ವೇಶ್ಯಾವೃತ್ತಿ ನಿಷೇಧಿತವಲ್ಲ, ಆದರೆ ವಾಣಿಜ್ಯೀಕರಣಕ್ಕೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್

Date:

ವೇಶ್ಯಾವೃತ್ತಿಯನ್ನು ಕಾನೂನುಬದ್ಧವಾಗಿ ನಿಷೇಧಿಸುವುದು ಅಥವಾ ಅದನ್ನು ಸಂಪೂರ್ಣವಾಗಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದು ಕಾನೂನಿನ ಉದ್ದೇಶವಲ್ಲ. ಬದಲಾಗಿ, ಅದನ್ನು ಒಂದು ಸಂಘಟಿತ ವೃತ್ತಿಯನ್ನಾಗಿ ಮಾಡಿ ಅದರ ‘ವಾಣಿಜ್ಯೀಕರಣ’ ಮಾಡುವುದನ್ನು ತಡೆಯುವುದು ಕಾನೂನಿನ ಪ್ರಮುಖ ಆಶಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

- Advertisement -

ಸುಮಾರು 70 ವರ್ಷಗಳಷ್ಟು ಹಳೆಯದಾದ ‘ಅನೈತಿಕ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆ-1956 (ITPA)’ ಅನ್ನು “ಸಮಗ್ರ ಹಾಗೂ ಸೂಕ್ಷ್ಮವಾಗಿ” ಅವಲೋಕಿಸಿದ ಸುಪ್ರೀಂ ಕೋರ್ಟ್‌ನ ಪೀಠ ಈ ಮಹತ್ವದ ತೀರ್ಮಾನವನ್ನು ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು ಈ ಕುರಿತು ವಿಸ್ತೃತ ವಿವರಣೆ ನೀಡಿದೆ. 1956ರ ITPA ಕಾಯ್ದೆಯನ್ನು ವಿಶ್ಲೇಷಿಸಿದ ಪೀಠ, 20ನೇ ಶತಮಾನದ ಆರಂಭದಲ್ಲಿ ವೇಶ್ಯಾವೃತ್ತಿಗಾಗಿ ಮಹಿಳೆಯರ ಕಳ್ಳಸಾಗಣೆ ಸಾಮಾನ್ಯವಾಗಿತ್ತು ಮತ್ತು ಅದನ್ನು “ಅನೈತಿಕ” ಎಂದು ಪರಿಗಣಿಸಲಾಗಿತ್ತು. ಹಾಗಾಗಿ ಆ ಕಾನೂನಿಗೆ ಆ ಪದವನ್ನು ಸೇರಿಸಲಾಯಿತು ಎಂದು ವಿವರಿಸಿದೆ.

“ಈ ಕಾಯ್ದೆಯು (ITPA) ಪ್ರಮುಖವಾಗಿ ತಪ್ಪು ಮಾಡುವವರನ್ನು ಶಿಕ್ಷಿಸಲು ಜಾರಿಗೆ ಬಂದಿದೆಯೇ ಹೊರತು, ವೇಶ್ಯಾ ವೃತ್ತಿಯಲ್ಲಿರುವವರನ್ನು ಶಿಕ್ಷಿಸಲು ಅಲ್ಲ. ವೇಶ್ಯಾವೃತ್ತಿಯನ್ನು ನಿಷೇಧಿಸುವುದು ಅಥವಾ ಅದನ್ನೇ ಕ್ರಿಮಿನಲ್ ಅಪರಾಧವೆಂದು ಘೋಷಿಸುವುದು ಈ ಕಾಯ್ದೆಯ ಮೂಲ ಉದ್ದೇಶ ಖಂಡಿತ ಅಲ್ಲ ಎನ್ನುವುದು ನಮಗೆ ಖಚಿತವಾಗಿದೆ. ಬದಲಾಗಿ, ವೇಶ್ಯಾವೃತ್ತಿಯ ವಾಣಿಜ್ಯೀಕರಣವನ್ನು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ಅಂದರೆ ಸಂಘಟಿತ ಜೀವನೋಪಾಯವಾಗಿ ಅದನ್ನು ನಡೆಸುವುದನ್ನು ತಡೆಯುವುದು ಇದರ ಗುರಿಯಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನು ಓದಿದ್ದೀರಾ? ರಜತ್ ಪಾಟೀದಾರ್: ಬದಲಿ ಆಟಗಾರನಾಗಿ ಬಂದು ಆರ್‌ಸಿಬಿ ಹಣೆಬರಹ ಬದಲಿಸಿದ ನಾಯಕ

