ಲೋಕಸಭೆ ಚುನಾವಣೆಯ ಮೂರು ಹಂತಗಳ ಮತದಾನ ಪೂರ್ಣಗೊಂಡಿದ್ದು ಬಹುತೇಕ 284 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಈ ಹಂತದಲ್ಲಿ ಭಾರತದ ಚುನಾವಣೆ ತಿರುವು ಪಡೆಯುತ್ತಿರುವ ಬಗ್ಗೆ ಹಿರಿಯ ಪತ್ರಕರ್ತ ಎನ್ ರಾಮ್ ಪ್ರಶ್ನಿಸಿದ್ದಾರೆ.
ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಷೇರು ಮಾರುಕಟ್ಟೆಗಳು, ಮಾನದಂಡ ಸೂಚ್ಯಂಕಗಳು ಸೇರಿದಂತೆ ಇತರ ಸೂಚ್ಯಂಕಗಳ ನಡುವೆ ಖಂಡಿತವಾಗಿಯೂ ಭಾರತದ ಚುನಾವಣೆ ತಿರುವು ಪಡೆಯುತ್ತಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಇಂಡಿಯಾ ಒಕ್ಕೂಟ ಹೆಚ್ಚು ಪಕ್ಷಗಳೊಂದಿಗೆ ಮೈತ್ರಿ ಹೊಂದಿಲ್ಲ. ಆದರೆ ಈ ಒಕ್ಕೂಟವು ಆಂತರಿಕ ವಿರೋಧಾಭಾಸಗಳೊಂದಿಗಿನ ಕಾರ್ಯತಂತ್ರದ ರಾಜಕೀಯ ವ್ಯವಸ್ಥೆಯನ್ನು ಹೊಂದಿದೆ. ಇದು ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತಲಿದ್ದು, ಕೆಲ ರಾಜ್ಯಗಳಲ್ಲಿ ಮೈತ್ರಿ ಉತ್ತಮ ಸ್ಥಿತಿಯಲ್ಲಿದೆ. ಅದಲ್ಲದೆ ಅಭಿಪ್ರಾಯ ಸಮೀಕ್ಷೆಗಳು ಊಹಿಸಿರುವುದಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿವೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ
ಇಂಗ್ಲೆಂಡ್ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರು ಹೇಳಿಕೆಯನ್ನು ಇದೇ ಸಂದರ್ಭದಲ್ಲಿ ಎನ್ ರಾಮ್ ಉಲ್ಲೇಖಿಸಿದ್ದಾರೆ.
ಎರಡನೆಯ ಮಹಾಯುದ್ಧದ ಅಂತ್ಯದಲ್ಲಿ ಹಿರಿಯ ಬ್ರಿಟಿಷ್ ಜನರಲ್ಗೆ ವಿನ್ಸ್ಟನ್ ಚರ್ಚಿಲ್ ಅವರು ಹೇಳಿದ್ದ ಪ್ರಸಿದ್ಧ ಮಾತೊಂದು ಇಲ್ಲಿ ನೆನಪಿಗೆ ಬರುತ್ತದೆ. “ಮಿತ್ರರಾಷ್ಟ್ರಗಳೊಂದಿಗೆ ಹೋರಾಡುವುದಕ್ಕಿಂತ ಒಂದೇ ಒಂದು ಕೆಟ್ಟ ವಿಷಯವೆಂದರೆ ಅದು ಅವರಿಲ್ಲದೆ ಹೋರಾಡುವುದು!” ಎಂದು ಹೇಳಿದ್ದಾರೆ.
ಯೂಟ್ಯೂಬರ್ ಧ್ರುವ್ ರಾಠೀ ಕೂಡ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸಮುದ್ರದ ಅಲೆಯಬ್ಬರ ಮಗ್ಗುಲು ಬದಲಿಸಿದೆ…ಬೀಸಲಿದೆ ಚಂಡಮಾರುತವೊಂದು. ಒಂದೊಂದಾಗಿ ಹುಸಿ ಪ್ರಚಾರಕ್ಕೆ ಕಡಿವಾಣ ಬೀಳುತ್ತಿದೆ ಎಂದಿದ್ದಾರೆ.
