ಚಂದ್ರಯಾನ-3ರ ‘ವಿಕ್ರಮ್ ಲ್ಯಾಂಡರ್’ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಯಿತು ಎಂದು ಇಸ್ರೋ ಹೇಳಿದೆ.
ವಿಕ್ರಮ್ ಲ್ಯಾಂಡರ್ ‘ಸಾಫ್ಟ್ ಲ್ಯಾಂಡ್’ ಆಗಿರುವ ಬಗ್ಗೆ ಟ್ವೀಟ್ ಮಾಡಿ ವೀಡಿಯೊ ಹಂಚಿಕೊಂಡಿರುವ ಇಸ್ರೋ, “ವಿಕ್ರಮ್ ಲ್ಯಾಂಡರ್ ತನ್ನ ಮಿಷನ್ ಉದ್ದೇಶಗಳನ್ನು ಸಾಧಿಸುತ್ತಿದೆ. ಯಶಸ್ವಿಯಾಗಿ ಮೇಲೆ ಹಾರಿ, ಮತ್ತೆ ಲ್ಯಾಂಡ್ ಆಗಿದೆ. ನಮ್ಮ ಸೂಚನೆಯಂತೆ ಲ್ಯಾಂಡರ್ ಎಂಜಿನ್‌ಗಳು ಸುಮಾರು 40 ಸೆಂ.ಮೀ ಎತ್ತರಕ್ಕೆ , 30-40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಮತ್ತೊಮ್ಮೆ ಸಾಫ್ಟ್ ಲ್ಯಾಂಡ್ ಆಯಿತು” ಎಂದು ಹೇಳಿಕೊಂಡಿದೆ.