ವೇಶ್ಯಾಗೃಹಗಳಿಂದ ರಕ್ಷಿಸಲ್ಪಟ್ಟ ಮಹಿಳೆಯರ ಪುನರ್ವಸತಿ ಕುರಿತಾದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಪಾರ್ದಿವಾಲಾ ಅವರು 298 ಪುಟಗಳ ವಿಸ್ತೃತ ತೀರ್ಪನ್ನು ಬರೆದಿದ್ದಾರೆ. ಕಾಯ್ದೆಯ ಸೆಕ್ಷನ್ 7 ಮತ್ತು 8 ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ನಡೆಯುವ (ಉದಾಹರಣೆಗೆ “ಬಹಿರಂಗ ವೇಶ್ಯಾವೃತ್ತಿ”) ವೈಯಕ್ತಿಕ ವೇಶ್ಯಾವೃತ್ತಿಯ ಕೃತ್ಯಗಳನ್ನು ದಂಡಿಸಲು ಮಾತ್ರ ಅನ್ವಯಿಸುತ್ತವೆ ಎಂದು ವಿವರಿಸಿದ್ದಾರೆ. ಸೆಕ್ಷನ್ 7 ಸಾರ್ವಜನಿಕ ಸ್ಥಳಗಳ ಸಮೀಪದಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗುವವರನ್ನು ಶಿಕ್ಷಿಸಿದರೆ, ಸೆಕ್ಷನ್ 8 ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಆಕರ್ಷಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.

ನ್ಯಾಯಾಲಯದ ಪ್ರಕಾರ, ವೈಯಕ್ತಿಕ ವೇಶ್ಯಾವೃತ್ತಿಯನ್ನು ನೇರವಾಗಿ ತಡೆಯುವುದು ಉದ್ದೇಶವಲ್ಲದಿದ್ದರೂ, ಸಾರ್ವಜನಿಕ ಸಭ್ಯತೆ ಮತ್ತು ಸಾಮಾಜಿಕ ನೈತಿಕತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳು ಕಂಡುಬಂದರೆ ಅದನ್ನು ತಡೆಯಬೇಕಾಗುತ್ತದೆ. ಆದರೆ, ವೇಶ್ಯಾವೃತ್ತಿಯನ್ನು ಸಂಪೂರ್ಣವಾಗಿ ಅಪರಾಧವೆಂದು ಪರಿಗಣಿಸಲು ಅಥವಾ ಯಾವುದೇ ನಿಯಂತ್ರಣವಿಲ್ಲದೆ ಬಿಟ್ಟುಬಿಡಲು ನ್ಯಾಯಾಲಯ ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ‘ವೇಶ್ಯಾಗೃಹ’ದ ವ್ಯಾಖ್ಯಾನವನ್ನು ಪರಿಶೀಲಿಸಿದ ಪೀಠವು ಮಹತ್ವದ ಸ್ಪಷ್ಟೀಕರಣ ನೀಡಿದೆ. “ಒಬ್ಬಂಟಿ ಮಹಿಳೆಯು ತನ್ನ ಸ್ವಂತ ಜೀವನೋಪಾಯಕ್ಕಾಗಿ, ಬೇರೆ ಯಾವುದೇ ಲೈಂಗಿಕ ಕಾರ್ಯಕರ್ತೆ ಅಥವಾ ಬೇರೆ ಯಾವುದೇ ವ್ಯಕ್ತಿಯ ಹಸ್ತಕ್ಷೇಪ ಹಾಗೂ ನಿರ್ವಹಣೆ ಇಲ್ಲದೆ ತನ್ನದೇ ಆದ ನಿವಾಸದಲ್ಲಿ ವೇಶ್ಯಾವೃತ್ತಿಯನ್ನು ನಡೆಸುತ್ತಿದ್ದರೆ, ಅಂತಹ ನಿವಾಸವನ್ನು ‘ವೇಶ್ಯಾಗೃಹ’ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಪೀಠವು ಸ್ಪಷ್ಟವಾಗಿ ಉಲ್ಲೇಖಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...