ರಜತ್ ಪಾಟೀದಾರ್: ಬದಲಿ ಆಟಗಾರನಾಗಿ ಬಂದು ಆರ್‌ಸಿಬಿ ಹಣೆಬರಹ ಬದಲಿಸಿದ ನಾಯಕ

Date:

ಸರಿಸುಮಾರು ಎರಡು ದಶಕಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಕಾಡುತ್ತಿದ್ದ ನಿರಾಸೆಯನ್ನು ದೂರ ಮಾಡಿ, ತಂಡದ ಹಣೆಬರಹವನ್ನೇ ಬದಲಿಸಿದ ಶ್ರೇಯಸ್ಸು ನಾಯಕ ರಜತ್ ಪಾಟೀದಾರ್ ಅವರಿಗೆ ಸಲ್ಲುತ್ತದೆ. ಫ್ರಾಂಚೈಸಿ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳೆನಿಸಿಕೊಳ್ಳುವ ಯಾವ ಲಕ್ಷಣಗಳೂ ಇಲ್ಲದ, ಸದಾ ಮೃದುಸ್ವಭಾವದ ಪಾಟೀದಾರ್ ನಾಯಕತ್ವದಲ್ಲಿ ಕೊನೆಗೂ ‘ಈ ಸಲ ಕಪ್ ನಮ್ದು’ ಎಂಬ ಕನಸು 2025ರಲ್ಲಿ ನನಸಾಯಿತು. ಹರಾಜಿನಲ್ಲಿ ಬಿಕಾರಿಯಾಗದೆ ಉಳಿದಿದ್ದ ಆಟಗಾರನೊಬ್ಬ, ಗಾಯಾಳು ಆಟಗಾರನ ಬದಲಿಗನಾಗಿ ತಂಡ ಸೇರಿ, ಇಂದು ಆರ್‌ಸಿಬಿಗೆ ಸತತ ಎರಡನೇ ಟ್ರೋಫಿ ತಂದುಕೊಡುವ ಹೊಸ್ತಿಲಿನಲ್ಲಿ ನಿಂತಿರುವ ಪಯಣ ನಿಜಕ್ಕೂ ಸ್ಫೂರ್ತಿದಾಯಕ.

- Advertisement -

2021ರ ಐಪಿಎಲ್ ಮಿನಿ ಹರಾಜಿನಲ್ಲಿ ಕೇವಲ 20 ಲಕ್ಷ ರೂ. ಮೂಲಬೆಲೆಗೆ ಆರ್‌ಸಿಬಿ ಪಾಲಾಗಿದ್ದ ಪಾಟೀದಾರ್‌ಗೆ ಮೊದಲ ಆವೃತ್ತಿಯಲ್ಲಿ ಸಿಕ್ಕಿದ್ದು 4 ಅವಕಾಶಗಳು ಮಾತ್ರ. ಅದರಲ್ಲಿ ಅವರು ಕಲೆಹಾಕಿದ್ದು ಕೇವಲ 71 ರನ್. ಈ ಕಳಪೆ ನಿರ್ವಹಣೆಯಿಂದಾಗಿ 2022ರ ಮೆಗಾ ಹರಾಜಿಗೂ ಮುನ್ನ ಅವರನ್ನು ಫ್ರಾಂಚೈಸಿ ಕೈಬಿಟ್ಟಿತ್ತು; ಹರಾಜಿನಲ್ಲೂ ಅವರು ಬಿಕಾರಿಯಾಗದೆ ಉಳಿದರು. ತೀವ್ರ ನಿರಾಸೆಗೊಂಡು 2022ರ ಮೇ ತಿಂಗಳಲ್ಲಿ ತಮ್ಮ ವಿವಾಹಕ್ಕೂ ದಿನಾಂಕ ನಿಗದಿಪಡಿಸಿದ್ದರು. ಆದರೆ, ಅದೇ ಆವೃತ್ತಿಯ ಮಧ್ಯಭಾಗದಲ್ಲಿ ಆರ್‌ಸಿಬಿ ವಿಕೆಟ್ ಕೀಪರ್ ಲುವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ, ಅಂದಿನ ಮುಖ್ಯ ಕೋಚ್ ಮೈಕ್ ಹೆಸನ್ ಪಾಟೀದಾರ್ ಅವರನ್ನು ಬದಲಿ ಆಟಗಾರನಾಗಿ ಕರೆದರು. ಆರಂಭದಲ್ಲಿ ಬೆಂಚ್ ಕಾಯಬೇಕಾಗುತ್ತದೆ ಎಂಬ ಆತಂಕದಿಂದ ಹಿಂದೇಟು ಹಾಕಿದ್ದ ಪಾಟೀದಾರ್, ಅಂತಿಮವಾಗಿ ಕುಟುಂಬದವರ ಒತ್ತಾಯದ ಮೇರೆಗೆ ತಂಡ ಸೇರಿಕೊಂಡರು. ಆ ಆವೃತ್ತಿಯ 8 ಪಂದ್ಯಗಳಲ್ಲಿ 333 ರನ್ ಸಿಡಿಸಿದ ಅವರು, ಲಖನೌ ಸೂಪರ್ ಜೈಂಟ್ಸ್ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಚಚ್ಚಿ ಐತಿಹಾಸಿಕ ಸಾಧನೆ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಉತ್ತಮ ಲಯದಲ್ಲಿದ್ದ ಪಾಟೀದಾರ್ ಅವರಿಗೆ ಹಿಮ್ಮಡಿ ಗಾಯದ ಸಮಸ್ಯೆಯು 2023ರ ಇಡೀ ಐಪಿಎಲ್ ಆವೃತ್ತಿಯಿಂದಲೇ ಹೊರಗುಳಿಯುವಂತೆ ಮಾಡಿತು. ಆದರೆ, ಛಲ ಬಿಡದೆ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿ, ಭಾರತ ತಂಡದ ಪರ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. 2025ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿಗೆ ನಾಯಕನ ಕೊರತೆ ಎದುರಾಗಿತ್ತು; ಫಾಫ್ ಡು ಪ್ಲೆಸಿಸ್ ತಂಡ ತೊರೆದಿದ್ದರು ಮತ್ತು ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲು ನಿರಾಕರಿಸಿದ್ದರು. ಆ ವೇಳೆ ದಿಗ್ಗಜ ಆಟಗಾರರ ಮೊರೆ ಹೋಗುವ ಬದಲು, 11 ಕೋಟಿ ರೂ. ನೀಡಿ ಪಾಟೀದಾರ್ ಅವರನ್ನು ಉಳಿಸಿಕೊಂಡ ಫ್ರಾಂಚೈಸಿ, ಅವರ ಹೆಗಲಿಗೆ ನಾಯಕತ್ವದ ಹೊಣೆ ನೀಡಿತು. ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಹಾಗೂ ಮುಖ್ಯ ಕೋಚ್ ಆಂಡಿ ಫ್ಲವರ್ ಜೊತೆಗೂಡಿದ ಪಾಟೀದಾರ್, ಕೇವಲ ಸ್ಟಾರ್ ಆಟಗಾರರನ್ನು ಅವಲಂಬಿಸಿದ್ದ ತಂಡವನ್ನು ಸಂಪೂರ್ಣವಾಗಿ ಬದಲಾಯಿಸಿದರು. ಅದರ ಫಲವಾಗಿ 2025ರಲ್ಲಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು.

ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು

ಈ ಬಾರಿಯ (2026) ಐಪಿಎಲ್ ಆವೃತ್ತಿಯಲ್ಲೂ ರಜತ್ ಪಾಟೀದಾರ್ ನಾಯಕನಾಗಿ ಹಾಗೂ ಸ್ಪೋಟಕ ಬ್ಯಾಟರ್ ಆಗಿ ಮತ್ತಷ್ಟು ಮಿಂಚಿದ್ದಾರೆ. ಇದುವರೆಗೆ ಆಡಿರುವ 14 ಪಂದ್ಯಗಳಲ್ಲಿ ಬರೋಬ್ಬರಿ 41 ಸಿಕ್ಸರ್‌ಗಳ ನೆರವಿನಿಂದ 486 ರನ್ ಕಲೆಹಾಕಿದ್ದು, ಇದು ಐಪಿಎಲ್ ಆವೃತ್ತಿಯೊಂದರಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸುವ ಮೂಲಕ ನಾಯಕತ್ವದ ಶ್ರೇಷ್ಠ ಇನಿಂಗ್ಸ್ ಆಡಿದರು. ಅವರ ಈ ಆಟದ ನೆರವಿನಿಂದ ಆರ್‌ಸಿಬಿ 92 ರನ್‌ಗಳ ಬೃಹತ್ ಗೆಲುವು ಸಾಧಿಸಿ ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಒಂದು ಕಾಲದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಈ ಬದಲಿ ಆಟಗಾರ, ಇಂದು ಗುಜರಾತ್ ಟೈಟನ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಟ್ರೋಫಿ ಗೆದ್ದ ಎಂ.ಎಸ್. ಧೋನಿ ಹಾಗೂ ರೋಹಿತ್ ಶರ್ಮಾ ಅವರಂತಹ ದಿಗ್ಗಜ ನಾಯಕರ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಅವರ ಶಾಂತ ಸ್ವಭಾವ, ಚಾಣಾಕ್ಷ ಬೌಲರ್ ನಿರ್ವಹಣೆ ಮತ್ತು ನಿಖರವಾದ ಫೀಲ್ಡಿಂಗ್ ನಿಯೋಜನೆಗಳು ಆರ್‌ಸಿಬಿಯ ಯಶಸ್ಸಿನ ಪ್ರಮುಖ ಅಸ್ತ್ರಗಳಾಗಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2 ರೂ.ಗಾಗಿ ಆಸೆಪಟ್ಟ ಹೋಟೆಲ್‌ಗೆ 1 ಲಕ್ಷ ರೂ. ದಂಡ!

ಮುದ್ರಿತ ‘ಗರಿಷ್ಠ ಚಿಲ್ಲರೆ ಬೆಲೆ’ಗಿಂತ (MRP) 2 ರೂಪಾಯಿ ಹೆಚ್ಚುವರಿ ವಸೂಲಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ ದೇಸೀ ತಳಿಗಳನ್ನು ಉಳಿಸಲು ಬದುಕನ್ನೇ ಮುಡಿಪಿಟ್ಟ ‘ಬೀಜಗಳ ಕಾವಲುಗಾರ’!

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ...

ವಿಜಯಪುರ | SIR ರದ್ದತಿಗೆ ಆಗ್ರಹಿಸಿ CPIMನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ವಿಜಯಪುರದಲ್ಲಿ ಯುವಕನ ಬರ್ಬರ ಹತ್ಯೆ; ಇಬ್ಬರು ಆರೋಪಿಗಳು ವಶಕ್ಕೆ

ವಿಜಯಪುರ ನಗರದಲ್ಲಿ ಬೆಳಗಿನ ಜಾವ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಲ್ತಾಪ್...