋಮವಾರ ರಾತ್ರಿ ಫೋರ್ಟ್ ಕೊಚ್ಚಿ ಬೋಟ್ ಜೆಟ್ಟಿ ಬಳಿ ಎಸ್‌ಐಒ ನಿರ್ಮಿಸಿದ್ದ ಪೋಸ್ಟರ್ ಅನ್ನು ಹರಿದು ಹಾಕಿದ್ದಾರೆ. ಕೆಲ ಸ್ಥಳೀಯ ಯುವಕರು ಮಹಿಳೆಯರನ್ನು ಪ್ರಶ್ನಿಸಿದ್ದು, ಎರಡು ಕಡೆಯವರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಪ್ಯಾಲೆಸ್ತೀನ್ ಸ್ವಾತಂತ್ರ್ಯಕ್ಕಾಗಿ ಫ್ರೀಡಂ ಪಾರ್ಕ್‌ನಲ್ಲಿ ಮೊಳಗಿದ ಘೋಷ
ಮಂಗಳವಾರ, ಎಸ್‌ಐಒ ಪ್ರದೇಶದ ನಾಯಕ ಕೆ ಎಸ್ ಅಜೀಂ ಅವರು ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಎಸ್‌ಐಒ ಕಾರ್ಯಕರ್ತರು ಮಹಿಳೆಯೊಬ್ಬರನ್ನು ಫೋರ್ಟ್ ಕೊಚ್ಚಿ ಬಳಿಯ ಹೋಂಸ್ಟೇಯಲ್ಲಿ ಇರುವುದಾಗಿ ಪತ್ತೆ ಹಚ್ಚಿದ್ದಾರೆ.
ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆಂದು ಆರೋಪಿಸಿ ಎಸ್‌ಐಒ ಕಾರ್ಯಕರ್ತರು ಮಂಗಳವಾರ ರಾತ್ರಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ್ದು ಪೊಲೀಸರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಅದಾದ ಬಳಿಕ ಪ್ರಕರಣ ದಾಖಲಿಸಲಾಗಿದೆ.
“ಹೊಸ ವರ್ಷದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಪರ ಪೋಸ್ಟರ್ ಗಳನ್ನು ಹಾಕಲಾಗಿತ್ತು. ಪೋಸ್ಟರ್‌ಗಳನ್ನು ಹಾಕಲು ಯಾವುದೇ ಅನುಮತಿ ಇಲ್ಲ. ಆದರೆ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕುವ ಕಾರ್ಯ ಸ್ಥಳೀಯ ನಾಗರಿಕ ಸಂಸ್ಥೆಗೆ ಬಿಟ್ಟಿರುವುದು” ಎಂದು ಪೊಲೀಸರು ತಿಳಿಸಿದ್ದಾರೆ.